logo

ಕರ್ನಾಟಕ ಮಾದಿಗ ದಂಡೋರ (ರಿ) ಕೋಲಾರಜಿಲ್ಲಾ ಘಟಕಕ್ಕೆ ಹೊಸ ನಾಯಕತ್ವ – ಹೋವಹಳ್ಳಿ ಕೃಷ್ಣಪ್ಪ ಕೋಲಾರ ಜಿಲ್ಲಾ ಮಾದಿಗ ದಂಡೋರ ನೂತನ ಅಧ್ಯಕ್ಷ

ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ. ಶಂಕರಪ್ಪ ನೇಮಕಾತಿ ಘೋಷಣೆ – ಪದಾಧಿಕಾರಿಗಳಿಂದ ಹರ್ಷದ ಪ್ರತಿಕ್ರಿಯೆ

ಕೋಲಾರ: ಕರ್ನಾಟಕ ಮಾದಿಗ ದಂಡೋರ ಕೋಲಾರ ಜಿಲ್ಲಾ ಘಟಕಕ್ಕೆ ಹೊಸ ನಾಯಕತ್ವ ದೊರೆತಿದೆ. ಹೋವಹಳ್ಳಿ ಕೃಷ್ಣಪ್ಪ ರವರನ್ನು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಈ ನೇಮಕಾತಿಯನ್ನು ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ. ಶಂಕರಪ್ಪ ಅವರು ಘೋಷಿಸಿ, ಸಂಘಟನೆಯ ಬಲವರ್ಧನೆಗೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ನಾರಾಯಣಸ್ವಾಮಿ ಚಿಂತಾಮಣಿ ಕೃಷ್ಣಪ್ಪ,ಜೈಚಂದ್ರ, ಮುನಿರಾಜ್, ಗುರುಮೂರ್ತಿ, ಮುನಿರಂಗಪ್ಪ, ಮುನಿಯಪ್ಪ, ಅಚ್ಚುತಮೂರ್ತಿ, ಕೃಷ್ಣ, ವೆಂಕಟರತ್ನಮ್ಮ, ಶೈಲಜಾ, ನಾಗರಾಜ್ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಪದಾಧಿಕಾರಿಗಳು ಹೋವಹಳ್ಳಿ ಕೃಷ್ಣಪ್ಪ ರವರಿಗೆ ಹಾರ್ಧಿಕ ಅಭಿನಂದನೆ ಸಲ್ಲಿಸಿ, ಅವರ ನಾಯಕತ್ವದಲ್ಲಿ ಸಂಘಟನೆ ಮತ್ತಷ್ಟು ಬಲ ಪಡೆದು ಸಮಾಜದ ಹಕ್ಕು-ಹಿತರಕ್ಷಣೆಗಾಗಿ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂಬ ನಂಬಿಕೆ ವ್ಯಕ್ತಪಡಿಸಿದರು.



16
1037 views