logo

*ಹತ್ತಿ,ಹಣ್ಣು-ಹಂಪಲು ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡಿ ನಿರುಪಾದಿ ಕೆ ಗೋಮರ್ಸಿ ಆಗ್ರಹ.*

*ಹತ್ತಿ,ಹಣ್ಣು-ಹಂಪಲು ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡಿ ನಿರುಪಾದಿ ಕೆ ಗೋಮರ್ಸಿ ಆಗ್ರಹ.*

ಮುಂಗಾರಿನ ಆರಂಭದ ಅತಿಯಾದ ಮಳೆಯ ಪರಿಣಾಮದಿಂದಾಗಿ ಜಿಲ್ಲೆಯ ಸಾವಿರಾರು ಎಕ್ಕರೆ ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆದ ಮುಂಗಾರು ಹತ್ತಿ ಹಣ್ಣು-ಹಂಪಲು ಬೆಳೆಗಳು ಕೊಳೆತು ನಾಶವಾಗಿದ್ದು ಹಾಗೂ ಬೆಳೆಗಳಿಗೆ ಕೀಟಬಾಧೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಹೀಗಾಗಿ ರೈತರು ಕಂಗಾಲಾಗಿದ್ದಾರೆ.ಹತ್ತಿಯ ಬೆಳೆ ತೊಳೆ ಹೊಡೆದು ಬಿಡಿಸುವ ಸಂದರ್ಭದಲ್ಲಿಯೇ ಮಳೆಯ ಪರಿಣಾಮದಿಂದಾಗಿ ಬೆಳೆ ಸಂಪೂರ್ಣ ನಾಶವಾಗಿರುವ ಘಟನೆಯ ಚಿತ್ರಣಗಳು ಇತ್ತೀಚಿನ ವಿವಿಧ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಲ್ಲಿ ವರದಿಯಾಗಿದ್ದು ಲಕ್ಷಾಂತರ ರುಪಾಯಿ ಖರ್ಚು ವೆಚ್ಚದಲ್ಲಿ ಬೆಳೆದ ರೈತ ನಷ್ಟಕ್ಕೆ ಒಳಗಾಗಿದ್ದು ಕೂಡಲೇ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳು ಜಿಲ್ಲೆಯ ರೈತರ ಬೆಂಬಲಕ್ಕೆ ನಿಂತು ಬೆಳೆ ಹಾನಿ ಸಮೀಕ್ಷೆ ನಡೆಸಿ ಶೀಘ್ರವಾಗಿ ಪರಿಹಾರ ನೀಡಬೇಕೆಂದು ಕೆ ಆರ್ ಎಸ್ ಪಕ್ಷದ ರಾಜ್ಯ ರೈತ ಘಟಕದ ಕಾರ್ಯದರ್ಶಿ ನಿರುಪಾದಿ ಕೆ ಗೊಮರ್ಸಿ ಪತ್ರಿಕಾ ಹೇಳಿಕೆ ಮುಖಾಂತರ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

13
1445 views