logo

ಗೋಕಾಕ ಜಾನುವಾರುಗಳ ಮಾಂಸ ಸಾಗಿಸ್ತಿದ್ದ ವಾಹನ ಪಲ್ಟಿ! ನಂಬರ್ ಪ್ಲೇಟ್ ನೊಂದಿಗೆ ಚಾಲಕ ಪರಾರಿ!

ಗೋಕಾಕ ಜಾನುವಾರುಗಳ ಮಾಂಸ ಸಾಗಿಸ್ತಿದ್ದ ವಾಹನ ಪಲ್ಟಿ! ನಂಬರ್ ಪ್ಲೇಟ್ ನೊಂದಿಗೆ ಚಾಲಕ ಪರಾರಿ!

ಗೋಕಾಕ ತಾಲೂಕಿನ ಗೋಕಾಕ-ಯರಗಟ್ಟಿ ರಸ್ತೆಯ ಚಿಕ್ಕನಂದಿ ಗ್ರಾಮದ ಹೊರವಲಯದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಜಾನುವಾರುಗಳ ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ವಾಹನ ಪಲ್ಟಿಯಾಗುತ್ತಿದ್ದಂತೆ ವಾಹನದ ಚಾಲಕ ವಾಹನದ ನಂಬರ್ ಪ್ಲೇಟ್ ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಗ್ರಾಮಸ್ಥರ ಪ್ರಕಾರ, ವಾಹನದಲ್ಲಿ ಹೆಚ್ಚಿನ ಪ್ರಮಾಣದ ಜಾನುವಾರುಗಳ ಮಾಂಸವನ್ನು ತುಂಬಲಾಗಿತ್ತು. ಪಲ್ಟಿಯಾದ ನಂತರ ರಸ್ತೆಗೆ ಮಾಂಸ ಚದುರಿ ಬಿದ್ದಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದು, ಪರಾರಿಯಾದ ಚಾಲಕನಿಗಾಗಿ ಶೋಧ ನಡೆಸಿದ್ದಾರೆ.

ಸ್ಥಳಕ್ಕೆ ಗೋಕಾಕ ಗ್ರಾಮೀಣ ಪಿಎಸ್ಐ ಕೆ ವಾಲೀಕರ್ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

1
0 views