logo

ಬಾನು ಮುಸ್ತಾಕ್ ಮೇಡಂ ಪ್ರಶ್ನಿಸುವ ಹಕ್ಕಿರುವ ನಿಮಗೆ ನೀವು ಉತ್ತರಿಸಬೇಕಾದ ಕೆಲವು ಪ್ರಶ್ನೆಗಳಿವೆ.

ನಿಮಗೆ ಬೂಕರ್‌ ಪ್ರಶಸ್ತಿಯ ಮಹತ್ವ ಗೊತ್ತಿದೆಯೆ? ಎಂಬ ಪ್ರಶ್ನೆಯನ್ನು ಕನ್ನಡದ ಹಿರಿಯ ಲೇಖಕಿ ಬಾನು ಮುಸ್ತಾಕ್ ಅವರು ಕೇಳಿದ್ದಾರೆ. ಮೇಡಂ ಅದರ ಮಹತ್ವವೇನು ಅದರ ಇತಿಹಾಸವೂ ಕೂಡ ಗೊತ್ತಿದೆ.
ಅದೊಂದು ಅಂತಾರಾಷ್ಟ್ರೀಯ ಮಹಾನ್‌ ಪ್ರಶಸ್ತಿ, ವಿಶ್ವಮಾನ್ಯ ಎಂದು ಪ್ರಲಾಪಿಸುತ್ತಿರುವವರಿಗೆ ನನ್ನ ಪ್ರಶ್ನೆ. ಹಾಗೂ ನೀವು ಹೇಗೆ ಪ್ರಶ್ನೆಗಳನ್ನು ನಿಮ್ಮ ಸಿದ್ಧಾಂತದ ಹಾಗೂ ಅಲ್ಪಸಂಖ್ಯಾತ ಮಹಿಳೆಯಾಗಿ ಪ್ರಶ್ನೆ ಎತ್ತಿದವರಿಗೆ ನಿಮಗೂ ಕೂಡ ಉತ್ತರಿಸಬೇಕಾದ ಪ್ರಶ್ನೆಗಳಿವೆ. ಇನ್ನು ನೀವು ಬುಕರ್ ಬಂದಾಗ ನಿಮಗೆ ಪ್ರತಾಪಸಿಂಹ ಸೇರಿ ಅನೇಕ ಬಲಪಂಥಿಯರು ಕೂಡ ತಮಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಆದರೆ ಅದನ್ನು ನೋಡುವ ಸ್ವೀಕರಿಸುವ ಔದಾರ್ಯ ಕೂಡ ಇರಬೇಕಾಗುತ್ತದೆ ಮೇಡಂ. ಹಾಗೆ ಬುಕರ್ ಬಂದಿದ್ದು ನೀವು ಬರೆದ ಸಣ್ಣ ಕಥೆಗಳನ್ನು ಅನುವಾದಕ್ಕೆ ಆ ಅನುವಾದ ಮಾಡಿದ ದೀಪಾ ಭಸ್ತಿಯವರು ಕೂಡ ಈ ಗೌರವಕ್ಕೆ ತಮ್ಮಷ್ಟೇ ಅರ್ಹರರು, ತಾವು ಸರ್ಕಾರಕ್ಕೆ ಒತ್ತಾಯ ಮಾಡಬೇಕಿತ್ತು ನನ್ನ ಜೊತೆಗೆ ಅವರಿಗೂ ಉದ್ಘಾಟನೆಗೆ ಆಹ್ವಾನ ನೀಡಿ ಎಂದು, ಇದು ಕಾಂಗ್ರೇಸ್ ಪಕ್ಷದ ರಾಜಕೀಯ ದಾಳವಾಗಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.

ನಿಮಗೆ ಭುವನೇಶ್ವರಿ ದೇವಿಯ ಮಹತ್ವ ಗೊತ್ತಿದೆಯೆ? ಮಾತೆ ಚಾಮುಂಡೇಶ್ವರಿಯ ಮಹಿಮೆ ತಿಳಿದಿದೆಯೆ? ನವರಾತ್ರಿ ಆಚರಣೆಯ ಪ್ರಾಚೀನತೆ ಗೊತ್ತಿದೆಯೆ? ದಸರಾ ಮೆರವಣಿಗೆ, ಅಲ್ಲಿ ಪ್ರದರ್ಶಿತಗೊಳ್ಳುವ ಸಾಂಸ್ಕೃತಿಕ ಹಾಗೂ ಸಾಹಸ, ಶೌರ್ಯ ಕಾರ್ಯಕ್ರಮಗಳ ಹಿನ್ನೆಲೆ ತಿಳಿದಿದೆಯೆ? ಎಂಬ ಹಲವಾರು ಪ್ರಶ್ನೆಗಳು ನಮ್ಮನ್ನು ಕಾಡುತ್ತಿವೆ.
ತಾಯಿ ಚಾಮುಂಡೇಶ್ವರಿಯೇ ತಮ್ಮನ್ನು ಕರೆದಿದ್ದಾಳೆ ಎನ್ನುವ ತಾವುಗಳು ಹಿಂದೆ ಭುವನೇಶ್ವರಿ ಬಗ್ಗೆ ತಮಗಿರುವ ಭಾವನೆಗಳನ್ನು ತಮ್ಮ ಅಲ್ಪಸಂಖ್ಯೆಯಾತ ಮಹಿಳೆಯ ದೃಷ್ಟಿಯಿಂದ ನೋಡುವದನ್ನು ನೀಡಬೇಕು. ನಾವಿರುವ ಮಣ್ಣಿಗೆ, ಸಂಸ್ಕೃತಿಗೆ, ಭಾಷೆಗೆ ಋಣಿಯಗಿರಬೇಕು.

ಇವುಗಳು ಗೊತ್ತಿದ್ದರೆ ಎಡಪಂಥೀಯರ ಲಾಬಿಯಿಂದ ಕೊಡಲ್ಪಡುವ ಬೂಕರ್‌ ಎಂತಹ ತೃಣಮಾತ್ರದ್ದು ಎಂಬುದು ಗೊತ್ತಾದೀತು(ದೂಳಿಗೂ ಸಮವಲ್ಲ). ಕನ್ನಡ ಉಳಿದಿರುವುದು, ಮುಂದೆ ಉಳಿಯುವುದು ಬೂಕರ್‌ ಗಳಿಂದಲ್ಲ, ಸರ್ಕಾರದ ಪ್ರಾಧಿಕಾರಗಳಲ್ಲಿ ಕುಳಿತವರಂದಲ್ಲ. ಬದಲಿಗೆ ಕುಮಾರವ್ಯಾಸ, ಬೇಂದ್ರೆಯಂತಹವರಿಂದ ಮೊದಲ್ಗೊಂಡು ಭಾಷೆಯನ್ನು ನಿತ್ಯ ಬಳಸುವ ಅನಾಮಿಕ ಜನಸಾಮಾನ್ಯರಿಂದ.

ಇಷ್ಟಕ್ಕೂ ಸಾಹಿತಿಗಳೇ ದಸರಾ ಉದ್ಘಾಟಿಸಬೇಕೆಂಬ ನಿಯಮವೆಲ್ಲಿದೆ? ಯಾವುದೇ ಕ್ಷೇತ್ರದ ಮೂಲಕ ಈ ನಾಡಿಗೆ ಸೇವೆ ಸಲ್ಲಿಸಿದ ಸನಾತನದ ಕುರಿತು ಗೌರವ ಹೊಂದಿರುವ ಒಬ್ಬರೂ ಇವರಿಗೆ ಕಾಣಿಸುತ್ತಿಲ್ಲವೆ?

ಈ ಸೆಕ್ಯೂಲರ್‌ ಬರುವುದಕ್ಕೆ ಮೊದಲಿನಿಂದಲೂ, ಈ ಮುಜರಾಯಿ ಬರುವುದಕ್ಕೆ ಮುಂಚಿನಿಂದಲೂ ಪರಂಪರೆಗೆ ಬದ್ಧವಾಗಿ ಭವ್ಯವಾಗಿ ದಸರಾ ಮೆರವಣಿಗೆ ನಡೆಯುತ್ತಲೇ ಬಂದಿದೆ. ಇದಕ್ಕೆ ಶತಮಾನಗಳ ಬಹುದೊಡ್ಡ ಇತಿಹಾಸವಿದೆ.ಅಲ್ಪಸಂಖ್ಯಾತರೂ ಈ ನೆಲಕ್ಕೆ ಕಾಲಿಡುವ ಮುಂಚೆಯೇ ಕನ್ನಡ ಭಾಷಯನ್ನು ಭುವನೇಶ್ವರಿ ಎಂದು ಪಂಪ, ರನ್ನ, ಜನ್ನನ ಕಾಲದಿಂದಲೂ ಆರಾಧಿಸುತ್ತಾ ಬಂದಿದ್ದೇವೆ. ಮತ್ತು ಶತಮಾನಗಳಿಂದ ನಾಡದೇವಿ ಚಾಮುಂಡಿಯನ್ನು ಪೂಜಿಸುತ್ತ ದಸರಾವನ್ನು ಇಡೀ ಜಗತ್ತೇ ಕಣ್ಣರಳಿಸಿ ನೋಡುವಂತೆ ಮಾಡಿದ್ದೇವೆ ಎಂಬುದನ್ನು ತಾವು ಮನಗಾಣಬೇಕು.

ಇತ್ತೀಚೆಗೆ ನಾಡಹಬ್ಬವೆಂದು ಹೆಸರಿಸಿದ ಮಾತ್ರಕ್ಕೆ ತನ್ನಿಷ್ಟದಂತೆ ಆಚರಣೆಗಳನ್ನು ಬದಲಿಸುವ, ವ್ಯಕ್ತಿಗಳನ್ನು ಹೇರುವ ಹಕ್ಕು ಬಂದುಬಿಡುತ್ತದೆಯೆ? ಇದು ಪಕ್ಕಾ ಹಿಂದೂ ಧಾರ್ಮಿಕ ಹಬ್ಬ. ಶ್ರದ್ದೆ, ಭಕ್ತಿಯಿಂದ ಇದನ್ನು ಆಚರಿಸಬೇಕು. ಹಾಗೂ ಮುಖ್ಯವಾಗಿ ಇಲ್ಲಿ ಯಾವ ಜ್ಯಾತ್ಯಾತೀತ ಭಾವ ಬರುವುದಿಲ್ಲ ಎಂಬುದನ್ನು ತಾವು ತಿಳಿಯಬೇಕು.

ದಸರಾವನ್ನು ಜನರ ಉತ್ಸವವಾಗಿ ಆಚರಿಸುತ್ತೇವೆ, ಸಂವಿಧಾನದ ಉತ್ಸವವಾಗಿ ಆಚರಿಸುತ್ತೇವೆ, ಸೆಕ್ಯೂಲರ್‌ ಉತ್ಸವವಾಗಿ ಆಚರಿಸುತ್ತೇವೆ, ಸಮಾಜವಾದದ ಉತ್ಸವವಾಗಿ ಆಚರಿಸುತ್ತೇವೆ ಇತ್ಯಾದಿ ಇತ್ಯಾದಿ ಹೇಳಿಕೆಗಳು ನೀಡಲು ಯಾವ ಲಗಾಮು ಈಗಿಲ್ಲ. ಆದರೆ ಸೂಕ್ಷ್ಮವಾಗಿ ಅವಲೋಕಿಸಿದರೆ, ದಸರಾ ಉತ್ಸವ ಇವೆಲ್ಲವನ್ನೂ ಒಳಗೊಂಡು, ಹಾಗೂ ಮೀರಿ ಶತಮಾನಗಳಿಂದ ನಡೆಯುತ್ತಲೇ ಬಂದಿದೆ.

ನಿಮಗಿಷ್ಟಬಂದಂತೆ ಆಚರಿಸುವ, ನಿಯಮ ಹೇರುವ ಮನಸ್ಸಿದ್ದರೆ, ದಸರಾ ಉತ್ಸವವೇ ಯಾಕೆ ಬೇಕು? ಇಷ್ಟೇ ವೈಭವದ ಅಥವಾ ಇದಕ್ಕೂ ಮಿಂಚಿದ ಹೊಸದೊಂದು ಉತ್ಸವ ಆರಂಭಿಸಿ, ಯಾರನ್ನು ಬೇಕೋ ಅವರನ್ನು ಕರೆಯಿರಿ, ಮೆರೆಸಿರಿ. ಸರ್ಕಾರ ಬಾನು ಮಾಸ್ತಕರನ್ನು ಗೌರವಿಸಬೇಕು ಎಂದರೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಮಾಡಿ, ಅದಕ್ಕೆ ಯಾರ ತಕರಾರು ಇರದು. ಇನ್ನು ಬಹುತೇಕರು ಹಿಂದೆ ಕರೀಂ ಖಾನರು, ಅಬ್ದುಲ್ ಕಲಾಂ, ನಿಸಾರ ಅಹಮದ್ ಅವರೂ ದಸರಾ ಉದ್ಘಾಟನೆ ಮಾಡಿದ್ದಾರೆ ಅವರಿಗೆ ಭುವನೇಶ್ವರಿ ಹಾಗೂ ಚಾಮುಂಡೇಶ್ವರಿ ತಾಯಿಯ ಬಗ್ಗೆ ಯಾವ ತಕರಾರು ಇರಲಿಲ್ಲ ಅವರು ಕನ್ನಡ ಭುವನೇಶ್ವರಿಯನ್ನು ಅಪ್ಪಿದ್ದರು ಹಾಗಾಗಿ ಅವರಿಗೆ ವಿರೋಧ ಬರಲಿಲ್ಲ ಎಂಬ ಸತ್ಯವನ್ನು ಅರಿಯಬೇಕು.

ಹೇಗೂ ಬಡಪಾಯಿ ತೆರಿಗೆದಾರನ ಇಷ್ಟಾನಿಷ್ಟಗಳನ್ನು ಯಾರೂ ಲೆಕ್ಕಿಸುವುದಿಲ್ಲವಲ್ಲ.

0
0 views