logo

ಆಕಾಶ್ ಸಮೂಹ ಸಂಸ್ಥೆಯಲ್ಲಿ ವಿಜೃಂಭಣೆಯ ಗಣೇಶೋತ್ಸವ

'ಗಣೇಶೋತ್ಸವ ಎಲ್ಲರನ್ನೂ ಒಗ್ಗೂಡಿಸುವ ಹಬ್ಬ'

ದೇವನಹಳ್ಳಿ: ಗಣೇಶೋತ್ಸವದಿಂದ ಯುವಕರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಒಗ್ಗಟ್ಟಿನ ಮಂತ್ರ ಹಾಗೂ ಭಾವೈಕ್ಯತೆಯ ಸಂದೇಶ ಬಿತ್ತುವ ಕಾರ್ಯವಾಗುತ್ತಿದೆ ಎಂದು ಆಕಾಶ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಮುನಿರಾಜು ತಿಳಿಸಿದರು.

ದೇವನಹಳ್ಳಿ ಪಟ್ಟಣದ ಪ್ರಸನ್ನಹಳ್ಳಿ ರಸ್ತೆಯಲ್ಲಿ ಆಕಾಶ್ ಇಂಟರ್ ನ್ಯಾಷನಲ್ ಶಾಲಾವರಣದಲ್ಲಿ ಗಣೇಶೋತ್ಸವ ಮತ್ತು ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿ ವಿದ್ಯಾರ್ಥಿಗಳಿಗೆ ವಿನಾಯಕ ಸ್ವಾಮಿಯು ವಿದ್ಯೆ, ಬುದ್ದಿ ನೀಡಿ ಅವರ ಜೀವನ ಮಟ್ಟವನ್ನು ಸುಧಾರಿಸುವಂತಾಗಲಿ. ಉನ್ನತ ಸ್ಥಾನಮಾನ ಸಿಗುವಂತಾಗಲಿ. ಶಾಂತಿ, ನೆಮ್ಮದಿ, ಸುಖ-ಶಾಂತಿ ನೆಲೆಸುವಂತೆ ಆಗಲಿ ಎಂದು ವಿಘ್ನ ವಿನಾಯಕ ಕೇಳಿಕೊಳ್ಳುತ್ತೇವೆ ಎಂದು ಪ್ರಾರ್ಥಿಸಿದರು.

ಪ್ರತಿ ಜನರ ನಿರ್ವಿಘ್ನವಾಗಿ ಅವರ ಕೆಲಸ ಕಾರ್ಯಗಳು ನಡೆಯುವಂತೆ ಆಗಲಿ. ಗಣೇಶನ ಕೃಪೆಯಿಂದ ಸರಿಯಾದ ಸಮಯಕ್ಕೆ ಮಳೆ ಬಂದು ಎಲ್ಲಾ ರೀತಿಯ ಅನುಕೂಲ ಮಾಡಿಕೊಡಬೇಕೆಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಗಣಪತಿಯಲ್ಲಿ ಕೇಳಿಕೊಳ್ಳುವುದೇನೆಂದರೆ ಕಾಲ ಕಾಲಕ್ಕೆ ಮಳೆ ಬೆಳೆಯಾಗಿ ರೈತರು ಸುಖ ಸಮೃದ್ಧಿಯ ಜೀವನ ಸಾಗಿಸುವಂತೆ ಆಗಲೆಂದು ಪ್ರಾರ್ಥಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಸ್ವಾತಂತ್ರೋತ್ಸವ ಸಂಗ್ರಾಮದಲ್ಲಿ ಬಾಲಗಂಗಾ ಧರ ತಿಲಕ್ ಸ್ವಾತಂತ್ರ್ಯ ಪ್ರೇಮಿಗಳನ್ನು ಒಗ್ಗೂಡಿಸಲು ಗಣೇಶೋತ್ಸವಕ್ಕೆ ಚಾಲನೆ ನೀಡಿದರೆ ಇದು ಒಡೆದ ಮನಸ್ಸುಗಳನ್ನು ಒಗ್ಗೂಡಿಸಲು ಸಹಕಾರಿ ಆಗಿದೆ. ವಿಘ್ನ ನಿವಾರಕ ಶ್ರೀ ಗಣೇಶನ ನನ್ನು ದೇವನಹಳ್ಳಿ ಪಟ್ಟಣದ ಆಕಾಶ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಹೂವಿನ ಪಲ್ಲಕ್ಕಿಯಲ್ಲಿ ಗಣೇಶ ಮೂರ್ತಿಯನ್ನು ಮೆರವಣಿಗೆ ಮಾಡುತ್ತಿರುವುದು. ಎಲ್ಲರಿಗೂ ಒಳಿತು ಮಾಡಿ ಆಶೀರ್ವದಿಸುವ ದೇವರಾಗಿದ್ದಾನೆ ಎಂದು ಹೇಳಿದರು.

ಆಕಾಶ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ
ಪುಷ್ಪ ಮುನಿರಾಜು, ಉಪಾಧ್ಯಕ್ಷ ಅಮರ್ ಗೌಡ, ನಿರ್ದೇಶಕ ಆಕಾಶ್, ಆಕೃತಿ ಅಮರ್‌ಗೌಡ, ಕೀರ್ತನ ಆಕಾಶ್, ವೈದ್ಯಕೀಯ ಆಡಳಿತ ಅಧಿಕಾರಿ ಡಾ.ಬ್ರಿಜೇಶ್, ಸಿಬ್ಬಂದಿ ಸಂದೀಪ್, ಶಾಲಾ ಆಡಳಿತ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಶಾಲಾ ಪ್ರಾಂಶುಪಾಲರು ಇದ್ದರು.

7
1343 views