ರಾಜ್ಯ ಘಟಕ ಬೆಂಗಳೂರು ಇದರ ಸಂಸ್ಥಾಪಕ ಅಧ್ಯಕ್ಷರಾದ ಡಾ ಹುಲಿಕಲ್ ನಟರಾಜ್ ಅವರ ನೇತ್ರತ್ವದಲ್ಲಿ ರಾಜ್ಯದ ಆಯ್ದ ಶಾಲಾ ಕಾಲೇಜು ಮಕ್ಕಳಿಗೆ “ನಾನೂ ವಿಜ್ಞಾನಿ.” ಕಾರ್ಯಕ್ರಮದಲ್ಲಿ ಟೆಲೆಸ್ಕೋಪ (ದೂರದಶ೯ಕ ) ತಯಾರಿಸುವ
*ಸಪ್ಟೆಂಬರ 5 ಕೊನೆಯ ದಿನ*ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ರಾಜ್ಯ ಘಟಕ ಬೆಂಗಳೂರು ಇದರ ಸಂಸ್ಥಾಪಕ ಅಧ್ಯಕ್ಷರಾದ ಡಾ ಹುಲಿಕಲ್ ನಟರಾಜ್ ಅವರ ನೇತ್ರತ್ವದಲ್ಲಿ ರಾಜ್ಯದ ಆಯ್ದ ಶಾಲಾ ಕಾಲೇಜು ಮಕ್ಕಳಿಗೆ ದೊಡ್ಡಬಳ್ಳಾಪೂರದ ಬೆಸೆಂಟ್ ಪಾರ್ಕಿನಲ್ಲಿ “ನಾನೂ ವಿಜ್ಞಾನಿ.” ಕಾರ್ಯಕ್ರಮದಲ್ಲಿ ಟೆಲೆಸ್ಕೋಪ (ದೂರದಶ೯ಕ ) ತಯಾರಿಸುವ ತರಬೇತಿಯನ್ನು ದಿನಾಂಕ 01-10-2025 ರಿಂದ 09-10-2025 ರ ವರೆಗೆ ಏಪ೯ಡಿಸಿದ್ದಾರೆ. ರಾಜ್ಯದ ಇತಿಹಾಸದಲ್ಲಿಯೇ ಪ್ರಥಮವಾಗಿ "*ನಾನು ವಿಜ್ಞಾನಿ"* ಅಡಿಯಲ್ಲಿ ಸ್ಥಳದಲ್ಲಿಯೇ ಟೆಲಿಸ್ಕೋಪ ತಯಾರಿ ಮಾಡುವ ತರಬೇತಿ ರಾಜ್ಯದ 125 ವಿದ್ಯಾರ್ಥಿಗಳಿಂದ 125 ಟಿಲಿಸ್ಕೋಪ್ಗಳನ್ನು ತಯಾರಿಸಿ ಮಗುವಿನ ಮುಖಾಂತರ "*ಶಾಲೆಗೊಂದು ಟಿಲಿಸ್ಕೋಪ್"* ವಿತರಣೆ ಮಾಡುವ ಯೋಜನೆ ಇದೆ. ಟೆಲೆಸ್ಕೋಪ ತಯಾರಿಕೆಗೆ ಒಬ್ಬ ವಿದ್ಯಾರ್ಥಿಗೆ. ರೂ 15 ಸಾವಿರ ಖಚು೯ ಬರುತ್ತದೆ. ಅದನ್ನು ಶಾಲೆ ಅನುದಾನದಲ್ಲಿ ಅಥವಾ ಮಕ್ಕಳ ಪಾಲಕರು,ಇಲ್ಲವೇ ಧಾನಿಗಳಿಂದ ಪಡೆದು ನೀಡಬೇಕಾಗುತ್ತದೆ. ಟೆಲೆಸ್ಕೋಪ ಆಯಾ ಮಕ್ಕಳಿಗೆ ನೀಡಲಾಗುವದು.ವಿದ್ಯಾರ್ಥಿ ಮತ್ತು ಆಯ್ಕೆಗೊಂಡ ಶಾಲೆಯ ವಿಜ್ಞಾನ ಶಿಕ್ಷಕರಿಗೆ ಉಚಿತ ಊಟ ಮತ್ತು ವಸತಿ ಹಾಗೂ ಹಾಜರಾತಿ ನೀಡಲಾಗುತ್ತದೆ. ಬೆಳಗಾವಿ ಜಿಲ್ಲೆಯ ಅಥವಾ ಕಿತ್ತೂರು ಕನಾ೯ಟಕದ ಪ್ರೌಢ ಶಾಲೆಗಳ ಐಚ್ಚಿಕ ಮುಖ್ಯೋಪಾದ್ಯಾಯರು / ವಿಜ್ಞಾನ ಶಿಕ್ಷಕರು ಕನಾ೯ಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಆಡಳಿತ ಮಂಡಳಿ ಸದಸ್ಯರಾದ ಭಾರತ ಸೇವಾದಳ ಮಾಜಿ ದಳಪತಿ ಬಸವರಾಜ ಮ. ಹಟ್ಟಿಗೌಡರ , *ಘಟಪ್ರಭಾ* ತಾ.ಗೋಕಾಕ ಜಿಲ್ಲಾ ಬೆಳಗಾವಿ 9448441841/8123661841 ಇವರನ್ನು ಸಂಪಕಿ೯ಸಲು ಕೋರಿದ್ದಾರೆ.ನೋಂದಣಿಗೆ *ಸಪ್ಟೆಂಬರ 5 ಕೊನೆಯ ದಿನಾಂಕ ಇದೆ*