ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಬೋಧನಾ ಕಾರ್ಯಕ್ರಮ
ಧಾರವಾಡ ಆ.೧೯: ನಗರದ ಎಸ್‌ಡಿಎಂ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ “ಶಿಕ್ಷಣಶಾಸ್ತ್ರ ಮತ್ತು ವೃತ್ತಿಪರ ಬೆಳವಣಿಗೆಯನ್ನು ಮುನ್ನಡೆಸುವುದು” ಎಂಬ ಶೀರ್ಷಿಕೆಯ ಐದು ದಿನಗಳ ಬೋಧನಾ ಕಾರ್ಯಕ್ರಮ ನಡೆಯಿತು.
ಎಸ್ ಡಿಎಂಇ ಕಾರ್ಯದರ್ಶಿ ಜೀವಂಧರ್ ಕುಮಾರ್ ಅವರು ಉದ್ಘಾಟನಾ ಭಾಷಣ ಮಾಡಿ, ಬೋಧನೆಯಲ್ಲಿ ಸಕ್ರಿಯ ಕಲಿಕೆಯ ತಂತ್ರಗಳು, ಅಂತರಶಿಸ್ತೀಯ ಸಹಯೋಗ ಮತ್ತು ತಂತ್ರಜ್ಞಾನ ಏಕೀಕರಣದ ಅಗತ್ಯವನ್ನು ಒತ್ತಿ ಹೇಳಿದರು.
ಪ್ರಾಂಶುಪಾಲ ಡಾ.ರಮೇಶ್ ಎಲ್.ಚಕ್ರಸಾಲಿ, ಅಕಾಡೆಮಿಕ್ ಪ್ರೋಗ್ರಾಂನ ಡೀನ್ ಡಾ.ವಿಜಯಾ ಸಿ. ಮಾತನಾಡಿದರು.
ಪ್ರಾರಂಭದಲಲಿ ಪ್ರೊ.ಸುಮಂಗಲಾ ಬಿ. ಪ್ರಾರ್ಥಿಸಿದರು. ಪ್ರೊ. ಇಂದಿರಾ ಉಮರ್ಜಿ ಕಾರ್ಯಕ್ರಮ ನಿರೂಪಿಸಿದರು. ಡಾ.ಲೋಕೇಶ್ವರಿ ಎನ್. ವಂದಿಸಿದರು.