logo

ವಿದ್ಯಾಸಾಗರ್ ಅವರ ರಾಜಿರಹಿತ ಹೋರಾಟದಿಂದ ಸ್ಫೂರ್ತಿ ಪಡೆದ ಚಿಕ್ಕಬಳ್ಳಾಪುರಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಾರ್ವಜನಿಕ ಶಿಕ್ಷಣವನ್ನು ಉಳಿಸಲು ಧ್ವನಿ ಜೋಡಿಸಿದರು!*

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದು ನಗರದಾದ್ಯಂತ ಮಹಾನ್ ಧರ್ಮನಿರಪೇಕ್ಷ - ಮಾನವತವಾದಿ
ಈಶ್ವರಚಂದ್ರ ವಿದ್ಯಾಸಾಗರ್ ಅವರ 134ನೇ ಸ್ಮರಣ ದಿನವನ್ನು ಆಚರಿಸಿದೆವು. ಸರ್ಕಾರಿ ಪ್ರೌಢಶಾಲೆ ಚಿಕ್ಕಬಳ್ಳಾಪುರ ಜಿಲ್ಲೆಚಿಂತಾಮಣಿ ತಾಲೂಕಿನಲ್ಲಿ, ಮತ್ತು ಅನೇಕ ಮೈದಾನಗಳು ಹಾಗೂ ಉದ್ಯಾನವನಗಳು ಸೇರಿದಂತೆ ಹಲವು ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಶಿಕ್ಷಣವಿಲ್ಲದೆ ಯಾವುದೇ ಸಮಾಜವೂ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ದೃಢವಾಗಿ ನಂಬಿದ್ದ ವಿದ್ಯಾಸಾಗರ್, ಜ್ಞಾನವನ್ನು ಎಲ್ಲರಿಗೂ ತಲುಪುವಂತೆ ಐತಿಹಾಸಿಕ ಹೋರಾಟವನ್ನು ನಡೆಸಿದರು.
ಎಲ್ಲಾ ಕೆಳಜಾತಿ ಮತ್ತು ಮಹಿಳೆಯರಿಗೆ ವ್ಯವಸ್ಥಿತವಾಗಿ ಕಲಿಕೆಯನ್ನು ನಿರಾಕರಿಸಲಾಗಿದ್ದ ಸಮಯದಲ್ಲಿ, ವಿದ್ಯಾಸಾಗರ್ 35ಕ್ಕೂ ಹೆಚ್ಚು ಹೆಣ್ಣು ಮಕ್ಕಳ ಶಾಲೆಗಳನ್ನು ಸ್ಥಾಪಿಸಿದರು. ಅವರು ಹಳ್ಳಿ ಹಳ್ಳಿಗೆ ಸಂಚರಿಸಿ, ಸಮಾಜದ ಎಲ್ಲಾ ವರ್ಗದ ಜನರನ್ನು ಶಿಕ್ಷಣ ಪಡೆಯಲು ಪ್ರೋತ್ಸಾಹಿಸಿದರು. ಬ್ರಿಟಿಷ್ ಆಳ್ವಿಕೆಯ ವಿರುದ್ಧ ನಿಲ್ಲಲು ಭಾರತಕ್ಕೆ ಹೊಸ ಪೀಳಿಗೆಯ ಅಗತ್ಯವಿದೆ ಎಂದು ಅರಿತು, ವಿಜ್ಞಾನ, ತರ್ಕ, ಗಣಿತ ಮತ್ತು ಇಂಗ್ಲಿಷ್ ಅನ್ನು ಪರಿಚಯಿಸುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಆಧುನೀಕರಿಸಿದರು.

ಇಂದು, ಶಿಕ್ಷಣವು ಮತ್ತೊಮ್ಮೆ ದುಬಾರಿ ಮತ್ತು ಅಸಮಾನವಾಗುತ್ತಿದೆ. ದೇಶಾದ್ಯಂತ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ಹೊರಹಾಕುತಿದೆ. ವಿದ್ಯಾಸಾಗರರು ಹೇಳಿದಂತೆ, "ಸಹಾನುಭೂತಿ ಇಟ್ಟುಕೊಳ್ಳುವುದು ಒಳ್ಳೆಯದು, ಆದರೆ ಪರಿಹಾರಕ್ಕಾಗಿ ಹೋರಾಡುವುದು ಉತ್ತಮ." AIDSO, ವಿದ್ಯಾರ್ಥಿ ಮತ್ತು ಯುವಜನರಲ್ಲಿ ಈ ಸ್ಫೂರ್ತಿಯಿಂದ ಕಾರ್ಯನಿರ್ವಹಿಸ ಬೇಕೆಂದು ಕರೆ ನೀಡುತ್ತದೆ.

24
1140 views