ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ -ಡಿಕೆಶಿವಕುಮಾರ ( DCM ಕರ್ನಾಟಕ ಸರ್ಕಾರ )
ನಿಜಕ್ಕೂ ಈ ಹೇಳಿಕೆ ಬಾಲಿಷ ಹಾಗೂ ಮೂರ್ಖತನದ ಪರಮಾವಧಿ ಎಂದರೆ ತಪ್ಪಾಗುವುದಿಲ್ಲ. ಜ್ಯಾತ್ಯಾತೀತ ಎನ್ನುವ ಸೋಗಿನ ಕನ್ನಡಕ ಹಾಕಿಕೊಂಡವರು ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು, ಹಾಗೂ ತಮ್ಮ ಸ್ವಾರ್ಥಧಿಕಾರದ ತೆವಲಿಗೆ ಹೇಳುವುದು. ಈ ಏನೋ ಒಂದು ಹೇಳಿಕೆಯೆಂದು ಉದಾಸಿನ ಮಾಡಬಾರದು ಮುಂದೆ ಇದೆ ನಿಜವಾದರೂ ಆಶ್ಚರ್ಯ ಪಡಬೇಕಾಗಿಲ್ಲ.
ಇವರ ಜ್ಯಾತ್ಯಾತೀತ ಸೋಗು ಹೇಗಿದೆ ಎಂದರೆ ಮಸೀದಿ ವಕ್ಪ ಆಸ್ತಿಗಳೇಲ್ಲಾ ಮುಸ್ಲಿಂ ಧರ್ಮದವರಿಗೆ ಸೇರಿದ್ದು, ಚರ್ಚ್ ಹಾಗೂ ಅವರ ಮಿಷಿನರಿ ನಡೆಸುವ ಶಾಲೆ ಆಸ್ಪತ್ರೆಗಳು ಕ್ರಿಶ್ಚಿಯನರಿಗೆ ಸೇರಿದ್ದು, ಬೌದ್ಧ ವಿಹಾರಗಳೆಲ್ಲ ಬೌದ್ಧರಿಗೆ, ಜೈನ ಬಸಿದಿಗಲೆಲ್ಲಾ ಜೈನರಿಗೆ, ಗುರುದ್ವಾರಗಳೆಲ್ಲಾ ಸಿಖ್ ಧರ್ಮದವರಿಗೆ ಸೇರಿದ್ದು ಆದರೆ ಹಿಂದೂಗಳ ಧಾರ್ಮಿಕ ಶ್ರದ್ದಾ ಕೇಂದ್ರಗಳು ಮಾತ್ರ ಹಿಂದುಗಳಿಗೆ ಸೇರಿದ್ದಲ್ಲ. ಇವರ ಎಡಬಿಡಂಗಿತನವನ್ನು ನಾವೆಲ್ಲಾ ಮೌನವಾಗಿ ಸಹಿಸಿಕೊಳ್ಳುವುದರಿಂದಲೇ ನಮ್ಮ ಶ್ರದ್ದಾ ಕೇಂದ್ರಗಳು ಮುಜರಾಯಿ ಇಲಾಖೆಗೆ ಸೇರಿವೆ. ಜ್ಯಾತ್ಯಾತೀತತೆ ಎನ್ನುವ ಶಬ್ದದ ಹಿಂದೆ ಇಲ್ಲಿಯ ಪರಂಪರೆಯನ್ನು ಹೊಸಕಿ ಹಾಕುವ ಬಹುದೊಡ್ಡ ಅಂತಾರಾಷ್ಟ್ರೀಯ ಮಟ್ಟದ ಸಂಚು ಇದೆ. ಇದನ್ನು ಅರಿಯದಿದ್ದರೆ ಮುಂದೆ ಎಲ್ಲವನ್ನು ನಾವು ಪುಸ್ತಕದಲ್ಲಿ ಓದಬೇಕಾಗುತ್ತದೆ ಇಲ್ಲಾ ಮ್ಯೂಸಿಯಂ ನಲ್ಲಿ ನೋಡಬೇಕಾಗುತ್ತದೆ. ಇದೊಂದು ಎಚ್ಚರಿಕೆ ಗಂಟೆ ಎಂದು ಭಾವಿಸಿ ಹಿಂದೂಗಳು ಜಾಗೃತರಾಗಬೇಕು.
ಇತಿಹಾಸದುದ್ದಕ್ಕೂ ಹಿಂದೂ ಧರ್ಮವನ್ನು ಹಿಯಾಳಿಸಿದ್ದು, ವಿರೋಧ ಮಾಡಿದ್ದು, ದ್ವೇಷಿಸಿದ್ದು ಹಿಂದೂಗಳೇ, ಕಾಲ ಕಾಲಕ್ಕೆ ಧರ್ಮ ದ್ರೋಹಿಗಳು, ಬರ್ತಾ ಇರ್ತಾರೆ, ಹೋಗ್ತಾ ಇರ್ತಾರೆ, ಹಿಂದೂ ಧರ್ಮ ಮಾತ್ರ ಸಾವಿರಾರು ವರ್ಷಗಳಿಂದ ಹಾಗೆಯೇ ಇದೆ, ಇರುತ್ತದೆ.ಆದರೂ ಸದಾ ಒಂದು ಎಚ್ಚರಿಕೆಯ, ಜಾಗೃತದ ಕಣ್ಣು ತೆರೆದಿರಬೇಕು.
ಡಿಕೆ ಶಿವಕುಮಾರ್ ಯಾರು ಎಲ್ಲಿಗೆ, ಯಾರನ್ನು ಯಾರು ತಡೆಯುತ್ತಾರೆ? ಎನ್ನೋ ಪಾಠ, ಮೆಜಾರಿಟಿ ಹಿಂದೂಗಳು ನಿಮ್ಮಿಂದ ತಿಳಿದುಕೊಳ್ಳಬೇಕಿಲ್ಲ. ಎಲ್ಲಾ ಧರ್ಮಗಳ ತಂದೆ ಹಿಂದೂಧರ್ಮ ಎಂದು ನಿಮಗೂ ಗೊತ್ತಿದೆ, ಮಸೀದಿಗೆ ದರ್ಗಾ ಗಳಿಗೆ ಅನ್ಯ ಧರ್ಮಿಯರು ಯಾರೂ ಹೋಗಲ್ಲ, ಹೋಗೋರೆಲ್ಲಾ ನಿಮ್ಮಂತಹ ಪೊಲಿಟಿಕಲ್ ಹಿಂದೂಗಳು, ಓಲೈಕೆಗೆ ಬೂಟ್ ನೆಕ್ಕೋರು, ಓಟಿಗಾಗಿ ಓಲೈಸುವವರು, ಚಾಮುಂಡೇಶ್ವರಿ ದರ್ಶನಕ್ಕೆ ಎಷ್ಟು ಜನ ಮುಸ್ಲಿಮರು ಹೋಗಿ ಪೂಜೆ ಸಲ್ಲಿಸುತ್ತಾರೆ? ಸಲ್ಲಿಸಿದ್ದಾರೆ? ಮೈಸೂರಿನ ತನ್ವಿರ್ ಸೇಠ್ ಎಷ್ಟು ಬಾರಿ ಚಾಮುಂಡಿ ಬೆಟ್ಟ ವರ್ಷದಲ್ಲಿ ಹತ್ತಿದ್ದಾರೆ? ಯಾವನೋ ಒಬ್ಬ ಇಬ್ಬರು ಕಾಟಾಚಾರಕ್ಕೆ ಸಿಎಂ ಗಳ ಜೊತೆ ಹೋಗಿರಬಹುದು, ಮಂತ್ರಿಯಾಗಿ ಸರಕಾರಿ ಕಾರ್ಯಕ್ರಮಕ್ಕೆ ಹೋಗಿರಬಹುದು.
ದಸರಾ ಹಬ್ಬ ಹಿಂದೂಗಳ ಧಾರ್ಮಿಕ ಪ್ರತೀಕವಾದ ಹಾಗೂ ತಾಯಿ ಚಾಮುಂಡೇಶ್ವರಿ ದೇವಿಯನ್ನು ಪೂಜಿಸುವ ಹಬ್ಬ. ಇದನ್ನು ಒಪ್ಪಿ ನಂಬಿದವರು ಮಾತ್ರ ಉದ್ಘಾಟನೆಗೆ ಅರ್ಹರು ಎಂದು ಒಪ್ಪಿಕೊಳ್ಳಬಹುದು ಅಷ್ಟಕ್ಕೂ ಇದು ಸರ್ಕಾರಿ ಕಾರ್ಯಕ್ರಮವಲ್ಲ ಎನ್ನುವುದನ್ನು ಮನಗಾಣಬೇಕು.ಯಾವದೇ ಮೂರ್ತಿ ಪೂಜೆಯನ್ನು ನಂಬದ ಮುಸ್ಲಿಂ ಧರ್ಮದ ಹೆಣ್ಣುಮಗಳನ್ನು ದಸರಾ ಉದ್ಘಾಟನೆಗೆ ಕರೆಯುತ್ತೀರಿ ಅಂತಾದರೆ, ನಿಮ್ಮ ರಾಜಕೀಯ ತೆವಲು, ಓಲೈಕೆ ಎಷ್ಟರ ಮಟ್ಟಿನದು ಎಂದು ಅರ್ಥವಾಗುತ್ತದೆ. ಕನ್ನಡವನ್ನು ಭುವನೇಶ್ವರಿ ಮಾಡಿದಿರಿ, ಅರಶಿಣ ಕುಂಕುಮ ಬಣ್ಣ ಬಾವುಟಕ್ಕೆ ಕೊಟ್ಟಿದ್ದೀರಿ ಎಂದು ಭುವನೇಶ್ವರಿ ಬಗ್ಗೆ ತಕರಾರು ಇರೋ, ಬಾವುಟದ ಬಣ್ಣದಲ್ಲಿ ಧರ್ಮದ ಪ್ರತೀಕಗಳನ್ನು ಹುಡುಕುವ ಮಹಿಳೆಯನ್ನು ಉದ್ಘಾಟನೆ ಗೆ ಕರೆಯುತ್ತೀರಿ, ನೀವು ಜಾಲಿ ಟೋಪಿ, ಪಟ್ಟಾ ಪಟ್ಟಿ ಸಹೇರಾ (ರುಮಾಲು ) ಹೊದ್ದಷ್ಟು ಸಲೀಸು, ಅವರು ಕುಂಕುಮ ಇಡಲ್ಲ, ಪೂಜೆ ಮಾಡಲ್ಲ ಅನ್ನೋದು ಕಾಂಗ್ರೆಸ್ಸಿಗರಿಗೆ ಬಿಟ್ಟು ಎಲ್ಲರಿಗೂ ಗೊತ್ತಿದೆ.
ಎಲ್ಲಾ ಧರ್ಮಗಳಿಗಿಂತ ಹಳೆಯದು ಹಿಂದೂ ಧರ್ಮ, ಜೈನ ಬುದ್ಧ ಧರ್ಮಗಳು 2500 ವರ್ಷ ಹಳೆಯವು, ಸಿಖ್ ಧರ್ಮ 500 ವರ್ಷ ಹಳೆಯದು, ಇಸ್ಲಾಂ 1400 ವರ್ಷ ಹಳೆಯದು, ಒಂದನ್ನು ಬಿಟ್ಟರೆ, ಮಿಕ್ಕವರ ಆಚರಣೆ ವಿಚಾರ ಭಾಷೆ ಸಂಸ್ಕೃತಿ ನಂಬಿಕೆ ಹಿಂದೂಧರ್ಮಗಳದ್ದೇ ಆಗಿದೆ, ಹೆಚ್ಚು ಕಡಿಮೆ ಜಗತ್ತಿನ ಅಶಾಂತಿಗೆ ಕಾರಣವಾಗಿರೋ ಏಕೈಕ ಧರ್ಮ ಒಂದೇ, ಅದು ಎಲ್ಲರಿಗೂ ಗೊತ್ತಿದೆ, ಮೂಲಭೂತವಾದ, ನಾವೇ ಸರಿ, ಮಿಕ್ಕವರೆಲ್ಲಾ ಸರಿಯಿಲ್ಲ, ನಮ್ಮದನ್ನೇ ಪಾಲಿಸಿ ಎನ್ನುವ ಬಲವಂತ ದಬ್ಬಾಳಿಕೆ, ಹಿಂಸೆ ಜಾಗತಿಕ ಅಶಾಂತಿಗೆ ಕಾರಣವಾಗಿದೆ. ಅವರು ಅವರದನ್ನು ಬಿಟ್ಟು ಬೇರೆ ಯಾವದನ್ನೂ ನಂಬುವದಿಲ್ಲ, ವಿಶ್ವಾಸವಿಲ್ಲ, ಹೀಗಿರುವಾಗ ಬಲವಂತದಿಂದ ಕರೆತಂದು ಬೇರೆಯವರ ನಂಬಿಕೆಗೆ ಘಾಸಿ ಮಾಡುವ ಅವಶ್ಯಕತೆ ಏನಿದೆ? ನಂಬಿಕೆಯಿಲ್ಲದ ಹಿಂದೂವಾದರೂ ಸರಿ ಆದರೆ 17 ನೇ ಶತಮಾನದಿಂದ ನಡೆದು ಕೊಂಡು ಬಂದಿರುವ ದಸರಾ ಆಚರಣೆಯನ್ನು ಮೊಟ್ಟ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯಿಂದ ಉದ್ಘಾಟನೆ ಮಾಡಿಸುತ್ತಿರುವದು ದುರದೃಷ್ಟಕರ ಸಂಗತಿ. ಮೊದಲು ಕವಿ ನಿಸ್ಸಾರ್ ಅಹ್ಮದ್ ಉದ್ಘಾಟನೆ ಮಾಡಿದ್ದರು, ಅವರು ಮುಸ್ಲಿಂ ಆಗಿದ್ದರೂ ಹಿಂದೂವಾಗಿ ಜೀವನ ಮಾಡಿದ್ದರು, ನಂಬಿಕೆ ಇಟ್ಟವರು ಆಗಿದ್ದರು, ಯಾವ ದೇವತೆ, ಬಾವುಟವನ್ನು ಧಾರ್ಮಿಕ ಕನ್ನಡಿ ಧರಿಸಿ ಟೀಕಿಸಿಸಲಿಲ್ಲ.
.
ಡಿಕೆಶಿಯವರು ತಮ್ಮ ಮಗಳ ಮದುವೆ, ಶಂಕುಸ್ಥಾಪನೆ, ಗೃಹಪ್ರವೇಶ ಕಾರ್ಯಕ್ರಮವನ್ನು ಸ್ವಾಮಿ, ಗುರುಗಳು, ಆಚಾರ್ಯ, ಪುರೋಹಿತರು ಅಲ್ಲದೇ ಮೌಲ್ವಿ, ಇಮಾಮ್ ಗಳಿಂದ ಮಾಡಿಸುವರೇ?
ಯಾವ ಧರ್ಮವನ್ನು ಇಲ್ಲಿ ಯಾರೂ ವಿರೋಧ ಮಾಡುತ್ತಿಲ್ಲ, ನಂಬಿಕೆಯೇ ಇಲ್ಲದವರು ನಮ್ಮ ಆಚರಣೆಯ ಉದ್ಘಾಟನೆ ಮಾಡಲು ವಿರೋಧ ಮಾಡಲೇ ಬೇಕಾಗುತ್ತದೆ. ಬುತ್ ಖಾನಾ, ನಂಬಲ್ಲ, ಬುತ್ ನಂಬಲ್ಲ, ಬುತ್ ಪೂಜೆ ನಂಬಲ್ಲ, ಅವರ ಕೈಯಿಂದ ಚಾಮುಂಡೇಶ್ವರಿ ಬುತ್ ಪೂಜೆ ಮಾಡಿಸೋದು, ಇನ್ನೊಬ್ಬರ ನಂಬಿಕೆ ಮೇಲೆ ಬಲವಂತದ ಹೇರಿಕೆ. ಈ ಸಂದರ್ಭಕ್ಕೆ ಏನು ಬೇಕಾದ್ರೂ ಸಮರ್ಥನೆ ಸಮಾಜಯಿಷಿ ಕೊಡಬಹುದು, ನೀವು ಮಾಡೋ ಕೆಲಸ ನಿಮ್ಮ ಮನೆಯವರೇ ಒಪ್ಪಲ್ಲ, ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಚಾಮುಂಡೇಶ್ವರಿ ಹಿಂದೂಗಳ ನಾಡಿನ ಅಧಿ ದೇವತೆ. ನಂಬಿಕೆ ಉಳ್ಳವರ ದೇವರು, ಕಾಫಿರರ ದೇವರು, ಮೂರ್ತಿಯಲ್ಲಿ ದೇವರ ಕಾಣುವವರ ದೇವರು, ಮೂರ್ತಿ ಒಡೆಯುವವರ, ಮೂರ್ತಿ ಪೂಜೆ ವಿರೋಧಿಸುವವರ ದೇವರಾಗಲು ಸಾಧ್ಯವಿಲ್ಲ.
ಕೆಡುಗಾಲವೋ, ಸಿಎಂ ಆಗುವ ಹಪಾಹಪಿಯೋ ಏನೆಲ್ಲಾ ಆಡಿಸುತ್ತಿದೆ, ಒಂದು ದಿನ ಮಂಜುನಾಥನ ಕ್ಷೇತ್ರದ ಅಪಪ್ರಚಾರ, ಇನ್ನೊಂದು ದಿನ ಸಮರ್ಥನೆ, ಒಂದು ದಿನ ನಮಸ್ತೆ ಸದಾ ವತ್ಸಲೇ ಮಾತೃಭೂಮಿ, ಇನ್ನೊಂದು ದಿನ, ಹಾಡಿದ್ದಕ್ಕೆ ಕ್ಷಮೆ ಕೇಳೋದು, ಈಗ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಯಲ್ಲ ಅಂದಿದ್ದೀರಿ, ಚಾಮುಂಡೇಶ್ವರಿ ಹಿಂದೂಗಳ ದೇವತೆ ಮಾತ್ರ ಅಲ್ಲ ಎಂದು ಹೇಳಲು ಹೋಗಬೇಡಿ.
ಚಾಮುಂಡೇಶ್ವರಿ ದಸರಾ, ಜಾತ್ರೆ ಗಳು ಕೆಲವು ಧರ್ಮದವರಿಗೆ ಆದಾಯದ ಮೂಲ, ವ್ಯವಹಾರ ಮಾಡೋ ಜಾಗ, ಸಂಪಾದನೆಯ ಜಾಗ ಅಷ್ಟೇ, ಎಲ್ಲರೂ ಹೋಗಿ ಚಾಮುಂಡಿ ಗೆ ಕೈ ಮುಗಿಯಲ್ಲ, ಕಾಯಿ ಒಡೆಯಲ್ಲ, ಹೂ ಹಾಕಲ್ಲ, ಪ್ರಸಾದ ಕೂಡ ತಿನ್ನಲ್ಲ ಅನ್ನೋದು ಎಲ್ಲರಿಗೆ ಗೊತ್ತಿದೆ, ಅಧಿಕಾರ ಇದೆ ಏನು ಬೇಕಾದ್ರೂ ಮಾಡಬಹುದು, ನಡೆಯುತ್ತೆ ಅನ್ನೋ ಅಹಂಕಾರ ಯಾವ ಅನಾಹುತಕ್ಕೆ ದಾರಿ ಮಾಡಿ ಕೊಡುವದೋ ಚಾಮುಂಡೇಶ್ವರಿ ತಾಯಿಯೇ ನೋಡಿಕೊಳ್ತಾಳೆ, ವಿನಾಶ ಕಾಲೇ ವಿಪರೀತ ಬುದ್ಧಿ ಅನ್ನೋದು ಇದಕ್ಕೆ ಅನ್ನೋದಾ? ಶಂಡ ಹಿಂದೂಗಳ ಸಮೂಹ ಅಧಿಕಾರದ ಆಸೆಗೆ ಏನು ಹೇಳಿದರೂ, ಏನು ಮಾಡಿದರೂ ಸುಮ್ಮನಿರುತ್ತದೆ, ಆತ್ಮ ಸಾಕ್ಷಿ ಸೇಲ್ ಗೆ ಇಟ್ಟು, ರಾಜಕೀಯವೇ ಎಲ್ಲಾ ಎಂದು ಭಂಡ ಬಾಳು ಬಾಳುತ್ತಿರುತ್ತವೆ.
ನಂಬಿಕೆ ವಿಶ್ವಾಸ ಗಳ ಅಡಿಯಲ್ಲೇ ಧರ್ಮಗಳ ನೆಲೆ ಇರೋದು, ಪರಸ್ಪರ ವಿರೋಧಳೇ ಧರ್ಮ ಸಂಘರ್ಷಗಳಿಗೆ ಕಾರಣ ಆಗಿರೋದು, ಒಂದು ಧರ್ಮ ಜಗತ್ತಿನ ಎಲ್ಲಾ ಧರ್ಮಗಳ ಜೊತೆಗೆ ಸಂಘರ್ಷಕ್ಕೆ ಇಳಿದು ಅಪವಾದ ಹೊತ್ತಿರೋದು, ನಮ್ಮದೇ ಸರಿ ಬಾಕಿ ಎಲ್ಲಾ ಸುಳ್ಳು ಅನ್ನುವ ಸಿದ್ಧಾಂತ, ಹಿಂಸೆ ಹೋರಾಟದ ನೆಲೆಯಲ್ಲಿ ಯಾವ ಧರ್ಮಗಳು ಉದ್ಧಾರ ಆಗಿಲ್ಲ, ಒಂದಂತೂ 1400+ ವರ್ಷಗಳಿಂದ ಎಲ್ಲಿದೆಯೋ ಅಲ್ಲೇ ಇದೆ, ಇಂದಿಗೂ ಅಪ್ಡೇಟ್ ಆಗಿಲ್ಲ. ಯಾರೂ ಆ ಒಬ್ಬರ ನಂತರ ಬಂದಿಲ್ಲ, ಬರೋದೂ ಇಲ್ಲ.