logo

ಊರಿನ ಹೆಸರು ತಪ್ಪು: ಕಂಪನಿ ವಿರುದ್ಧ ಆಕ್ರೋಶ.

ಚಿತ್ತಾಪುರ: ಅದಾನಿ ಮಾಲಿಕತ್ವ ಓರಿಯಂಟ್ ಸಿಮೆಂಟ್ ಕಂಪೆನಿಯ ಮುಖ್ಯದ್ವಾರ ಕಾಲೊನಿ ಗೇಟ್ ದಿಗ್ಗಾಂವ ಗ್ರಾಮಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ಅಳವಡಿಸಿದ ಬ್ಯಾನ‌ರ್ ನಲ್ಲಿ ದಿಗ್ಗಾಂವ ಗ್ರಾಮದ ಹೆಸರು ಡಿಗ್ಗಾನ್ ಅಂತಾ ಬರೆದದ್ದು ಕಂಡು ಸ್ಥಳೀಯ ಸಾರ್ವಜನಿಕ ವಲಯದಲ್ಲಿ ಕಂಪೆನಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಂತರ ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ ಕೆಲ ಕನ್ನಡ ಅಭಿಮಾನಿಗಳು ಮಾತನಾಡಿ ಕಂಪನಿಯವರು ಎರಡು/ಮೂರು ದಿನಗಳ ಬ್ಯಾನ‌ರ್ ತೆಗೆದು ಗ್ರಾಮದ ಹೆಸರು ಸರಿಪಡಿಸಿ ಬ್ಯಾನ‌ರ್ ಅಳವಡಿಸಬೇಕು. ಇಲ್ಲವಾದರೆ ಆ ಬ್ಯಾನ‌ರ್ ತೆಗೆದು ಹಾಕಲಾಗುವುದು ಅಥವಾ ಬ್ಯಾನ‌ರ್ ಗೆ ಕಪ್ಪು ಮಸಿ ಬಳೆಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಎಲ್ಲಿನಂದೂ ಬಂದು ಇಲ್ಲಿಯ ಸಂಪನ್ಮೂಲ ಬಳಸಿಕೊಂಡು ನಮ್ಮ ನಾಡಿನ ಭಾಷೆಗೆ ದಕ್ಕೆ ತರುವು ಕೆಲಸ ಮಾಡುವುದು ಸರಿಯಲ್ಲ ಎಂದು ಸ್ಥಳೀಯರು ಕಂಪನಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

6
265 views