logo

ದಲಿತರ ಜಮೀನು ಸವರ್ಣಿಯರಿಂದ ಕಬ್ಬಳಿಕೆ ಪ್ರಯತ್ನ ಕೋಲಾರ ಜಿಲ್ಲಾ ಕರ್ನಾಟಕ ಮಾದಿಗ ದಂಡೋರ ವತಿಯಿಂದ ನ್ಯಾಯ

ಕೋಲಾರ: ಮುಳಬಾಗಿಲು ತಾಲೂಕಿನ ಬೆವನಹಳ್ಳಿ ಕಸಬಾ ಒಬಲಿ ಗ್ರಾಮದ ಮಾದಿಗ ಸಮುದಾಯದ ಏ ಡಿ ದೊರಸ್ವಮಿ ಬಿನ್ ಇಡೀ ಮುನಿಯಪ್ಪ ಅವರಿಗೆ ಸರ್ವೆ ನೋ 84/1 ಸರ್ಕಾರ ಗ್ರಾಂಟ್ ಮಾಡಿರುವ 73 ಎಕರೆ
ಪೈಕಿ ಎರಡು ಎಕರೆ ಜಮೀನಿನ ಮೇಲೆ ಹಕ್ಕು ಹಾಗೂ ಯಲ್ಲತರಹ ದಾಖಲೆ ಗಳು ಇದ್ದರೂ ಸಹ ಹಲವು ವರ್ಷಗಳಿಂದ ಬಲಿಷ್ಠ ಸವರ್ಣಿಯರಿಂದ ಅಡ್ಡಿಪಡಿಸಲಾಗುತ್ತಿತ್ತು. ಜಮೀನಿನ ಒಳಕ್ಕೆ ಹೋಗದಂತೆ ತಡೆದು ಜಗಳಮಾಡುವುದರ ಜೊತೆಗೆ ಜಾತಿ ನಿಂದನೆಗೂ ದೊರಸ್ವಾಮಿ ರವರ ಸೊಸೆ ಹಾಗೂ ತಂಮ ವೆಂಕಟರಮಣಪ್ಪ ಮತ್ತು ಚಂಗಲ್ ರಾಯಪ್ಪರವರು ಒಳಗಾಗುತ್ತಿದ್ದರು.

ಈ ವಿಷಯ ತಿಳಿದ ಕರ್ನಾಟಕ ಮಾದಿಗ ದಂಡೋರ ಜಿಲ್ಲಾ ಪದಾಧಿಕಾರಿಗಳು ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಸ್ಥಳಕ್ಕೆ ತೆರಳಿ ಮಧ್ಯಸ್ಥಿಕೆ ವಹಿಸಿದರು. ಸವರ್ಣಿಯರನ್ನು ಕರೆದು ಬುದ್ಧಿ ಹೇಳಿ, ತಕ್ಷಣವೇ ಜಮೀನಿನ ಗಡಿಗೆ ಕಲ್ಲುಗಳನ್ನು ಹಾಕುವ ಮೂಲಕ ಸೊಸೆ ಚಿತ್ರ ಆನಂದ್ ಕುಟುಂಬ ದವರಿಗೆ ನ್ಯಾಯ ಒದಗಿಸಲಾಯಿತು.

ಈ ಸಂದರ್ಭದಲ್ಲಿ ವಕೀಲ ಧಶರತ್ ಜಿಲ್ಲಾ ಅಧ್ಯಕ್ಷ ಹೋವಹಳ್ಳಿ ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಕೋಲಾರ ಶ್ರೀನಿವಾಸ್, ಉಪಾಧ್ಯಕ್ಷ ಮುನಿಯಪ್ಪ, ಕಾರ್ಮಿಕ ಘಟಕ ಅಧ್ಯಕ್ಷ ಅಚ್ಚುತ್ ಮೂರ್ತಿ, ಮುಳಬಾಗಿಲು ಘಟಕ ಅಧ್ಯಕ್ಷ ಮುನಿಗಂಗಪ್ಪ, ಕೆ.ಜಿ.ಎಫ್‌ನ ಖಜಾಂಚಿ ಜೈರಾಜ್, ತಾಲ್ಲೂಕು ಉಪಾಧ್ಯಕ್ಷರು ಎಸಯ್ಯ್, ಮುರಳಿ ಸೇರಿದಂತೆ ಹಲವು ಪದಾಧಿಕಾರಿಗಳು ಹಾಜರಿದ್ದರು.

2
100 views