logo

ಗಣೇಶ್ ಚತುರ್ಥಿ–ಈದ್ ಮಿಲಾದ್ ಶಾಂತಿಯುತವಾಗಿ ಆಚರಿಸಿ: ಸಿಪಿಐ ಫಸಿಯುದ್ದೀನ


ತಾಳಿಕೋಟಿ: ಪಟ್ಟಣದಲ್ಲಿ ಈ ಮಾಸಾಂತ್ಯದಲ್ಲಿ ನಡೆಯಲಿರುವ ಗಣೇಶ್ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಶಾಂತಿ–ಸೌಹಾರ್ದತೆಯಿಂದ, ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ಆಚರಿಸುವಂತೆ ಮುದ್ದೇಬಿಹಾಳ ಸಿಪಿಐ ಮೊಹಮ್ಮದ್ ಫಸಿಯುದ್ದೀನ ಕರೆ ನೀಡಿದರು.

ಬುಧವಾರ ಪಟ್ಟಣ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಣೇಶ್ ಪ್ರತಿಷ್ಠಾಪನಾ ಮಂಡಳಿಗಳು ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಬೇಕು, ಸಾಧ್ಯವಾದಷ್ಟು ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು, ಹಾಗೂ ಪೊಲೀಸ್–ಹೆಸ್ಕಾಂ–ಪುರಸಭೆ ಅನುಮತಿ ಪಡೆಯಲು ಠಾಣೆಯಲ್ಲಿಯೇ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು. ಪ್ರತಿಷ್ಠಾಪನಾ ಮಂಡಳಿಯ ಮುಖ್ಯಸ್ಥರ ಹೆಸರು–ಮೊಬೈಲ್ ಸಂಖ್ಯೆ ಇಲಾಖೆಗೆ ಕಡ್ಡಾಯವಾಗಿ ನೀಡಬೇಕೆಂದರು.

ಪಿಎಸ್‌ಐ ಜ್ಯೋತಿ ಖೋತ ಅವರು ಪರಿಸರ ಹಾನಿ ತಪ್ಪಿಸಿ, ಸ್ಥಳದಲ್ಲಿಯೇ ಇರಿ, ಇಲಾಖೆಯೊಂದಿಗೆ ಸಹಕರಿಸಿ ಎಂದು ವಿನಂತಿಸಿದರು. ಪಟ್ಟಣದ ಗಣ್ಯರಾದ ಪ್ರಭುಗೌಡ ಮದರಕಲ್ಲ, ಇಬ್ರಾಹಿಂ ಮನ್ಸೂರ್, ಜೈ ಭೀಮ ಮುತ್ತಗಿ ಹಾಗೂ ಪ್ರತಿಷ್ಠಾಪನಾ ಮಂಡಳಿಯ ನಾಯಕರು ಹಬ್ಬಗಳನ್ನು ಸಾಮರಸ್ಯದಿಂದ ಆಚರಿಸೋಣ ಎಂದು ಕರೆ ನೀಡಿದರು.

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ, ಹೆಸ್ಕಾಂ ಎಇಇ ವಿಜಯಕುಮಾರ್ ಬಿರಾದಾರ, ಅಗ್ನಿಶಾಮಕ ದಳದ ಮಹಾಂತೇಶ ಬಿರಾದಾರ, ಪುರಸಭೆ ಸದಸ್ಯರು, ಗಣ್ಯರು, ಗಣೇಶ್ ಪ್ರತಿಷ್ಠಾಪನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

7
499 views