ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅಜಯರೆಡ್ಡಿ ಯಲ್ಹೇರಿ ಅವಿರೋಧ ಆಯ್ಕೆ
ಗುರುಮಿಠಕಲ್ : ತಾಲೂಕಿನ ಗಣಪುರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅಜಯರೆಡ್ಡಿ ಶಿವರಾಯ ಯಲ್ಹೇರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಂಜನೇಯ ಗಣಪುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಅಜಯರೆಡ್ಡಿ ಯಲ್ಹೇರಿ ಅವರು ಗ್ರಾಮೀಣ ಭಾಗದ ಜನರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸದಸ್ಯತ್ವ ಪಡೆಯುವ ಹಾಗೂ ಸಂಘದ ಸಾಲ ಸೌಲಭ್ಯಗಳನ್ನು ಪಡೆಯುವ ಕುರಿತು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸದೃಢಗೊಳಿಸಲು ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಆಂಜನೇಯ ಗಣಪುರ,ಸದಸ್ಯರಾದ ಹಣಮರೆಡ್ಡಿ,ಬಸ್ಸಪ್ಪ ಹಳ್ಳಿ,ಮಲ್ಲುಗೌಡ ಹಳೆಮನಿ,ಸುಭಾಸಗೌಡ ಹಳೆಮನಿ,ರೈತ ಸಂಘದ ಮುಖಂಡ ಭೀಮರಾಯ,ಸಿದ್ದುಗೌಡ ಪೋ ಪಾ, ಇನ್ನಿತರ ಸದಸ್ಯರು ಗ್ರಾಮಸ್ಥರರಿದ್ದರು.