logo

ಬಾಗಲಕೋಟೆ *ರಾಜ್ಯದಲ್ಲಿ ದ್ವಿಭಾಷಾ ನೀತಿ ಭಾಷಾ ಅಲ್ಪಸಂಖ್ಯಾತಗಳಿಗೆ ಮಾರಕ. ದಂಡಿಯಾ* ಬಾಗಲಕೋಟ: ರಾಜ್ಯದಲ್ಲಿ ಈಗ ತ್ರಿಭಾಷಾ ನೀತಿ ಜಾರಿಯ

ಬಾಗಲಕೋಟೆ

*ರಾಜ್ಯದಲ್ಲಿ ದ್ವಿಭಾಷಾ ನೀತಿ ಭಾಷಾ ಅಲ್ಪಸಂಖ್ಯಾತಗಳಿಗೆ ಮಾರಕ. ದಂಡಿಯಾ*

ಬಾಗಲಕೋಟ: ರಾಜ್ಯದಲ್ಲಿ ಈಗ ತ್ರಿಭಾಷಾ ನೀತಿ ಜಾರಿಯಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ತ್ರಿಭಾಷಾ ಸೂತ್ರ ವಿವಾದ
ಸ್ವರೂಪ ಪಡೆದುಕೊಂಡಿದೆ ಅಂತಾ ಇದರ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಪ್ರೋ ಸುಖ
ದೇವ್.ಥೋರಾಟ್ ಇವರ ನೇತೃತ್ವದಲ್ಲಿ ಆಯೋಗ ರಚಿಸಲಾಗಿತ್ತು. ಆಯೋಗ ತಮ್ಮ ಅಂತಿಮ ವರದಿಯಲ್ಲಿ ಎಲ್ಲ ಮಾದರಿಯ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕದಿಂದ 5 ತರಗತಿ ವರೆಗೆ ಕನ್ನಡ ಮಾತೃಭಾಷೆಯನ್ನೇ ಬೋಧನೆ ಮಾಡುವುದನ್ನು ಕಡ್ಡಾಯ ಗೊಳಿಸಬೇಕೆಂದು ಶಿಫಾರಸು ಮಾಡಿದೆ.
ಆಯೋಗದ ಅಧ್ಯಕ್ಷ ತಮ್ಮ ಅಂತಿಮ ವರದಿಯನ್ನು ಸಲ್ಲಿಸಿ ರಾಜ್ಯ ಹಾಗೂ ಕೇಂದ್ರ
ಮಂಡಳಗಳ ಶಾಲೆಗಳಲ್ಲಿ 5 ನೇ ತರಗತಿ ವರೆಗೆ
ಕನ್ನಡ ಅಥವಾ ಮಾತೃಭಾಷೆ ಮತ್ತು ದ್ವಿಭಾಷಾ
ದ್ವಿಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕೆಂದು ರಾಜ್ಯ ಸರಕಾರಕ್ಕೆ
ಶಿಫಾರಸು ಮಾಡಿದೆ ಇದನ್ನು ಜಾರಿಗೊಳಿಸಿದರೆ
ಭಾಷಾ ಅಲ್ಪಸಂಖ್ಯಾತರ ಭಾಷೆಗಳಾದ ತೆಲಗು
ತಮಿಳು, ಮರಾಠಿ, ಉರ್ದು, ಮಲೆಯಾಳಂ,
ಹಾಗೂ ಸಂಸ್ಕೃತ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವವು. ದ್ವಿಭಾಷಾ ನೀತಿ ಜಾರಿಗೆ ತರಬಾರದೆಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷರಾದ ಎ.ಎ.ದಂಡಿಯಾ ತೀವ್ರ ವಿರೋಧ
ವ್ಯಕ್ತಪಡಿಸಿದ್ದಾರೆ.
ಪ್ರೊ.ಸುಖದೇವ್.ತೋರಾತ್ ಇವರು ಭಾಷಾ ಅಲ್ಪಸಂಖ್ಯಾತರರವರ ಜೊತೆ ಚರ್ಚಿಸದೆ
ತನ್ನ ವರದಿಯಲ್ಲಿ ದ್ವಿಭಾಷಾ ನೀತಿಯನ್ನು ಅನುಷ್ಠಾನ ಗೊಳಿಸುವುದು ಸೂಕ್ತ ಹಾಗೂ ಕನ್ನಡ ಅಥವಾ ಮಾತೃ ಭಾಷೆ ಜೊತೆಗೆ ಆಂಗ್ಲ ಭಾಷೆ ಬೋಧಿಸುವುದು ಸೂಕ್ತವೆಂದೂ ಅಭಿಪ್ರಾಯ ಪಟ್ಟಿದ್ದಾರೆ.
ಇವರ ವರದಿಯ ಸಾರಾಂಶವನ್ನು ಗಮನಿಸಿದರೆ ಪರೋಕ್ಷವಾಗಿ ತ್ರಿಭಾಷಾ ನೀತಿಯ ಅವಶ್ಯಕತೆ ಇಲ್ಲವೆಂದು ಸ್ಪಷ್ಟಪಡಿಸಿದಂತಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಆಂಗ್ಲ ಭಾಷೆ ಅತ್ಯವಶ್ಯ.
ನಮ್ಮ ದೇಶದ ಸಂವಿಧಾನದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಲು ಸ್ಪಷ್ಟ ಪಡಿಸಲಾಗಿದೆ. ಆಯೋಗ ಈ ಅಂಶವನ್ನು
ಗಮನಿಸಿದಿಯೋ ಇಲ್ಲ ತಿಳಿಯದಾಗಿದೆ.
ರಾಜ್ಯದಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿದೆ. ಇದು ಸ್ವಾಗತಾರ್ಹ.
ಅದರಂತೆ ರಾಜ್ಯದಲ್ಲಿ ತೆಲಗು, ತಮಿಳು, ಮರಾಠಿ, ಉರ್ದು, ಸಂಸ್ಕೃತ ಅನೇಕ ಭಾಷಾ ಅಲ್ಪಸಂಖ್ಯಾತರ ಭಾಷಾ ಶಾಲೆಗಳಿವೆ. ಅವರು ತಮ್ಮದೇಯಾದ ಮಾತೃ ಭಾಷೆ ಹೊಂದಿದ್ದಾರೆ. ರಾಜ್ಯ ಭಾಷೆ ಕನ್ನಡ ಕಡ್ಡಾಯ ಅದರಂತೆ ಭಾಷಾ ಅಲ್ಪಸಂಖ್ಯಾತರ ಮಾತೃಭಾಷೆ ಹಾಗೂ ಅಂತಾರಾಷ್ಟ್ರೀಯ ಭಾಷೆ ಇವೂ ಅತ್ಯವಶ್ಯ.
ರಾಜ್ಯ ಭಾಷೆ ಕನ್ನಡ ಕಡ್ಡಾಯ, ಸಂವಿಧಾನ ಪ್ರಕಾರ ಆಯಾ ಮಾತೃಭಾಷೆಗಳು ಹಾಗೂ ಈಗಿರುವಂತೆ ಅಂತರರಾಷ್ಟ್ರೀಯ ಭಾಷೆ ಆಂಗ್ಲ ಭಾಷೆ ಹೀಗೆ ತ್ರಿಭಾಷಾ ನೀತಿಯನ್ನು ಮುಂದುವರೆಸಬೇಕೆಂದು ದಂಡಿಯಾ ಸರಕಾರಕ್ಕೆ ಆಗ್ರಹ ಪಡಿಸಿದ್ದಾರೆ.
ಇದರಿಂದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ತೀರ
ಬಡಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ತಮ್ಮ ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಲು ಅವಕಾಶ ದೊರೆತಂತಾಗುವುದು. ಎಂದು ಪತ್ರಿಕಾ ಹೇಳಿಕೆ ನೀಡಿರುತ್ತಾರೆ
ವರದಿ ದಾವಲ್ ಶೇಡಂ

37
2517 views