
ಅಗಸ್ಟ 15 ರಿಂದ 19 ರವರೆಗೆ ಜಿಲ್ಲಾ ಮಟ್ಟದ ಕೈಗಾರಿಕಾ ವಸ್ತು ಪ್ರದರ್ಶನ
ಗದಗ (ಕರ್ನಾಟಕ ವಾರ್ತೆ) ಅಗಸ್ಟ 7: ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ, ಜಿಲ್ಲಾ ಪಂಚಾಯತ್, ಗದಗ ಹಾಗೂ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಗಸ್ಟ 15 ರಿಂದ 19 ರವರೆಗೆ ಶ್ರೀ ಸ್ವಾಮಿ ವಿವೇಕಾನಂದ ಸಭಾ ಭವನ ಹಾಗೂ ಕೆ.ಹೆಚ್.ಪಾಟೀಲ ಸಭಾ ಭವನ, ಗದಗದಲ್ಲಿ ಜಿಲ್ಲಾ ಮಟ್ಟದ ಕೈಗಾರಿಕಾ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಸದರಿ ವಸ್ತು ಪ್ರದರ್ಶದಲ್ಲಿ ಗ್ರಾಮೀಣ ಸೂಕ್ಷö್ಮ ಮತ್ತು ಸಣ್ಣ /ಗುಡಿ ಕೈಗಾರಿಕೆಗಳಿಗೆ ವಿಶೇಷವಾಗಿ ಗ್ರಾಮೀಣ ಮತ್ತು ನಗರ ಸ್ವ-ಸಹಾಯ ಗುಂಪುಗಳು ತಯಾರಿಸುವ ಉತ್ಪನ್‌ಗಳಿಗೆ ಪ್ರಚಾರ ನೀಡಿ ಮಾರುಕಟ್ಟೆ ಸೌಲಭ್ಯ ಒದಗಿಸುವ ದೃಷ್ಠಿಯಿಂದ ಈ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ವಸ್ತುಪ್ರದರ್ಶನದಲ್ಲಿ ಕರಕುಶಲ, ಖಾದಿ ಮತ್ತು ಜವಳಿ ಉತ್ಪನಗಳು, ಬಿದಿರು, ಬೆತ್ತದ ಉತ್ಪನಗಳು, ಬ್ಯಾಡಗಿ ಖಾರದ ಪುಡಿ, ಮಸಾಲಾ ಉತ್ಪನಗಳು ಹಾಗೂ ಆಹಾರ ಉತ್ಪನಗಳು, ಗ್ರಾಮೀಣ ಕುಂಬಾರಿಕೆ, ಟೆರಾ ಕೋಟ ಕಟ್ಟಿಗೆಯ ಗೊಂಬೆಗಳು, ಆಟಿಕೆ ಸಾಮಗ್ರಿಗಳು ಮತ್ತು ಅಗರ ಬತ್ತಿ, ರೇಷ್ಮೆ ಕಸೂತಿ ಸೀರೆಗಳು, ಚರ್ಮದ ಉತ್ಪನಗಳು, ಜ್ಯೂಟ ಬ್ಯಾಗ್, ಕಾಟನ್ ಬ್ಯಾಗ ವಿಶೇಷವಾಗಿ ಗದಗ ಶಿಗ್ಲಿ ಮತ್ತು ಗಜೇಂದ್ರಗಡದ ಕೈಮಗ್ಗ ಉತ್ಪನಗಳು ಸಾರ್ವಜನಿಕರ ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿರುತ್ತದೆ.
ವಸ್ತು ಪದರ್ಶನದಲ್ಲಿ ಒಟ್ಟು 35 ಮಳಿಗೆಗಳನ್ನು ಕಾಯ್ದಿರಿಸಲಾಗಿದೆ. ವಸ್ತು ಪ್ರದರ್ಶನವು ಬೆಳಿಗ್ಗೆ 9.30 ರಿಂದ ರಾತ್ರಿ 9.00ರ ವರೆಗೆ ಸಾರ್ವಜನಿಕರು ಭೇಟಿ ನೀಡಬಹುದು. ಈ ವಸ್ತುಪದರ್ಶನದಲ್ಲಿ ಗ್ರಾಮೀಣ ಸೂಕ್ಷö್ಮ ಮತ್ತು ಸಣ್ಣ / ಗುಡಿ ಕೈಗಾರಿಕೆಗಳು / ಮಹಿಳಾ ಉದ್ಯಮಿಗಳು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಲು ಕೋರಿದೆ.