logo

ವಿಜಯಪುರ | ಚಡಚಣ |ಮಹಾದೇವ ಸಾಹುಕಾರ್ ಬೈರಗೊಂಡನ ಆಪ್ತನನ್ನು ಗುಂಡು ಹಾರಿಸಿ ಬರ್ಬರ ಹತ್ಯೆ!

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಭೀಮನಗೌಡ ಬಿರಾದರ(40) ಅವರನ್ನು ಪಿಸ್ತುಲಿನಿಂದ ಗುಂಡು ಹಾರಿಸಿ ಕೊಲೆಮಾಡಿದ್ದಾರೆ.

ಎಸ್ ವೀಕ್ಷಕರೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೆ ಗ್ರಾಮದ ವಾಸಿಂ ಮಣಿಯಾರ, ಮೌಲಸಾಬ ಬೋರಗಿ, ಫಿರೋಜ್ ಶೇಖ್ ಅವರಾದ, ರಝೆವುಲ್ಲಾ ಮಕಂದರ್ ಎಂಬ ದುಸ್ಕರ್ಮಿಗಳನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
2023 ರ ರಲ್ಲಿ ಗ್ರಾಮದ ಪಿ ಡಿ ಓ ರಾಠೋಡ್ ಎಂಬುವವರೊಂದಿಗೆ ಆರೋಪಿಗಳು ಕೆಲಸದ ವಿಷಯಕ್ಕೆ ಜಗಳ ಮಾಡಿದ್ದರು. ಈ ವೇಳೆ ಆರೋಪಿಗಳ ವಿರುದ್ಧ ಜಾತಿ ನಿಂದನೆ ಕೆಸ ದಾಖಲಾಗಿತ್ತು. ಆದ್ದರಿಂದ ಈ ಪ್ರಕರಣದಲ್ಲಿ ಜಾಕಿರ್ ಮನಿಯಾರ್ ಜೈಲಿಗೆ ಹೋಗಿ ಬಂದಿದ್ದರು. ಈ ಪ್ರಕರಣದಲ್ಲಿ ಭೀಮನಗೌಡ ಬಿರಾದಾರ್ ನ ಪಾತ್ರ ಇದೆ ಎಂದು ಆರೋಪಿಸಿ ಈ ಹಿಂದೆ ಗಲಾಟೆ ಮಾಡಿ, ಜೀವ ಬೆದರಿಕೆ ಹಾಕಿದ್ದರೂ ಎಂದು ಕೊಲೆಯಾದ ಭೀಮನಗೌಡ ಬಿರಾದಾರ್ ಅವರ ಪತ್ನಿ ರಾಜಶ್ರೀ ಬಿರಾದಾರ ದೂರು ನೀಡಿದ್ದಾರೆ' ಎಂದರು.
ಭೀಮನಗೌಡ ಬಿರಾದಾರ್ ಸ್ವಗ್ರಾಮ ಕಟಿಂಗ್ ಶಾಪ್ ವೊಂದರಲ್ಲಿ ಹೇರ್ ಕಟಿಂಗ್ ಮಾಡಿಸಲು ಹೋದಾಗ ಆರೋಪಿಗಳು ಅಂಗಡಿಗೆ ನುಗ್ಗಿ, ಕಣ್ಣಿಗೆ ಕಾರದ ಪುಡಿ ಎರಚಿ ನಂತರ ಮೂರ್ನಾಲ್ಕು ಸುತ್ತು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಇನ್ನೂ ದೇವರ ನಿಂಬರಗಿ ಗ್ರಾಮ ಪಂಚಾಯತಿ ಆಡಳಿತ 10 ವರ್ಷಗಳಿಂದ ಭೀಮನಗೌಡ ಬಿರಾದಾರ್ ಅವರ ಹಿಡಿತದಲ್ಲಿತ್ತು, ಅಷ್ಟೇ ಅಲ್ಲದೆ ಮುಂಬರುವ ಚುನಾವಣೆಯಲ್ಲೂ ಬಿರಾದಾರ್ ಬೆಂಬಲಿತರು ಅಧ್ಯಕ್ಷರಾಗುವ ಸಾಧ್ಯತೆ ಇತ್ತು. ಆದ್ದರಿಂದ ರಾಜಕೀಯ ವೈಷಮ್ಯಕ್ಕೆ ದುಸ್ಕರ್ಮಿಗಳು ಕೊಲೆ ಮಾಡಿದ್ದಾರೆ'ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

57
3824 views