logo

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025

*ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025*



ಕರ್ನಾಟಕ ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು 22/9/2025 ರಿಂದ 7/10/2025 ತನಕ ನಡೆಸುವ ಮುಖಾಂತರ ಸಮಗ್ರ ಅಂಕಿಅಂಶಗಳನ್ನು ಸಂಗ್ರಹಿಸುವ ಯೋಜನೆ ಹಮ್ಮಿಕೊಂಡಿದೆ.

ಇದರ ಪೂರ್ವಭಾವಿಯಾಗಿ ಮನೆಗಳನ್ನು ಗುರುತಿಸಿ ಸಮೀಕ್ಷೆಗೆ ಸಹಕಾರಿ ಆಗುವಂತೆ ಮನೆ ಪಟ್ಟಿ ತಯಾರಿಸಲು ವಿಧ್ಯುತ್ ಇಲಾಖೆಯ ಮೀಟರ್ ರೀಡರ್ ಗಳು, ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಮನೆಯ ಲೊಕೇಷ್ ಅನ್ನು ಗುರುತಿಸಿ ಮನೆಪಟ್ಟಿಯನ್ನು ತಯಾರಿಸಿ Geo Tag ಮಾಡಿ ಸರ್ಕಾರದ ಅಧಿಕೃತ ಸ್ಟಿಕ್ಕರನ್ನು ಅಂಟಿಸುತ್ತಾರೆ. ಈ ಸಂದರ್ಭದಲ್ಲಿ ಮನೆಯವರು ಅವರೊಂದಿಗೆ ಸಹಕರಿಸಬೇಕಾಗಿದೆ.( ಈ ಸ್ಟಿಕರ್ ಅನ್ನು ಗಣತಿ ಮುಗಿಯುವವರೆಗೆ ತೆಗೆಯಬಾರದು )

ಮುಂದಕ್ಕೆ 22/9/2025 ರಿಂದ ಪ್ರಾರಂಭವಾಗುವ ಸಮೀಕ್ಷೆ ಗೆ ಸರಕಾರಿ ಅಧಿಕಾರಿಗಳು/ಶಿಕ್ಷಕರು ಬಂದು ಅಪ್ಲೋಡ್ ಆದ ಮನೆಪಟ್ಟಿ ಆಧರಿಸಿ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ.ಪ್ರತೀಯೋರ್ವ ಅಧಿಕಾರಿಗೆ/ಶಿಕ್ಷಕರು ನೂರಾ ಐವತ್ತು ಮನೆಗಳ ಒಂದೊಂದು ಬ್ಲಾಕ್ ವಿಂಗಡಿಸಿ ಸಮೀಕ್ಷೆ ನಡೆಸುತ್ತಾರೆ. ಈ ಸಂದರ್ಭದಲ್ಲೂ ಸಾರ್ವಜನಿಕರು ನಿಮ್ಮ ಧರ್ಮ-ಜಾತಿ-ಉಪಜಾತಿ,ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಪ್ರಾತಿನಿಧ್ಯ ಮತ್ತುಆರ್ಥಿಕ ಸ್ಥಿತಿಗಳ ಬಗ್ಗೆ ಸ್ವಷ್ಟ ಮಾಹಿತಿ ನೀಡಿ ಸಹಕರಿಸಬೇಕಾಗಿ ವಿನಂತಿ.

0
77 views