logo

ಬಿಜೆಪಿ ಗ್ರಾಮಾಂತರ ಎಸ್‌ಟಿ ಮೋರ್ಚಾ ವತಿಯಿಂದ ಪೊಲೀಸ್ ಠಾಣೆಯಲ್ಲಿ ರಕ್ಷಾ ಬಂಧನ

ಶಿರಾ: ಶಿರಾ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರಕ್ಷಾ ಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಬಿಜೆಪಿ ಶಿರಾ ಗ್ರಾಮಾಂತರ ಎಸ್‌ಟಿ ಮೋರ್ಚಾ ವತಿಯಿಂದ ಆಯೋಜಿಸಲಾಯಿತು.

ಮೋರ್ಚಾ ಅಧ್ಯಕ್ಷ ತೇಜೇಶ್ವರ್ ಅವರು ಕಳ್ಳಂಬೆಳ್ಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿಗೆ ರಾಖಿ ಕಟ್ಟಿದರು. ಸಾಮಾನ್ಯವಾಗಿ ತಂಗಿ ಅಣ್ಣನಿಗೆ ರಾಖಿ ಕಟ್ಟುವ ಪದ್ಧತಿಯಿದೆ. ಆದರೆ ಈ ಬಾರಿ ಎಸ್‌ಟಿ ಮೋರ್ಚಾ ಮಹಿಳೆಯರು ಪೊಲೀಸರಿಗೆ ರಾಖಿ ಕಟ್ಟುವ ಮೂಲಕ, ಪೊಲೀಸ್ ಅಧಿಕಾರಿಗಳಲ್ಲೂ ಒಬ್ಬ ಅಣ್ಣನನ್ನು ಕಂಡಿರುವುದಾಗಿ ತಿಳಿಸಿದರು.

ಪೊಲೀಸರು ಸದಾ ಕರ್ತವ್ಯದಲ್ಲಿದ್ದು, ಎಲ್ಲರ ಸುರಕ್ಷತೆಗೆ ಶ್ರಮಿಸುತ್ತಾರೆ. ಮಹಿಳೆಯರಿಂದ ರಾಖಿ ಕಟ್ಟಿಸಿಕೊಂಡ ನಂತರ, "ಸದಾ ನಿಮ್ಮನ್ನು ಕಾಪಾಡುತ್ತೇವೆ" ಎಂದು ಭರವಸೆ ನೀಡಿದರು.

"ಪೊಲೀಸ್ ಇಲಾಖೆ ಜನರಿಂದ ದೂರದಲ್ಲಿದೆ ಎಂಬ ಅಭಿಪ್ರಾಯವನ್ನು ಹೋಗಲಾಡಿಸಲು, ಜನರೊಂದಿಗೆ ಬಾಂಧವ್ಯ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದೇವೆ" ಎಂದು ಮೋರ್ಚಾ ಅಧ್ಯಕ್ಷ ತೇಜೇಶ್ವರ್ ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮಾಂತರ ಮಂಡಲದ ಗುರುಲಿಂಗಪ್ಪ, ಬಿಜೆಪಿ ಯುವ ಮುಖಂಡರು ವಾಸುದೇವ, ಕೃಷ್ಣಮೂರ್ತಿ, ಹಿರಿಯ ಮುಖಂಡ ಮುನಿರಾಜ್ ಮೇಷ್ಟ್ರು, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಾವೇರಮ್ಮ, ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಉಮೇಶ್, ಮಾಜಿ ಅಧ್ಯಕ್ಷೆ ರಾಧಮ್ಮ, ಹಿರಿಯ ಮುಖಂಡ ಮಲ್ಲೇಗೌಡ, ತರೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಕವಿತಾ ಭೋಜರಾಜು, ಗಂಜಲಗುಂಟೆ ಬಿಜೆಪಿ ಮುಖಂಡರು ರವೀಶ್, ರಾಜಣ್ಣ, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

8
1804 views