logo

ಪಟ್ಟಣದಲ್ಲಿ ಬೃಹತ್ ಕಣ್ಣಿನ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಮಣಿಯಾರ ಚಾರಿಟೇಬಲ್ ಟ್ರಸ್ಟ್ – ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ ಸಹಯೋಗ

ಮಣಿಯಾರ ಚಾರಿಟೇಬಲ್ ಟ್ರಸ್ಟ್ ಹಾಗೂ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಶನಿವಾರ ತಾಳಿಕೋಟಿ ಪಟ್ಟಣದಲ್ಲಿ ಬೃಹತ್ ಕಣ್ಣಿನ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಶಿಬಿರಕ್ಕೆ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ, ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕ ಅಯ್ಯೂಬ ಮಣಿಯಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಕಳೆದ 12 ವರ್ಷಗಳಿಂದ ನನ್ನ ತಂದೆ-ತಾಯಿಯ ಸ್ಮರಣಾರ್ಥವಾಗಿ ಇಂತಹ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ, ಕೇವಲ ಬಡವರ ಸೇವೆಯೇ ಧ್ಯೇಯ. ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರನ್ನು ಸಂಪೂರ್ಣ ಉಚಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿ, ಪುನಃ ಸುರಕ್ಷಿತವಾಗಿ ಮನೆಗೆ ತಲುಪಿಸುವುದೇ ನಮ್ಮ ಜವಾಬ್ದಾರಿ" ಎಂದು ಹೇಳಿದರು. ಅವರು ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರಭುಗೌಡ ಲಿಂಗದಳ್ಳಿ ನೀಡುತ್ತಿರುವ ಸಹಕಾರವನ್ನು ವಿಶೇಷವಾಗಿ ಪ್ರಶಂಸಿಸಿದರು.

ಇಂದಿನ ಶಿಬಿರದಲ್ಲಿ ಒಟ್ಟು 256 ಜನರ ನೇತ್ರ ತಪಾಸಣೆ ನಡೆಯಿತು. ಇವರಲ್ಲಿ 103 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ತಪಾಸಣೆಯನ್ನು ಅನುಗ್ರಹ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರು ನಡೆಸಿ, ಸ್ಥಳೀಯ ಲೋಟಸ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಸಹಾಯಕರಾಗಿ ಕಾರ್ಯನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರಾದ ರೋಷನ್ ಡೋಣಿ, ಎಂ.ಎ. ಮೇತ್ರಿ, ಕಾಸಿಂ ಅಲಿ ಮನ್ಸೂರ್, ಮೈನು ಕೊರ್ತಿ, ಶಫೀಕ ಇನಾಮದಾರ, ದಾದಾ ಎತ್ತಿನಮನಿ, ಆಪ್ತಾಬ್ ಮಣಿಯಾರ, ಸದ್ದಾಂ ಗುರಗುಂಟಾ, ಬಾಬಾ ಎಕೀನ, ಮಹೆಬೂಬ ಎಕೀನ, ಪರ್ವೀನ್ ಮಣಿಯಾರ, ನೂರ ನಮಾಜಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಸಂಗನಗೌಡ ಗಬಸಾವಳಗಿ
ಎಸ್‌ಸಿಎನ್ ಟಿವಿ ನ್ಯೂಸ್, ತಾಳಿಕೋಟಿ

26
205 views