logo

ನಾಗರ ಪಂಚಮಿ 2025: ಬೆಂಗಳೂರಿನ (ಚಿಕ್ಕಬಳ್ಳಾಪುರ)ಸದ್ಗುರು ಸನ್ನಿಧಿಯಲ್ಲಿನ ನಾಗ ಮಂಟಪದಲ್ಲಿ ಪವಿತ್ರ ಅರ್ಪಣೆಗಳು ಮತ್ತು ಆಚಾರಣೆಗಳು

ಚಿಕ್ಕಬಳ್ಳಾಪುರ:ಈ ವರ್ಷ, ನಾಗರ ಪಂಚಮಿಯನ್ನು ಜುಲೈ 29ರಂದು ಬೆಂಗಳೂರಿನ ಸದ್ಗುರು ಸನ್ನಿಧಿಯಲ್ಲಿ ಶಕ್ತಿಯುತವಾಗಿ ಪ್ರಾಣಪ್ರತಿಷ್ಠೆ ಮಾಡಲಾದ ನಾಗ ಮಂಟಪದಲ್ಲಿ ಆಚಾರಣೆಗಳು ಮತ್ತು ಅರ್ಪಣೆಗಳೊಂದಿಗೆ ಆಚರಿಸಲಾಗುವುದು. ಸದ್ಗುರುಗಳು ಮೂರು ವರ್ಷಗಳ ಹಿಂದೆ ಬೆಂಗಳೂರಿನ ಸದ್ಗುರು ಸನ್ನಿಧಿಯಲ್ಲಿ ನಾಗನನ್ನು ಪ್ರಾಣ ಪ್ರತಿಷ್ಠೆ ಮಾಡಿದರು, ಇದು 800 ವರ್ಷಗಳಲ್ಲಿ ಮೊದಲ ಬಾರಿಗೆ ಆದಂತಹ ಪ್ರಾಣ ಪ್ರತಿಷ್ಠೆಯಾಗಿದೆ.

ನಾಗರ ಪಂಚಮಿಯ ಪವಿತ್ರ ಅರ್ಪಣೆಗಳು ಮತ್ತು ಆಚರಣೆಗಳು
ಭಕ್ತರಿಗೆ ನಾಗ ಮಂಟಪದಲ್ಲಿ “ಅನನ್ಯ ಬೆಣ್ಣೆ ಸೇವೆ,” “ಅನನ್ಯ ಸರ್ಪ ಸೇವೆ” ಮತ್ತು “ಮಹಾ ಆರತಿ” ಸೇರಿದಂತೆ ಶಕ್ತಿಯುತ ಆಚಾರಣೆಗಳನ್ನು ವೀಕ್ಷಿಸುವ ಅವಕಾಶ ಸಿಗುತ್ತದೆ. ಭಕ್ತರು ನಾಗ ದೋಷ ನಿವಾರಣ ಪ್ರಕ್ರಿಯೆಯಂತಹ ಪವಿತ್ರ ಅರ್ಪಣೆಗಳಲ್ಲಿ ಭಾಗವಹಿಸಬಹುದು - ಇದು ನಾಗ ದೋಷವನ್ನು ನಿವಾರಿಸಲು ಸಹಾಯ ಮಾಡುವ ಒಂದು ಗಹನವಾದ ಪ್ರಕ್ರಿಯೆ. ಈ ಅರ್ಪಣೆಯ ಭಾಗವಾಗಿ, ಭಾಗವಹಿಸುವವರಿಗೆ ಪ್ರಾಣಪ್ರತಿಷ್ಠೆ ಮಾಡಲಾದ ನಾಗ ಸೂತ್ರವನ್ನು ನೀಡಲಾಗುತ್ತದೆ, ಇದನ್ನು ಧರಿಸಿದಾಗ ನಾಗನ ಶಕ್ತಿ ಮತ್ತು ಅನುಗ್ರಹದೊಂದಿಗೆ ಸಂಪರ್ಕದಲ್ಲಿರುತ್ತಾರೆ. ಇದರ ಜೊತೆಗೆ, ಭಕ್ತರು ಯೋಗೇಶ್ವರ ಲಿಂಗಕ್ಕೆ ಕ್ಷೀರ ಸೇವೆಯನ್ನು(ಹಾಲಿನ ಅರ್ಪಣೆ) ಸಲ್ಲಿಸಬಹುದು, ಇದು ಗ್ರಹಣಶೀಲತೆ ಮತ್ತು ಭಕ್ತಿಯನ್ನು ಹೆಚ್ಚಿಸುತ್ತದೆ.

ನಾಗರ ಪಂಚಮಿ ಸಂಜೆ
ಜುಲೈ 29ರ ಸಂಜೆ 6.15ರಿಂದ ಆರಂಭವಾಗುವ ಸಂಜೆಯ ಸಂಭ್ರಮಾಚರಣೆಗಳು ಸಮೃದ್ಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ:
ಸದ್ಗುರು ಗುರುಕುಲಮ್ ಸಂಸ್ಕೃತಿಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನ.
ಈಶಾದ ಸ್ವಂತ ಸಂಗೀತ ತಂಡವಾದ “ಸೌಂಡ್ಸ್ ಆಫ್ ಈಶ”ದಿಂದ ಆಹ್ಲಾದಕರ  ಸಂಗೀತ.
ಆದಿಯೋಗಿ ದಿವ್ಯ ದರ್ಶನ - ತಲ್ಲೀನಗೊಳಿಸುವ ರೂಪದಲ್ಲಿ ಆದಿಯೋಗಿಯ ಮೂಲ ಮತ್ತು ಯೋಗ ವಿಜ್ಞಾನದ ಅಪೂರ್ವ ದೃಶ್ಯ ನಿರೂಪಣೆಯ ಪ್ರಸ್ತುತಿ.
ಆಹಾರ ಮಳಿಗೆಗಳು, ಆಟಗಳು, ಕರಕುಶಲ ವಸ್ತುಗಳು ಮತ್ತು ಸ್ಥಳೀಯ ಕಲಾವಿದರ ಪ್ರದರ್ಶನಗಳೊಂದಿಗೆ ಕೂಡಿದ ನಾಲ್ಕು ದಿನಗಳ ಗ್ರಾಮ ಜಾತ್ರೆ.


ಜಾಗತಿಕ ನೇರಪ್ರಸಾರದಲ್ಲಿ ಭಾಗವಹಿಸುವಿಕೆ
ಖುದ್ದಾಗಿ ಭಾಗವಹಿಸಲು ಸಾಧ್ಯವಾಗದವರಿಗಾಗಿ, ಸಂಭ್ರಮಾಚರಣೆಗಳ ನೇರಪ್ರಸಾರವನ್ನು ಮಾಡಲಾಗುವುದು, ಇದು ಪ್ರಪಂಚದ ಎಲ್ಲಿಂದಲಾದರೂ ನಾಗನ  ಅನುಗ್ರಹವನ್ನು  ಪಡೆಯುವ ಅಪರೂಪದ ಅವಕಾಶವನ್ನು ನೀಡುತ್ತದೆ. ಭಕ್ತರು bhairavi.co/npls ಲಿಂಕ್ ನಲ್ಲಿ ನೋಂದಣಿ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಭಾಗವಹಿಸಿ ಪವಿತ್ರ ಆಚರಣೆಯಲ್ಲಿ ತಲ್ಲೀನರಾಗಬಹುದು.


ನಾಗರ ಪೂಜೆಗೆ ಸಮರ್ಪಿತವಾದ ಶುಭ ಸಂದರ್ಭವಾದ ನಾಗರ ಪಂಚಮಿ, ಭಾರತೀಯ ಸಂಸ್ಕೃತಿಯಲ್ಲಿ ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಯೋಗ ಸಂಪ್ರದಾಯದಲ್ಲಿ, ನಾಗ ಅಥವಾ ಸರ್ಪಗಳನ್ನು ಅತೀಂದ್ರಿಯ ಆಯಾಮಗಳಿಗೆ ಪ್ರವೇಶ ದ್ವಾರ ಮತ್ತು ಶಕ್ತಿ ರೂಪಗಳಿಗೆ ರಕ್ಷಕರನ್ನಾಗಿ ನೋಡಲಾಗುತ್ತದೆ.

228
1969 views