logo

ರಾಡಿ ನೀರು ಪೂರೈಕೆ, ರೋಗಗಳ ಭೀತಿಯಲ್ಲಿ ಜನತೆ.

ಚಿತ್ತಾಪುರ: ಸತತವಾಗಿ ಸುರಿಯುತ್ತಿರುವ
ಮಳೆಯಿಂದ ಪಟ್ಟಣದ ಮನೆಗಳಿಗೆ ರಾಡಿ ನೀರು ಪೂರೈಕೆಯಾಗುತ್ತಿದ್ದು ಸಾರ್ವಜನಿಕರು ಅನಿವಾರ್ಯವಾಗಿ ಅದೇ ನೀರು ಬಳಸುವ ಪರಿಸ್ಥಿತಿ ಬಂದಿದೆ ಎಂದು ಬಿಜೆಪಿ ಯುವ ಮುಖಂಡ ರಮೇಶ ಕಾಳನೂರ ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಾಡಿ ನೀರು ಪಟ್ಟಣದ ಜನರು ಕುಡಿದು ಆನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೇ ಇದನ್ನು ಪುರಸಭೆ ಗಮನದಲ್ಲಿಟ್ಟುಕೊಂಡು ಕೊಡಲೇ ಈ ಸಮಸ್ಯೆ ಬಗೆಹರಿಸಬೇಕು ಎಂದರು.

ಕಾಗಿಣಾ ನದಿಯಲ್ಲಿ ಸತತ 2 ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಹೆಚ್ಚು ಮಣ್ಣು ಮಿಶ್ರಿತ ನೀರು ಶುದ್ದೀಕರಣ ಘಟಕಕ್ಕೆ ಬರುತ್ತಿದೆ. ಸೂಕ್ತವಾಗಿ ಶುದ್ದೀಕರಣ ಮಾಡಿದರೂ ಕೂಡಾ ನೀರಿನಲ್ಲಿ ಮಣ್ಣು ಮಿಶ್ರಿತವಾಗುತ್ತಿದೆ. ಕಾರಣ ನದಿಯಲ್ಲಿ ಕಲುಷಿತ ನೀರು ನಿಯಂತ್ರಣಕ್ಕೆ ಬರುವವರೆಗೆ ಸಾರ್ವಜನಿಕರು ಸಹಕರಿಸಬೇಕು ಹಾಗೂ ನೀರನ್ನು ಸೋಸಿ ಕಾಯಿಸಿ ಆರಿಸಿ ಕುಡಿಯಲು ಬಳಸಬೇಕು ಎಂದು ಮನೋಜಕುಮಾರ ಗುರಿಕಾರ
ಮುಖ್ಯಾಧಿಕಾರಿಗಳು ಪುರಸಭೆ ಚಿತ್ತಾಪೂರ ಅವರು ತಿಳಿಸಿದ್ದರು.

17
2281 views