logo

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಲಿಂಗಾಯತ ಧರ್ಮದ ಅಧ್ಯಕ್ಷ: ರಮೇಶ್ ಜಾರಕಿಹೊಳಿ


ಅಥಣಿ:-ಲಕ್ಷ್ಮಣ್ ಸವದಿ ಒರ್ವ ನಾಟಗಾರ, ಕಳೆದ ೨೦೧೮ಯಲ್ಲಿ ಅಥಣಿ ಜನರು ರಾಕ್ಷಸನನ್ನು ಸೋಲಿಸಿದರು ಅವನ್ನು ಯಾರೂ ಡಿಸಿಎಂ ಮಾಡಿದರು ಗೊತಿಲ್ಲ ಎಂದು ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಶಾಸಕ ಸವದಿ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು

ಅಥಣಿ ಪಟ್ಟಣದ ಆರ.ಎಸ್.ಪಿ ಸಭಾ ಭವನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ನಾನು ಇಲ್ಲಿ ಬಂದಿರುವುದು ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಗೋಸ್ಕರ ಹಿನ್ನೆಲೆ ನಾನು ಅಥಣಿಗೆ ಬಂದಿದ್ದೇನೆ ಈ ಬಾರಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಕಡೆಯಿಂದ ಅಥಣಿ ಅಭ್ಯರ್ಥಿಯಾಗಿ ಮಹೇಶ್ ಕುಮಠಳ್ಳಿ ಹಾಗೂ ಕಾಗವಾಡ ಕ್ಷೇತ್ರದಿಂದ ಶ್ರೀನಿವಾಸ ಪಾಟೀಲ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರೆ ಡಿಸಿಸಿ ಬ್ಯಾಂಕ ಅಥಣಿ ಹಾಗೂ ಕಾಗವಾಡ ಅಭ್ಯರ್ಥಿಗಳನ್ನ ಘೋಷಿಸಿದರು .

ಲಕ್ಷ್ಮಣ್ ಸವದಿ ಒರ್ವ ನಾಟಕಕಾರ ಕಳೆದ ೨೦೧೮ ಚುನಾವಣೆಯಲ್ಲಿ ಅಥಣಿ ಜನರು ಸವದಿಯನ್ನು ಸೋಲಿಸಲು ಅಥಣಿ ಬಾಗದ ಜನರು ಒಂದು ದೊಡ್ಡ ರಾಕ್ಷಸ ಸೋಲಿಸಿದರು, ಆದರೆ ಸನ್ಮಾನ ಲಕ್ಷ್ಮಣ್ ಸವದಿಯನ್ನು ಯಾರು ಡಿಸಿಎಂ ಮಾಡಿದರು ಗೊತಿಲ್ಲ ಅವನು ಪಂಚಾಯಿತಿ ಚುನಾವಣೆ ಆಯ್ಕೆ ಆಗುವುದಕ್ಕೆ ಲಾಯಕ್ಕ ಇಲ್ಲ ಎಂದು ಏಕವಚನದಲ್ಲಿ ಹರಿಹಾಯ್ದರು.

ಅವನ್ನನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಡಿಸಿಎಂ ಮಾಡಿಲ್ಲ ನಾನು ಯಡಿಯೂರಪ್ಪ ಕೇಳಿದೆ
ಯಾಕೆ ಸವದಿಯನ್ನು ಡಿಸಿಎಂ ಮಾಡಿದ್ದಿರಿ ಎಂದು ಯಡಿಯೂರಪ್ಪ ನವರನ್ನು ನಾನು ಪ್ರಶ್ನೆ ಮಾಡಿದೆ ಆದರೆ ಯಡಿಯೂರಪ್ಪ ನನಗೆ ಗೊತಿಲ್ಲ ಹೈಕಮಾಂಡ್ ನಿರ್ಧಾರ ಎಂದರು ಆದರೆ ಲಕ್ಷ್ಮಣ್ ಸವದಿ ಸೊಕ್ಕಿನ ಮನುಷ್ಯ ಎಂದು ಸವದಿ ವಿರುದ್ಧ ಬೆಂಕಿ ಕಾರಿದರು.

ಅಥಣಿ ಡಿಸಿಸಿ ಬ್ಯಾಂಕ್ ನಲ್ಲಿ ಮಹೇಶ್ ಕುಮಠಳ್ಳಿ ಸ್ಪರ್ದೆ ಮಾಡುತ್ತಾರೆ ಕಾಗವಾಡ ಶ್ರೀನಿವಾಸ ಪಾಟೀಲ್ ಸ್ಪರ್ದೆ ಮಾಡುತ್ತಾರೆ, ಕನ್ನೇರಿ ಮಠದಲ್ಲಿ ಲಿಂಗಾಯತ ಶಾಸಕರು ಒಗ್ಗುಡಿಸಿ ಸವದಿ ಸಭೆ ಮಾಡಿ ಮಾತನಾಡುತ್ತಾರೆ ಜಾರಕಿಹೋಳಿ ಕುಟುಂಬದ ವಿರುದ್ದ ಲಿಂಗಾಯತರು ಒಗ್ಗಟ್ಟಾಗೋಣಾ ಎಂದು ನಾವು ಜಾರಕಿಹೊಳಿ ಕುಟುಂಬ ಯಾವತ್ತೂ ಲಿಂಗಾಯತ ವಿರುದ್ಧ ಅಲ್ಲ
"ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಲಿಂಗಾಯತ ಧರ್ಮದ ಅಧ್ಯಕ್ಷ ಆಗುತ್ತಾರೆ" ನಾವು ಲಿಂಗಾಯತರನ್ನೆ ಅಧ್ಯಕ್ಷ ಮಾಡುತ್ತೇವೆ ಜಾರಕಿಹೊಳಿ ಕುಟುಂಬ ಲಿಂಗಾಯತ ವಿರೋಧಿ ಅಲ್ಲವೆಂದು ಸ್ಪಷ್ಟೀಕರಿಸಿದರು, ಅಥಣಿಯಲ್ಲಿ ರೈತರಿಗೆ ಮೋಸವಾಗುತ್ತಿದೆ ಪಕ್ಷಾತೀತವಾಗಿ ಪತ್ತು ನೀಡುತ್ತಿಲ್ಲಾ ,ಈ ಬಾರಿ ನಮ್ಮ ಪ್ಯಾನಲ್ ಅಧಿಕಾರಿಕ್ಕೆ ಬರುವದು ಖಚಿತ , ಅಧಿಕಾರಕ್ಕೆ ಬಂದ ನಂತರ ನಾವು ಸಹ ಅವರ ಬೆಂಬಲಿಗರಿಗೆ ಪತ್ತು ನೀಡಲು ಹಾಗೆ ಮಾಡುವದಿಲ್ಲಾ ಎಲ್ಲರಿಗೂ ಪತ್ತು ನೀಡುತ್ತೇವೆ ಎಂದು ಹೇಳಿದರು


2023 ರಲ್ಲಿ ನನಗೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ದೆಹಲಿಂದ ಕರೆ ಬಂದಿತ್ತು ನಾನು ಅವತ್ತು ನೀರಾಕರಿಸಿದ ಒಂದು ವೇಳೆ ನಾನು ಕಾಂಗ್ರೆಸ್ ಸೇರಿದರೆ ಇವತ್ತು ಮಂತ್ರಿ ಆಗುತ್ತಿದೆ , ಆದರೆ ಸವದಿ ಬಿಜೆಪಿ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಓಡಿದ ಲಕ್ಷ್ಮಣ್ ಸವದಿ ಇರುವ ವೇದಿಕೆಯನ್ನು ನಾನು ಹಚ್ಚಿಕಳ್ಳುದಿಲ್ಲ ಎಂದು ಸಪತ ಮಾಡಿದರು.

ಈ ವೇಳೆ ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರೈತರ ಅಭಿವೃದ್ಧಿಗಾಗಿ ನಿಪಕ್ಷಪಾತವಾಗಿ ಮಾಡೋಣಾ ಎಂದು ಹೇಳುತ್ತಾರೆ ಆದರೆ ಅಥಣಿಯಲ್ಲಿ ತಮಗೆ ಬೇಕಾದವರಿಗೆ ಮಾತ್ರ ಸಾಲದ ಪಥ್ಥು ನೀಡುತ್ತಾರೆ ಮತ್ತೆ ಇದು ರಾಜಕೀಯ ಅಲ್ವಾ , ಬಿಜೆಪಿ ಬೆಂಬಲಿಗ ಪ್ರಾಥಮಿಕ ಕೃಷಿ ಪತ್ತಿಗೆ ಯಾವುದೆ ಸಾಲದ ಸೌಲಭ್ಯ ನಿಡಿಲ್ಲಾ ಅದರಲ್ಲಿ ರಾಜಕೀಯ ಮಾಡುತ್ತಾರೆ ಎಂದು ಆರೋಪಿಸಿದರು .

ಮುಂದುವರೆದು ಮಾತನಾಡಿ ೨೦೧೯ ರಲ್ಲಿ ರಮೇಶ ಕತ್ತಿ ಹಾಗೂ ಉಮೇಶ ಕತ್ತಿ ಅವರು ನನಗೆ ಡಿಸಿಸಿ ಬ್ಯಾಂಕ ಚುನವಣೆಗೆ ನಿಲ್ಲಿ ಎಂದು ಒತ್ತಡ ಹಾಕಿದರು ನಂತರ ಅಥಣಿಗೆ ಬಂದು ಶಾಸಕ ಲಕ್ಷ್ಮಣ ಸವದಿ ಅವರೊಂದಿಗೆ ಹೊಂದಾಣಿಕೆಯಾದರು , ಈಗ ನಾನು ಚುನಾವಣೆಯ ಎದುರಿಸಲು ಸಿದ್ದವಾಗಿದ್ದೇನೆ , ಫಲಿತಾಂಶ ಏನೆ ಬರಲಿ ಸ್ಪರ್ಧೆ ಖಚಿತ ಎಂದು ಹೇಳಿದರು .

ಈ ವೇಳೆ ಮಾಜಿ ಸಚಿವ ಶ್ರೀಮಂತ ಪಾಟೀಲ ಮುಖಂಡ ಸಿದ್ದಪ್ಪ ಮುದಕ್ಕಣ್ಣವರ ಮಾತನಾಡಿದರು .

ಈ ವೇಳೆ ಬಿಜೆಪಿ ಅದ್ಯಕ್ಷರಾದ ಡಾ.ರವಿ ಸಂಕ , ಉಪಾದ್ಯಕ್ಷರಾದ ಸಿದ್ದು ಪಾಟೀಲ, ಮಲ್ಲಪ್ಪಾ ಹಂಚಿನಾಳ , ಜಿಲ್ಲಾ ರೈತ ಮೋರ್ಚಾ ಉಪಾದ್ಯಕ್ಷ ಅಣ್ಣಪ್ಪಾ ಹಳ್ಳೂರ, ಮುಖಂಡರಾದ ಧರೇಪ್ಪಾ ಠಕ್ಕಣ್ಣವರ, ಅಪ್ಪಾಸಬ ಅವತಾಡೆ , ಪ್ರಭಾಕರ ಚೌಹ್ವಾನ , ರವಿ ಪೂಜಾರಿ, ಮುರಘೇಶ ಕುಮಠಳ್ಳಿ , ಅಶೋಕ ಯಲಡಗಿ,ನಾನಾಸಾಬ ಅವತಾಡೆ ,ಆರ.ಎಲ್.ಪಾಟೀಲ, ಮಲ್ಲಿಕಾರ್ಜುನ ಅಂದಾನಿ‌ ಸೇರಿದಂತೆ ಅನೇಕರು ಉಪಸ್ಥಿತಿ ಇದ್ದರು .

7
248 views