
ಡಾ. ಕೆ. ಸುಧಾಕರ್ ಪರ ಎಸ್ಸಿ ಎಸ್ಟಿ ಸಮುಧಾಯ ಬ್ಯಾಟಿಂಗ್
ಎಪ್ ಐ ಆರ್ ಧಾಖಲಾದ ಮಾತ್ರಕ್ಕೆ ಬಂದಿಸಬೇಕೆಂದಿಲ್ಲ : ಟಿಪಿಎಸ್ ಅಧ್ಯಕ್ಷ ಆವಲಕೊಂಡರಾಯಪ್ಪ
ಚಿಕ್ಕಬಳ್ಳಾಪುರ.. ಸಂಸದ ಡಾ ಕೆ ಸುಧಾಕರ್ ಮೇಲೆ ನೇಣಿಗೆ ಶರಣಾದ ಬಾಬು ಪ್ರಕರಣ ವಿಚಾರದಲ್ಲಿ
ಎಪ್ ಐ ಆರ್ ಧಾಖಲು ಮಾಡಿಸಿ ರಾಜಕೀಯ ಮಾಡುತ್ತಿರುವುದನ್ನ ಎಸ್ಸಿ ಎಸ್ಟಿ ಸಮುಧಾಯ ವಿರೋದಿಸುತ್ತದೆ ಡಾ ಕೆ.ಸುಧಾಕರ್ ಶಾಸಕರಾಗಿ ಸಚಿವರಾಗಿದ್ದಾಗ ಎಸ್ಸಿ ಎಸ್ಟಿ ಸಮುಧಾಯದ ಜತೆ ತುಂಬಾ ವಿಶ್ವಾಸದಿಂದ ಇರುತಿದ್ದರು ಅವರ ಮೇಲೆ ಶಾಸಕರು ಉಸ್ತುವಾರಿ ಸಚಿವರು ಉದ್ದೇಶಪೂರ್ವಕವಾಗಿ ಎಪ್ ಐ ಆರ್ ಹಾಕಿಸಿ ದಲಿತ ವಿರೋದಿ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಎಸ್ಸಿ ಎಸ್ಟಿ ಸಮುಧಾಯ ಒಟ್ಟಾಗಿ ಸುಧಾಕರ್ ಪರ ಬ್ಯಾಟಿಂಗ್ ಮಾಡಿದರು.
ಸಂಸದ ಡಾ ಕೆ ಸುಧಾಕರ್ ಮೇಲೆ ದಲಿತ ಯುವಕ ಕಾರ್ ಡ್ರೈವರ್ ಪ್ರಕರಣವನ್ನ ಬೇಕಾಗಿ ತಿರುಚಿದ್ದಾರೆ ಸಂಸದ ಡಾ ಕೆ .ಸುಧಾಕರ್ ಯಾವತ್ತು ಎಸ್ಸಿ ಎಸ್ಟಿಗಳ ಪರ ಇದ್ದೇವೆ ಅವರು ಯವಾತ್ತೂ ಆರೀತಿಯ ಲಂಚಕ್ಕೆ ಕೈ ಚಾಚುವರಲ್ಲ ಎಂದು ಎಸ್ಸಿ ಎಸ್ಟಿ ಸಮುಧಾಯದ ಮುಖಂಡರು
ಸುಧಾಕರ್ ಪರ ಬ್ಯಾಟಿಂಗ್ ಮಾಡಿದರು.
ನಗರದ ಸಂಸದ ಡಾ ಕೆ ಸುಧಾಕರ್ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಟಿ ಕರೆದಿದ್ದ ಎಸ್ಸಿ ಎಸ್ಟಿ ಸಮುಧಾಯದ ಮುಖಂಡರಲ್ಲಿ ಟಿ ಎ ಪಿ ಸಿ ಎಂ ಎಸ್ ಅಧ್ಯಕ್ಷ ಆವಲಕೊಂಡರಾಯಪ್ಪ ಮಾತನಾಡಿ ಅವರೊಬ್ಬ ಜನಪ್ರತಿನಿಧಿ ಅವರ ಬಳಿ ಕೆಲಸ ಕೊಡಿಸಿ ಎಂದು ಅಥವಾ ಕೆಲಸಕ್ಕೆ ಶಿಫಾರಸ್ಸು ಮಾಡಿ ಎಂದು ನೂರಾರು ಜನ ಹೊಗ್ತಾರೆ ಬರ್ತಾರೆ ಹಾಗೆಯೆ ಬಾಬು ರನ್ನ ನಾಗೇಶ್ ಎನ್ನುವವರು ಕರೆದುಕೊಂಡು ಹೋಗಿರಬಹುದು ಹಾಗಂದ ಮಾತ್ರಕ್ಕೆ ನಾಗೇಶ್ ಮಂಜುನಾಥ್ ತೆಗೆದುಕೊಂಡಿರೋ ದುಡ್ಡು ಸುಧಾಕರ್ ಗೂ ಸೇರಿದೆ ಅನ್ನೋ ಅಪಚಾರವನ್ನ ನಾವು ಒಪ್ಪೋದಿಲ್ಲ ಕಾಂಗ್ರೇಸ್ ನವರು ಇದೆ ನಿಜ ಎಂದು ಮತ್ತೆ ಮತ್ತೆ ಕ್ಯಾತೆ ತೆಗದರೆ ಎಸ್ಸಿ ಎಸ್ಟಿ ಸಮುಧಾಯ ಒಟ್ಟಾಗಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಚ್ವರ ಎಂದರು.
ವಾಲ್ಮೀಕಿ ನಾಯಕ ಸಂಘದ ಮುಖಂಡ ಗಂಗರೇ ಕಾಲವೇ ಮೂರ್ತಿ ಮಾತನಾಡಿ ನೇಣು ಬಿಗಿದುಕೊಂಡ ಬಾಬು ಎನ್ನುವವನು ಸಾವನ್ನಪ್ಪಿದ್ದಾನೆ ಆತನಿಗೆ ಸಿಗೋದೆ ತಿಂಗಳಿಗೆ 12-15 ಸಾವಿರ ಸಂಬಳ ಅಂತಹುದರಲ್ಲಿ 40 ಲಕ್ಷ ಲಂಚ ಕೊಡಲು ಎಲ್ಲಿಂದ ಬಂತು ಅಷ್ಟಕ್ಕೂ ಆ ವ್ಯಕ್ತಿ ಗೌರಿಬಿದನೂರಿನಲ್ಲಿ ಇಡಗೂರಿನಿಂದ ಬಂದು ಬಾಪೂಜಿ ನಗರದಲ್ಲಿ ವಾಸವಾಗಿದ್ದ ನಮ್ಮ ತಾಲ್ಲೂಕಿನವನೂ ಅಲ್ಲ ಅಂತವನ ಪರ ನಮ್ಮ ತಾಲ್ಲೂಕು ದಲಿತರು ಅಷ್ಟೊಂದು ಮುತುವರ್ಜಿ ವಹಿಸುವ ಅಗತ್ಯವೇನು ಡಾ ಕೆ ಸುಧಾಕರ್ ಮೇಲೆ ರಾಜಕೀಯ ಷ್ಯಡ್ಯಂತ್ರದ ಗೂಬೆ ಕೂರಿಸಲು ದಲಿತ ವಿರೋಧಿ ಎಂದು ತೋರಿಸಲು ಪೋಸ್ಟರ್ ಗಳನ್ನ ದಲಿತರ ಹೆಸರಲ್ಲಿ ರಾತ್ರೋ ರಾತ್ರಿ ಸಾಗುಸುತಿದ್ದ ಅವಶ್ಯಕತೆ ಏನಿತ್ತು ಇದೆಲ್ಲಾ ಕಾಂಗ್ರೇಸ್ ನವರ ದೊಂಬರಾಟವಲ್ಲದೆ ಇನ್ನೆನು ಎಂದು ಕುಟುಕಿದರು.ಸುದ್ದಿಗೋಷ್ಟಿಯಲ್ಲಿ,ಸಿಎಂಸಿ ಮಾಜಿ ಅಧ್ಯಕ್ಷ ಮುನಿಕೃಷ್ಣ,ಮುದ್ದೇನಹಳ್ಳಿ ಶಿವಕುಮಾರ್,ನಗರಸಭೆ ಉಪಾಧ್ಯಕ್ಷ ಜೆ ನಾಗರಾಜ್,
ಈರಚಿನ್ನಪ್ಪ,ವೆಂಕಟೇಶ್,ತೇಜು ಪಾಪು, ಮುನಿನಾರಾಯಣಪ್ಪ ನರಸಿಂಹಮೂರ್ತಿ,ಇತರರು ಇದ್ದರು.