logo

ಚಿಕ್ಕಬಳ್ಳಾಪುರದಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಅನುಷ್ಠಾನ ಮತ್ತು ಕಾರ್ಯಗಾರ ಸ್ಥಾನ ಮತ್ತು ಕಾರ್ಯಗಾರ

ಚಿಕ್ಕಬಳ್ಳಾಪುರ ದ ಜಿಲ್ಲಾಡಳಿತ ಭವನದಲ್ಲಿ ಪಂಚ ಗ್ಯಾರಂಟಿಗಳ ಯೋಜನೆ ಅನುಷ್ಠಾನ ಮತ್ತು ಕಾರ್ಯಗಾರವನ್ನು ಆಯೋಜಿಸಲಾಗಿತ್ತು
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾಪೂರ್ವ ರಾಜ್ಯದ ಜನತೆಗೆ ವಾಗ್ದಾನ ನೀಡಿದಂತೆ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನಾ ಪ್ರಾಧಿಕಾರದ ರಾಜ್ಯಾಧ್ಯಕ್ಷ ಹೆಚ್ ಎಂ ರೇವಣ್ಣ ತಿಳಿಸಿದರು.
ರಾಜ್ಯದ ಏಳು ಕೋಟಿ ಜನತೆ ರಾಜ್ಯ ಸರ್ಕಾರ ನೀಡಿದ ಐದು ಗ್ಯಾರಂಟಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು ಎಲ್ಲಾ ಫಲಾನುಭವಿಗಳು ಈ ಐದು ಗ್ಯಾರಂಟಿ ಗಳಿಂದಾಗಿ ಬಹಳ ಸಂತೋಷದಿಂದ ಹಾಗೂ ಗೌರವಹಿತವಾಗಿ ಸ್ವೀಕರಿಸಿದ್ದಾರೆ ಎಂದರು.
ಶ್ರೀಮತಿ ಇಂದಿರಾ ಗಾಂಧಿಯವರು ದೇಶವನ್ನು ಆಡಳಿತ ನಡೆಸಿದ ಕಾಲದಲ್ಲಿ 20 ಅಂಶ ಗಳ ಕಾರ್ಯಕ್ರಮವನ್ನು ನೀಡಿ ಭಾರತವನ್ನು ಸದೃಢ ಭಾರತವನ್ನಾಗಿ ಮಾರ್ಪಡಿಸಿದ್ದರು.
ನಂತರದಲ್ಲಿ ದೇವರಾಜ್ ಅರಸ್ ರವರು 20 ಅಂಶ ಗಳ ಕಾರ್ಯಕ್ರಮವನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರು. ರಾಜ್ಯದಲ್ಲಿ ಆಡಳಿತ ನಡೆಸಿದ್ದ ಮಾಜಿ ಮುಖ್ಯಮಂತ್ರಿ ಡಾ. ಎಂ ವೀರಪ್ಪ ಮೈಲಿ ರವರು ಸಿಇಟಿ ತರುವ ಮೂಲಕ ವಿದ್ಯಾ ಕ್ರಾಂತಿ ನಡೆಸಿದರು. ನಂತರದ ಮುಖ್ಯಮಂತ್ರಿಗಳಾದ ಎಸ್ಎಮ್ ಕೃಷ್ಣ ರವರು ಐಟಿಬಿಟಿ ಅಭಿವೃದ್ಧಿ ಪಡಿಸಿದರು ಎಂದು ಕಾಂಗ್ರೆಸ್ ಪಕ್ಷದ ಸಾಧನೆಯನ್ನು ವಿವರಿಸಿದರು.
ಈಗ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದು ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರ ಆಗಿದೆ ಎಂದರು. ಉನ್ನತ ಶಿಕ್ಷಣ ಸಚಿವರಾದಂತಹ ಡಾ. ಎಂಸಿ ಸುಧಾಕರ್ ಅವರು ಮಾತನಾಡುತ್ತಾ ಕರ್ನಾಟಕ ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಬಡವರ ಪಾಲಿನ ಆಶಾಕಿರಣ ಈ ಪಂಚ ಗ್ಯಾರಂಟಿಗಳು ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನಾ ಸಮಿತಿ ರಾಜ್ಯ ಉಪಾಧ್ಯಕ್ಷ ಸೂರಜ್ ಎಂ. ಎನ್. ಹೆಗ್ಗಡೆ ಜಿಲ್ಲಾ ಉಸ್ತುವಾರಿ ಸಚಿವ
ಡಾ. ಎಂ. ಸಿ. ಸುಧಾಕರ್, ಉಪಾಧ್ಯಕ್ಷರು ಪುಷ್ಪ ಅಮರನಾಥ್, ಎಸ್. ಆರ್ ಪಾಟೀಲ್, ದಿನೇಶ್ ಗೂಳಿಗೌಡ
ಯಲುವಳ್ಳಿ ಎನ್.ರಮೇಶ್, ಕೆ ಎಂ ಕೇಶವರೆಡ್ಡಿ ಉಸ್ತುವಾರಿ ಕಾರ್ಯದರ್ಶಿ ಡಾ ಮಂಜುಳಾ, ಪೊಲೀಸ್ ವರಿಷ್ಟಧಿಕಾರಿ ಕುಶಲ್ ಚೌಕ್ಸೆ, ಶಾಸಕರಾದ ರಾಜು, ಕೃಷ್ಣಪ್ಪ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ಹಾಧಿಕಾರಿ ನವೀನ್ ವೈ ಭಟ್, ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಮತ್ತೆ ಇತರರು ಹಾಜರಿದ್ದರು.

8
85 views