ಚಿಕ್ಕನಾಯಕನಹಳ್ಳಿ: ಒಕ್ಕಲಿಗರ ಸಂಘದಿಂದ ವೈದ್ಯಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ಪುರಸ್ಕಾರ
ಚಿಕ್ಕನಾಯಕನಹಳ್ಳಿ ತಾಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ಒಕ್ಕಲಿಗ ಸಮುದಾಯದ ವೈದ್ಯಾಧಿಕಾರಿಗಳು ಹಾಗೂ ಎಸ್.ಎಸ್.ಎಲ್.ಸಿ, ಪಿಯುಸಿ ವಿದ್ಯಾಥಿಗಳಿಗಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅದ್ದೂರಿಯಾಗಿ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯ ಅಧ್ಯಕ್ಷ ಮುರುಳಿದರ ಹಾಲಪ್ಪ, ರಾಜ್ಯ ಸಂಘದ ನಿರ್ದೇಶಕ ಲೋಕೇಶ್, ಡಾ. ಪರಮೇಶ್ವರಪ್ಪ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ಹರ್ಷ, ಬಿಇಒ ಕಾಂತರಾಜ್, ಮಾನಸ ಮಂಜುನಾಥ್ ಗೌಡ, ಸಂಘದ ಉಪಾಧ್ಯಕ್ಷ ಕೆ.ಜಿ. ಕೃಷ್ಣೇಗೌಡ, ಖಜಾಂಜಿ ಗಿರೀಶ್ ಎಂ.ಪಿ, ಹರೀಶ್ ನಟರಾಜ್ ಸೇರಿದಂತೆ ಸಂಘದ ಎಲ್ಲಾ ನಿರ್ದೇಶಕರುಗಳು ಭಾಗವಹಿಸಿದ್ದರು.
🎖️ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರ ಭವಿಷ್ಯಕ್ಕೆ ಹಾರೈಕೆ ವ್ಯಕ್ತಪಡಿಸಲಾಯಿತು.