logo

ಅಲೆಮಾರಿ ಸಮುದಾಯಕ್ಕೂ 1% ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ.

ಕಳೆದ ಒಂದು ವಾರದಿಂದ ಅಲೆಮಾರಿ ಸಮುದಾಯದವರು ಬೆಂಗಳೂರಿನ ಪ್ರಿಡಂ ಪಾರ್ಕಿನಲ್ಲಿ ಮಳೆ, ಚಳಿ, ಬಿಸಿಲು ಎನ್ನದೆ ತಮ್ಮ ನ್ಯಾಯಯುತ ಬೇಡಿಕೆಗಾಗಿ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ಕಾರ 1% ಮೀಸಲಾತಿ ಕೊಡಲೆಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.

ಅಲೆಮಾರಿ ಸಮುದಾಯದ ಈ ನ್ಯಾಯಯುತ ಬೇಡಿಕೆಯನ್ನು ಈಡೇರಿಸಲು ಕಾಂಗ್ರೇಸ್ ಪಕ್ಷದ ನೇತೃತ್ವದ ಸರ್ಕಾರ ಹಿಂದೇಟು ಹಾಕುತ್ತಿದೆ. ಬಹಳ ದಿನಗಳಿಂದಲೂ ದಲಿತ ಎಡಗೈಯವರಿಗೆ ಅನ್ಯಾಯವಾಗುತ್ತಿದೇ ಮೀಸಲಾತಿಯ ಬಹುಪಾಲು ದಲಿತ ಬಲಗೈ ಸಮುದಾಯಕ್ಕೆ ದಕ್ಕುತ್ತಿವೆ ಎಂದು, ಈ ಅನ್ಯಾಯವನ್ನು ಸರಿಪಡಿಸಬೇಕೆಂದು ಸಾಕಷ್ಟು ಹೋರಾಟವನ್ನು ದಲಿತ ಎಡಗೈ ಸಮುದಾಯವು ರಾಜ್ಯದ್ಯಂತ ಮಾಡುತ್ತಿದ್ದರು, ಅವರ ಹೋರಾಟಕ್ಕೆ ಮಣಿದ ಸರ್ಕಾರ ನಾಗಮೋಹನ ದಾಸ ಅವರ ನೇತೃತ್ವದಲ್ಲಿ ಒಂದು ಆಯೋಗವನ್ನು ನೇಮಿಸಿ, ಎಲ್ಲಾ ರೀತಿಯ ಅಧ್ಯಯನ ನಡೆಸಿ ವರದಿಯನ್ನು ನೀಡಿತು, ಆ ವರದಿಯ ಪ್ರಕಾರ ಅಲೆಮಾರಿ ಜನಾಂಗದವರಿಗೆ 1% ಮೀಸಲಾತಿಯನ್ನು ಕೊಡಬೇಕು ಎಂದು ಶಿಫಾರಸ್ಸು ಮಾಡಿತು. ಆದರೆ ಸರ್ಕಾರ ಇದನ್ನು ಸಂಪೂರ್ಣವಾಗಿ ಕಡೆಗಣಿಸಿ ಅಲೆಮಾರಿ ಜನಾಂಗದವರ ಅಭಿವೃದ್ಧಿಗೆ ಬರೆ ಎಳೆಯಿತು.
ನೆಲೆಯಿಲ್ಲದೇ ಅಲೆದಾಡುವವರ ಬದುಕಿಗೆ ಭವಿಷ್ಯದಲ್ಲಿ ಭದ್ರವಾದ ನೆಲೆ ಕಲ್ಪಿಸಲು ಅವರ ಹೋರಾಟ ನ್ಯಾಯತವಾಗಿದೆ ಇದನ್ನು ಎಲ್ಲರು ಬೆಂಬಲಿಸಿ ಸರ್ಕಾರದಿಂದ 1% ಮೀಸಲಾತಿಯನ್ನು ಕೋಡಿಸಬೇಕು. ಅಲೆಮಾರಿ ಸಮುದಾಯದವರು ನಿಜಕ್ಕೂ ಸಮಾಜದಿಂದ ಸರ್ಕಾರದಿಂದ ಕಡೆಗಣಗೆ ಒಳಗಾಗಿದ್ದಾರೆ. ಒಂದು ಕಡೆ ನೆಲೆನಿಲ್ಲದೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಸದಾ ಊರಿಂದ ಊರಿಗೆ ಅಳೆಯುತ್ತಿರುತ್ತಾರೆ. ಕರ್ನಾಟಕದಲ್ಲಿ ಸುಮಾರು 30 ರಿಂದ 40 ಲಕ್ಷ ಜನಸಂಖ್ಯೆ ಹೊಂದಿದ ಈ ಸಮುದಾಯದ ನೋವಿನ ಕೂಗು ಇನ್ನು ಸರ್ಕಾರದ ಕಿವಿಗೆ ಮುಟ್ಟಿಲ್ಲ. ನಿರಂತರ ಹಗಲುರಾತ್ರಿ ಎನ್ನದೆ ತಮ್ಮ ಹಕ್ಕನ್ನು ಪಡೆಯಲು ಹೋರಾಟ ಮಾಡುತ್ತಿದ್ದಾರೆ ಅವರ ಹೋರಾಟಕ್ಕೆ ಜನಬೆಂಬಲ ದೊರೆತು, ಸರ್ಕಾರ ಆದಷ್ಟು ಬೇಗ ಆ ಹಿಂದುಳಿದ ಅಲೆಮಾರಿ ಸಮುದಾಯಕ್ಕೆ 1% ಮೀಸಲಾತಿಯನ್ನು ಕೊಡಬೇಕು. ಮೀಸಲಾತಿಯಿಂದ ಬಲಿತ ದಲಿತ ಸಮುದಾಯಗಳು ಇವರಿಗೆ ಬೆಂಬಲಿಸಬೇಕು ಮೀಸಲಾತಿ ದುರುಪಯೋಗವನ್ನು ತಡೆಗಟ್ಟಿ ಅರ್ಹರ ಸಮುದಾಯಕ್ಕೆ ಮೀಸಲಾತಿ ದೊರಕುವಂತೆ ಮಾಡಬೇಕು, ಅಂಭೆಡ್ಕರರ ಆಶಯವನ್ನು ಈಡೇರಿಸಬೇಕು.

ಅಲೆಮಾರಿ ಸಮುದಾಯದ ವರ ಹೋರಾಟಕ್ಕೆ ಜಯವಾಗಲಿ.

0
99 views