logo

ಸಕಲ ವಿಘ್ನ ನಿವಾರಕ ಪ್ರಥಮ ಪೂಜಿತ ಗಣೇಶನನ್ನು ಸದಾ ಸ್ಮರಿಸೋಣ : ಶರಣಪ್ಪಗೌಡ

ಯಾದಗಿರಿ: ಪ್ರತಿ ವರ್ಷದಂತೆ ಗಣೇಶ ಹಬ್ಬವು ಅತೀ ವಿಜೃಂಭಣೆಯಿಂದ ನಗರದ ಯುವಕರು, ಹಿರಿಯರು ಸೇರಿ ನಮ್ಮ ಸಂಸ್ಕೃತಿ ಪರಂಪರೆಯಂತೆ ಗಣೇಶ ಪ್ರತಿಷ್ಠಾನವನ್ನು ಆಚರಣೆ ಮಾಡಲಾಗುತ್ತದೆ ಎಂದು ವಿನಾಯಕ ಭಕ್ತರ ಬಳಗದ ಅಧ್ಯಕ್ಷ ಶರಣಪ್ಪ ಗೌಡ ಪೋಲಿಸ್ ಪಾಟೀಲ್ ಹೇಳಿದರು,
ಗಣೇಶ ಹಬ್ಬದ ನಿಮಿತ್ಯ ಆದರ್ಶ ನಗರದ ಹನುಮಾನ್ ಮಂದಿರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿ ಈ ಕುರಿತು ಶುಕ್ರವಾರ ಗಣೇಶನಿಗೆ ವಿಶೇಷ ಪೂಜೆ ನೆರವೇರಿಸಿ ಮಾತನಾಡಿದರು.ನಗರದಲ್ಲಿ ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸಿ ಜಾತಿ ಬೇದ ಭಾವ ಇಲ್ಲದೆ ಹಬ್ಬವನ್ನು ಆಚರಿಸುತ್ತಾ ಬಂದಿದ್ದು , ಸಕಲ ವಿಘ್ನಗಳನ್ನು ನಿವಾರಿಸುವ ವಿನಾಯಕನನ್ನು ಎಲ್ಲರೂ ಸ್ಮರಿಸಿಕೊಂಡು ಮುಂದಿನ ಪೀಳಿಗೇಯು ಕೂಡ ಗಣೇಶ ಹಬ್ಬವನ್ನು ಸಂಭ್ರಮದಿಂದ ಎಲ್ಲರೂ ಒಂದೇ ಭಾವನೆಯಿಂದ ಆಚರಿಸಲಿ ಎಂದು ಹೇಳಿದರು. ದೇವಪ್ಪ ಗೌಡ ರಾಚನಳ್ಳಿ ಮಾತನಾಡಿ, ಯುವಕರು ಗಣೇಶ ಪ್ರತಿಷ್ಠಾಪನೆಯನ್ನು ಮೋಜು ಮಸ್ತಿಗಾಗಿ ಮಾಡದೆ, ಭಗವಂತನ ಭಯ , ಭಕ್ತಿ, ನಂಬಿಕೆಯಿಂದ ನೆರವೇರಿಸಬೇಕು ಎಂದರು. ದಿನ ದಿನನಿತ್ಯ ಗಣೇಶನಿಗೆ ವಿಶೇಷ ಪೂಜೆ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಭಜನೆ, ಅನ್ನಸಂಪರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಿದವು .
ಈ ಸಂಧರ್ಭದಲ್ಲಿ ಶಿವಾನಂದ ಸಜ್ಜನ್, ಬುಗ್ಗಪ್ಪ ಸೇಡಂ ಕರ್, ಶರಣಪ್ಪ ಮುಷ್ಟೂರು, ಸುರೇಶ್ ಪೂಜಾರಿ, ನಾಗಪ್ಪ ಸೇಡಂ ಕರ್, ಪರಶುರಾಮ್ ಮ್ಯಾಗೇರಿ, ಶಶಿಧರ್, ಅಮರೇಶ್ ಕುಂಬಾರ, ಆನಂದ್, ಪವನ್, ಮಹೇಶ್, ಭಾರ್ಗವ, ಜೈ ಪ್ರಕಾಶ್ ಕಾವಲಿ, ಬೀರಲಿಂಗ, ಅಭಿ, ಶಿವು, ರಾಹುಲ್, ಪ್ರಜ್ವಲ್, ಅರ್ಚಕ ಮಲ್ಲಿಕಾರ್ಜುನ ಶಾಸ್ತ್ರಿ ಸೇರಿದಂತೆ ಇನ್ನಿತರರು ಇದ್ದರು.​

3
1294 views