logo

ದಂಡೋತಿ ಗ್ರಾಮದಲ್ಲಿ 16 ಮಂಗಗಳು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿ.

ದಂಡೋತಿ ಗ್ರಾಮದಲ್ಲಿ 16 ಮಂಗಗಳು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿ.

ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದಲ್ಲಿ ಮಂಗಗಳನ್ನು ಗುರುವಾರ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಮಾರ್ಗದರ್ಶನದಲ್ಲಿ 16 ಮಂಗಗಳನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ, ಅವುಗಳನ್ನು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿದೆ ಎಂದು ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಕಚ್ಚಿ ಗಾಯಗಳನ್ನುಂಟು ಮಾಡುತ್ತಿದ್ದ ಮಂಗಗಳನ್ನು ಸುರಕ್ಷಿತವಾಗಿ ಸೆರೆಹಿಡಿಯಲು ನಾವು ಮಂಕಿ ಟ್ರ್ಯಾಪ್ ಕೇಜ್ ಅನ್ನು ಮತ್ತು 6 ಸದಸ್ಯರ ವಿಶೇ? ಸೆರೆಹಿಡಿಯುವ ತಂಡವನ್ನು ಬಳಸಿದ್ದೇವೆ. ಎಲ್ಲಾ ಮಂಗಗಳನ್ನು ಸ್ಥಳಾಂತರಿಸಲು ನಾವು ಶ್ರದ್ದೆಯಿಂದ ಕೆಲಸ
ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಚಿತ್ತಾಪುರ ಅರಣ್ಯ ಅಧಿಕಾರಿಗಳಾದ ಆರ್‌ಎಫ್‌ಒ, ಡಿಆರ್‌ಎಫ್‌ಒ ಬೀಟ್ ಆಫೀಸರ್, ಜಾಫರ್, ಭೀಮು, ಮೌನೇಶ್ ಸೇರಿದಂತೆ ಸ್ಥಳೀಯ ದಂಡೋತಿ ಪಂಚಾಯತ್ ಅಧ್ಯಕ್ಷರು, ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಶಾಲೆಗಳು, ದೇವಾಲಯಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಂಗಗಳಿಗೆ ಆಹಾರ ನೀಡಬಾರದು. ಮನೆ ಅಂಗಡಿಗಳ ಮುಂದೆ ಆಹಾರ ಪದಾರ್ಥಗಳನ್ನು ಎಸೆಯುವುದನ್ನು ತಪ್ಪಿಸಬೇಕು. ಕಸವನ್ನು ಕೇವಲ ನಿಗದಿತ ಸ್ಥಳಗಳಲ್ಲಿ ಮಾತ್ರ ಹಾಕಬೇಕು. ಮಂಗಗಳ ಹಾವಳಿ ಕಂಡುಬಂದಲ್ಲಿ ತಕ್ಷಣವೇ ಸಮೀಪದ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು.

51
3844 views