
ಧರ್ಮಸ್ಥಳದಲ್ಲಿ ಕಡೆಗೂ ಸತ್ಯ, ನ್ಯಾಯ ಗೆದ್ದವು.
ನಾಗರಿಕ ಸಮಾಜದಲ್ಲಿ, ತಮ್ಮ ಸಿದ್ಧಾಂತವನ್ನು ಒಪ್ಪುತ್ತಿಲ್ಲ ವಿರೋಧಿಸುತ್ತಾರೆ ಎನ್ನುವ ಒಂದೇಒಂದು ಕಾರಣಕ್ಕೆ ಈ ಪಾಟಿ ದ್ವೇಷ, ಕುತಂತ್ರ, ಷ್ಯಡ್ಯಂತ್ರ, ಇಷ್ಟೊಂದು ನೀಚ ಮಟ್ಟಕ್ಕೆ ಇಳಿಯುತ್ತಾರೆ ಎಂದರೆ ಆಶ್ಚರ್ಯವಾಗುತ್ತದೆ.ಇತಿಹಾಸದಲ್ಲಿ ಮುಸ್ಲಿಂ, ಬ್ರಿಟಿಷ್ ಡಚ್ಚ, ಪ್ರೆಂಚರು ನಮ್ಮನ್ನು ಆಳಿದ್ದು ಇಂತಹ ದ್ರೋಹಿಗಳ ಸಹಾಯದಿಂದ ಎನ್ನುವುದನ್ನು ನಾವು ಮರೆಯಬಾರದು.
ಭಾರತೀಯ ಹಿಂದೂಗಳ ಮುಗ್ದ ಮಬಸ್ಸುಗಳನ್ನು ಮಾನವೀಯತೆ ಹಾಗೂ ಭಾವನಾತ್ಮಕ ಕಥೆಗಳನ್ನು ಕಟ್ಟಿ ಸುಲಭವಾಗಿ ಯಾಮಾರಿಸಬಹುದು ಅದರಲ್ಲೂ ಸ್ವಲ್ಪ ಹಣ ಆಸ್ತಿಯ ಆಶೆ ತೋರಿಸಿದರೆ ಮುಗಿಯಿತು. ಎನ್ನುವುದಕ್ಕೆ ಪ್ರಸ್ತುತ ಧರ್ಮಸ್ಥಳದ ಪ್ರಕರಣವೇ ಸಾಕ್ಷಿ.
ಶತಮಾನದಿಂದ ಧರ್ಮಸ್ಥಳದಲ್ಲಿ ಎಲ್ಲಾ ಸಂಪ್ರದಾಯವನ್ನು, ಪರಂಪರೆ ಯನ್ನು ಚಾಚು ತಪ್ಪದೆ ಪಾಲಿಸಿಕೊಂಡು ಬರುತ್ತಿದೆ ಅದರಲ್ಲೂ ದಿನ ಸಾವಿರಾರು ಭಕ್ತರಿಗೆ ಅನ್ನದಾಸೋಹವನ್ನು ಕಟ್ಟುನಿಟ್ಟಾಗಿ ಎಲ್ಲಿಯೂ ಒಂದಿಷ್ಟು ಅವ್ಯವಸ್ಥೆ ಆಗದಂತೆ ಮಾಡುತ್ತಿರುವುದು ನಿಜಕ್ಕೂ ಆ ಕಾರ್ಯಕ್ಕೆ ಎಲ್ಲರು ತಲೆಬಾಗಲೇಬೇಕು.
ಧರ್ಮಸ್ಥಳ ಧರ್ಮಧಿಕಾರಿಗಳ ಇಂತಹ ಸಮಾಜಸೇವೆಯ ಕಾರ್ಯವನ್ನು ನೋಡಿಯೇ ಅವರಿಗೆ ಕರ್ನಾಟಕ ರತ್ನ, ಪದ್ಮಾಶ್ರೀ ಅಂತಹ ಅನೇಕ ಪ್ರಶಸ್ತಿಗಳು ಬೆಲೆ ಕಂಡುಕೊಂಡವು ಎಂದರೆ ತಪ್ಪಾಗಲಾರದು,ಇವರ ಈ ಕೀರ್ತಿಯನ್ನುಕೆಲವರ ಹೊಟ್ಟೆಹುರಿ ಹೆಚ್ಚಾಯಿತು ಹೇಗಾದರೂ ಮಾಡಿ ಈ ಸ್ಥಳಕ್ಕೆ ಕಪ್ಪು ಮಸಿ ಬಳಿಯಬೇಕೆಂದು ಪಣತೊಟ್ಟು ಕಳೆದ ಒಂದೆರೆಡು ದಶಕದಿಂದ ನಿರಂತರ ಕುತಂತ್ರ ಮಾಡುತ್ತಲೇ ಬಂದರು, ಆದರೆ ಅಲ್ಲಿಯ ಭಕ್ತರ ಅಚಲವಾದ ಭಕ್ತಿಯ ಮುಂದೆ, ಧರ್ಮಧುಕಾರಿಗಳ ನಿಸ್ವಾರ್ಥ ಸೇವೆಯ ಮುಂದೆ ಇವರೆಲ್ಲರ ಕುತಂತ್ರಗಳನ್ನು ಆ ಮಂಜುನಾಥ ಸ್ವಾಮಿ ಠುಸ್ ಮಾಡಿಬಿಟ್ಟ. ಆಗಲೇ ಇದಕ್ಕೆ ಪಕ್ಕಾ ಉಪಾಯ ಮಾಡಿ ಈ ಬುರುಡೆ ಗ್ಯಾಂಗ್ ಎನ್ನುವ ಹೊಸ ಸಂಶೋಧನೆ ಮಾಡಿ, ಪ್ರಸ್ತುತ ಟೆಕ್ನಾಲಜಿ Ai ಯನ್ನು ಬಳಸಿಕೊಂಡು ಭಾವನಾತ್ಮಕ ಕಥೆಯನ್ನು ಹೆಣೆದರು. ಇವರ ಕಥೆಗೆ ಮರುಳಾದ ಒಂದಿಷ್ಟು ಜನರು, ಸರ್ಕಾರ ಇದರ ಬಗ್ಗೆ ತನಿಖೆ ನಾಡಲಿ ತಪ್ಪು ಯಾರು ಮಾಡಿದರು ಶಿಕ್ಷೆ ಯಾಗಲಿ ಎಂದು ತಾಮ್ಮೊಳಗೆ ನಿರ್ಧರಿಸಿ ಬಿಟ್ಟರು ಇದನ್ನು ಸ್ವತಃ ಧರ್ಮಧಿಕಾರಿಗಳೇ ಸ್ವಾಗತಿಸಿದರು. ಸ್ಥಳೀಯ ಮೊದಲು ಪೊಲೀಸ್ ತನಿಖೆ, COD, CBi ತನಿಖೆಯಾದರು ಕೂಡ ಸಮಾಧಾನವಾಗಲಿಲ್ಲ, ಕೋರ್ಟಿನಲ್ಲೂ ಈ ಬುರುಡೆ ದಾಸರು ಸಾಕ್ಷಿಗಳನ್ನು ಕೋಡಲಿಲ್ಲ ಕೋರ್ಟ್ ಸತತವಾಗಿ ಹನ್ನೆರೆಡು ವರ್ಷಗಳ ಕಾಲ ಇವರ ಸಾಕ್ಷಿಗಾಗಿ ಕಾದಿತ್ತು ಕಡೆಗೆ ಯಾವ ಸಾಕ್ಷಿ ಸಿಗದ ಕಾರಣ ಪ್ರಕಾರಣವನ್ನು ಮುಗಿಸಿತು ಅಲ್ಲಿ ಧರ್ಮಧಿಕಾರಿ ಹಾಗೂ ಅವರ ಕುಟುಂಬದವರ ಮೇಲೆ ಒಂದು ಸಣ್ಣ ಆರೋಪ ಕೂಡ ಸಾಬೀತಾಗಲಿಲ್ಲ ಆದರೂ ಈ ವಿರೋಧಿ ಬಣದವರಿಗೆ ಸಮಾಧಾನವಾಗಲಿಲ್ಲ, ಏಕೆಂದರೆ ಅವರು ಏನು ಅಂದುಕೊಳ್ಳುತ್ತಾರೋ ಅದನ್ನು ಮಾಡಲ್ಲೇಬೇಕು ಎಂಬ ಹುಚ್ಚು ಹಠ ಅವರಿಗೆ ಏಕೆಂದರೆ ಆ ಎಡ ಸಿದ್ಧಾಂತವೇ ಒಂದು ರೀತಿಯ ಸರ್ವಧಿಕಾರಿಯ ಧೋರಣೆ. ಮುಂದೆ ಎಲ್ಲಾ ಕಥೆಯನ್ನು ಚೆನ್ನಾಗಿ ಹೆಣಿದು ಪ್ರಸ್ತುತ ಸರ್ಕಾರದ ಮೇಲೆ ರಾಷ್ಟ್ರೀಯ ನಾಯಕರಿಂದ ಒತ್ತಡ ಹಾಕಿ ಹಾಗುಹೀಗೂ Sit ತನಿಖೆಯ ಪಟ್ಟನ್ನು ಸಾಧಿಸಿ ಬಿಟ್ಟರು ಇಷ್ಟಕ್ಕೆ ಸುಮ್ಮನಾಗದೆ ಆ Sit ಯಲ್ಲಿ ಇಂಥವರೇ ಅಧಿಕಾರಿಗಳು ಇರಬೇಕು ಎಂದು ತಾಕಿತು ಮಾಡಿದರು ಎಲ್ಲವು ಅವರು ಅಂದುಕೊಂಡತೆ ಆಯಿತು. ಮುಂದಿನದೆಲ್ಲ ಠುಸ್ ಅಷ್ಟೇ.
ಬುರುಡೆ ಖ್ಯಾತಿಯ ಚಿನ್ನಯ್ಯನ ಚಿನ್ನದ ಮಾತುಗಳು ಹಾಗೂ ಅನಾಥ ಶವಗಳಿಗೆ ತಿಥಿ ಕಾರ್ಯ !! ಎಂಬ ನಾಟಕ ಪ್ರಹಾಸನವನ್ನು ಬಹಳ ಅಚ್ಚುಕಟ್ಟಾಗಿ ಗಿರೀಶ್ ಮಟ್ಟೇಣ್ಣನವರ್ ಮತ್ತು ಮಹೇಶ ಶೆಟ್ಟಿ ತಿಮ್ಮರೋಡಿ ಕಥೆಯನ್ನು ಬರೆದು ಅದಕ್ಕೆ ಸಮೀರ್ ಎಂಬ ಯುಟ್ಯೂಬರ್ ನಿಂದ ಭಾವನಾತ್ಮಕ, ಕರುಣಾಜನಕ ಕಥೆಗೆ ai ಮೂಲಕ ಸುಳ್ಳು ದೃಶ್ಯಗಳನ್ನು ಸೃಷ್ಟಿಸಿ ರಸವತ್ತಾಗಿ ಪ್ರಸಾರ ಮಾಡಿದರು. ಅದನ್ನೇ ಬಹುಪಾಲು ಜನರು ನಂಬಿದರು ಶತಮಾನಗಳ ಆ ನಂಬಿಕೆ, ಭಕ್ತಿ ಇದರ ಮುಂದೆ ಮಂದಿಯೂರಿತು ಆದರೂ ಎಲ್ಲರು ಕೂಡ sit ಯಿಂದ ಸತ್ಯ ಹೊರಬರಲಿ ಎಂದು ಆಶೀಸಿದರು. ಮುಸುಕುದಾರಿ ಚಿನ್ನಯ್ಯ ತೋರಿಸಿದ ಎಲ್ಲಾ ಜಾಗದಲ್ಲಿಯೂ ಕೂಡ ಯಾವ ಆಸ್ತಿಪಂಜರ ಕೂಡ ಸಿಗಲಿಲ್ಲ.
ನೇರವಾಗಿ ಹೇಳುವುದಾದರೆ ಅವ ಬಂದದ್ದು ಕೇವಲ ಅಲ್ಲಿ ಪೋಲಿಸ್,ವೈದ್ಯರು, ಪಂಚಾಯಿತಿ ದೇವಸ್ಥಾನಗಳ ಅಧಿಕಾರಿಗಳ ಸಮ್ಮುಖದಲ್ಲಿ ನೆಡೆದ ಅನಾಥ ಶವಗಳಿಗೆ ಊದಿನಕಡ್ಡಿ ಬೆಳಗಿ ತಿಥಿ ಕಾರ್ಯ ಮಾಡಿಸಲು. ಅದು ನಿನ್ನೆ ನಾವೆಲ್ಲರೂ ಬಹುತೇಕ ನೋಡಿದ ದಿನೇಶ್ ಕುಮಾರ್ ರವರ ಚಾನಲ್ಲಿನಲ್ಲಿ ಖಚಿತವಾಗಿದೆ.ಉಳಿದಂತೆ ಈತನಿಗಾಗಿ SIT ಮಾಡುವ ಅಗತ್ಯ ಇರಲಿಲ್ಲ. ಆದರೆ ಊದಿನಕಡ್ಡಿ ಹಿಡಿದುಕೊಂಡು ಬಂದಂತಹ ಈತನ ಹಿಂದೆ ಬಂದು ನಿಂತುಕೊಂಡ ಬುರುಡೆ ಗ್ಯಾಂಗ್ ಮಾಡಿದ ಷಢ್ಯಂತ್ರಕ್ಕಾಗಿ ಇವತ್ತು ಈ ಪ್ರಕರಣ, ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿ SIT ರಚನೆಯಾಗುವ ಹಂತಕ್ಕೆ ಬಂದಿದೆ.
ಈತನಿಗೆ ತಿಥಿಕಾರ್ಯ ನೆರವೇರಿಸಲು ಪೋಲಿಸರ ನೆರವು ಸಹ ಅಗತ್ಯವಿದ್ದದ್ದು ಸತ್ಯ. ಯಾರೋ ಏನೋ ಅಲ್ಲಿ ಹೋಗಿ ಗುಂಡಿ ಅಗೆದು ಹೆಣ ತೆಗೆಯುವ ಕೆಲಸ ಮಾಡಿದ ಎಂದರೆ ಜನಗಳು ಸುಮ್ಮನೆ ಬಿಡ್ತಾರಾ ? ಈತನಿಗೆ ಹುಚ್ಚು ಎಂದು ಹೇಳುವುದಿಲ್ಲವೆ ? ಬುರುಡೆಗೆ ಬಿಡುವುದಿಲ್ಲವೆ ? ಅಥವಾ ಅವನೇ ಹೇಳಿದ ಪ್ರಕಾರ ಕಲ್ಲು ತೂರುವುದಿಲ್ಲವೆ ? ಆದರೆ ಇಷ್ಟಕ್ಕೆ SIT ರಚಿಸುವ ಅಗತ್ಯ ಇರಲಿಲ್ಲ. ಮಾಮೂಲಿ ಪೋಲಿಸರು ಮತ್ತು ಮಾಮೂಲಿ ಪುರೋಹಿತರ ಸಮ್ಮುಖದಲ್ಲಿ ಊದಿನಕಡ್ಡಿ ಬೆಳಗಿ ತಿಥಿ ಕಾರ್ಯ ಮಾಡಬಹುದಿತ್ತು.
ಆದರೆ ಹೀಗೊಬ್ಬ ಬಂದ ಎಂದ ತಕ್ಷಣ ಮೊದಲಿನಿಂದಲೂ ಕೆಲವರ ಮೇಲೆ ಕೆಸರು ಎರಚಿ ಹೆಸರು ಹಾಳು ಮಾಡಬೇಕು ಎಂದಿದ್ದುಕೊಂಡಿದ್ದ ಬುರುಡೆ ಗ್ಯಾಂಗ್ ಇಂತಹವನೊಬ್ಬನ ಮುಗ್ದ ಬೇಡಿಕೆಗೆ ಬೇರೆಯದೇ ಆಯಾಮ ನೀಡಿಬಿಡುತ್ತದೆ !! ನೂರಾರು ಯುವತಿಯರ ಹತ್ಯಾಚಾರ, ಮಕ್ಕಳ ಹತ್ಯಾಚಾರ, ಅಮಾನುಷ ಹಿಂಸೆಯಿಂದ ಕೊಲೆ............... ಈ ವೀಡಿಯೋ SIT ರಚನೆ ಆಗುವುದಕ್ಕಿಂತ ಮೊದಲೇ ಚಿತ್ರೀಕರಣವಾದ ಕಾರಣ ಈ ಬುರುಡೆ ಗ್ಯಾಂಗಿನ ಷಢ್ಯಂತ್ರ ಇವತ್ತು ಬಟ್ಟಬಯಲಲ್ಲಿ ನಿಂತಿದೆ !!
ಉಳಿದಂತೆ ಸೌಜನ್ಯ ಹತ್ಯಾಚಾರದ ನಂತರದ ಅಂತೆ ಕಂತೆಗಳ ಕತೆಗಳನ್ನು ವಿವರಿಸಿದ್ದಾನೆ. ಅದೇನೂ ತಪ್ಪಲ್ಲ. ನಾಕು ಜನ ರಸವತ್ತಾದ ಮಾತುಗಳನ್ನು ಆಡಿದರೆ ಅದನ್ನು ಇವ ಹೇಳಬಹುದು !! ಅಲ್ಲೇ ಇದ್ದವ ಅಲ್ವೇ ? ಹೇಳುವುದು ಅವನ ಕರ್ತವ್ಯ.
ಉಳಿದಂತೆ ಇವನ ತಿಥಿ ಸಿನಿಮಾವನ್ನು ಈ ಬುರುಡೆ ಸೆಂಚುರಿ ಗೌಡರು ಉಪಯೋಗಿಸಿಕೊಂಡ ರೀತಿ ರಣರೋಚಕ !! ಎಂತಹಾ ನೀಚ ಷಢ್ಯಂತ್ರ ?! ಇಂತಹ ಜನಗಳಿಗೆ ಇವತ್ತಿನ ನಾಗರಿಕ ಪ್ರಪಂಚದಲ್ಲಿ ಬದುಕುವ ಹಕ್ಕೇ ಇಲ್ಲ.ಮರಣದಂಡನೆಯನ್ನು ನ್ಯಾಯಾಲಯ ವಿಧಿಸಲಿ ಇವರಿಗೆ. ಇನ್ನು ಈ ಚಿನ್ನಯ್ಯನವರು !! ಸಾವಿರಾರು ಶವಗಳು ಎಂದದ್ದು ಈತನಿಗೆ ಗಣಿತಜ್ಞಾನ ಇದೆಯಾ ಎಂಬ ಪ್ರಶ್ನೆಯನ್ನು ಎತ್ತಿ ಕೂರಿಸಿದೆ. ಅದೆಷ್ಟೇ ಇರಲಿ ಆ ಶವಗಳಿಗೆಲ್ಲಾ ಒಂದು ಸಾಮೂಹಿಕ ತಿಥಿ ಕಾರ್ಯವನ್ನು ಮಾಡಿ ಇವನ ಕೈಯಿಂದಲೇ ಊದಿನಕಡ್ಡಿ ಬೆಳಗಿಸಿ ಈತನನ್ನು ಎಲ್ಲದರೂ ಹೋಗು ಎಂದು ಕಳುಹಿಸಬೇಕು.