ಕೋಲಾರದಲ್ಲಿ ಆಟೋ ಚಾಲಕರಿಂದ 79ನೇ ಸ್ವಾತಂತ್ರ್ಯ ದಿನಾಚರಣೆ
ಕೆ.ಎಸ್.ಆರ್.ಟಿಸಿ. ಬಸ್ ನಿಲ್ದಾಣದ ಜಯ ಕರ್ನಾಟಕ ಆಟೋ ನಿಲ್ದಾಣ ಹಾಗೂ ಇಟಿಸಿಎಂ ವಿಂಗ್ಸ್ ಆಸ್ಪತ್ರೆ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರ ವತಿಯಿಂದ*79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಭವ್ಯವಾಗಿ ಆಚರಿಸಲಾಯಿತು.ಇದಲ್ಲದೆ ಎಲ್ಲಾ ಆಟೋ ಚಾಲಕ ನಿಲ್ದಾಣಗಳಲ್ಲಿ ಧ್ವಜಾರೋಹಣ ನೆರವೇರಿಸಿ, ಸಿಹಿ ಹಂಚುವ ಮೂಲಕ ದೇಶಭಕ್ತಿ ಮೆರೆದರು.
ಈ ಸಂದರ್ಭದಲ್ಲಿ ಗಣ್ಯರು ಹಾಗೂ ಅನೇಕ ಆಟೋ ಚಾಲಕರು ಉಪಸ್ಥಿತರಿದ್ದು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಏಕತಾ, ದೇಶಪ್ರೇಮ ಹಾಗೂ ಸಾಮಾಜಿಕ ಜಾಗೃತಿಯ ಸಂದೇಶವನ್ನು ಹಂಚಿಕೊಳ್ಳಲಾಯಿತು.ಈ ಕೆ ವಿ ಸುರೇಶ್ ಕುಮಾರ್,ಜೆ ಮಂಜುನಾಥ್, ಮುಸ್ತಾಕ್ ಎಂ. ಟಿ. ಎಲ್. ಮಂಜು,ಬಾಬು,ಸುಧಾಕರ್ ಪಿ,ಅಸ್ಲಾಂ, ನದಿಮ್, ನಿಖಿಲ್, ಹರೀಶ್,ಎಂ ಶಿವ, ಇನ್ನು ಹಲವು ಆಟೋ ಚಾಲಕರು ಭಾಗವಹಿಸಿದರು. ಶುಭಾಶಯಗಳು ತಿಳಿಸಿದರು.*