logo

ಆಗಸ್ಟ್ 17ರಂದು ತಾಲೂಕು ಮಟ್ಟದ *ಚೆಸ್ ಟೂರ್ನಿಮೆಂಟ್*

ಆಗಸ್ಟ್ 17ರಂದು ತಾಲೂಕು ಮಟ್ಟದ *ಚೆಸ್ ಟೂರ್ನಿಮೆಂಟ್*
ದೇವನಹಳ್ಳಿ ಚೆಸ್ ಅಸೋಸಿಯೇಷನ್ ವತಿಯಿಂದ ಸನ್ಮಾನ ಕಾರ್ಯಕ್ರಮ
ದೇವನಹಳ್ಳಿ: ಆ.17ರಂದು ಎಂಪಿಜಿಎಸ್ ಶಾಲೆಯಲ್ಲಿ ಚೆಸ್ ಟೂರ್ನಿಮೆಂಟ್ ಅನ್ನು ದೇವನಹಳ್ಳಿ ತಾಲೂಕು ಮಟ್ಟದಲ್ಲಿ ಆಯೋಜಿಸಲಾಗಿದೆ ಎಂದು ದೇವನಹಳ್ಳಿ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಮಂಜು.ಕೆ ತಿಳಿಸಿದರು.

ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದೇವನಹಳ್ಳಿ ಚೆಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಸರ್ವ ಸದಸ್ಯರ ಸಭೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚೆಸ್ ಕ್ರೀಡೆಯನ್ನು ಉತ್ತೇಜಿಸುವ ಮತ್ತು ಪ್ರೋತ್ಸಾಹಿಸುವ ಸಲುವಾಗಿ ತಾಲೂಕು ಮಟ್ಟದ ಚೆಸ್ ಟೂರ್ನಿಮೆಂಟ್ ಅನ್ನು ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು ಯಾರೇ ಭಾಗವಹಿಸಲು ಇಚ್ಚಿಸಿದ್ದಲ್ಲಿ ಪ್ರವೇಶ ಶುಲ್ಕ ೨೦೦ರೂ.ಗಳನ್ನು ಪಾವತಿಸಬೇಕಾಗುತ್ತದೆ. ಭಾಗವಹಿಸುವ ೧೦ ರ್‍ಯಾಂಕಿಂಗ್‌ನಲ್ಲಿ ಮೂರು ರ್‍ಯಾಂಕಿಂಗ್‌ಗಳಿಗೆ ಮೊದಲ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಪ್ರಶಸ್ತಿ ಇದ್ದು, ಉಳಿದ ೭ ರ್‍ಯಾಂಕಿಂಗ್ ಸ್ಪರ್ಧಾಳುಗಳಿಗೆ ಟ್ರೋಫಿ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಚೆಸ್ ಕ್ರೀಡೆಯ ಸ್ಪರ್ಧೆಗೆ ಬೆಂಗಳೂರಿನಿಂದ ತೀರ್ಪುಗಾರರನ್ನು ನಿಯೋಜಿಸಲಾಗುತ್ತದೆ. ಮುಖ್ಯ ಅತಿಥಿಯಾಗಿ ರಾಜ್ಯ ಕೃಷಿ ಪ್ರಶಸ್ತಿ ಪುರಸ್ಕೃತ ಶಿವನಾಪುರ ರಮೇಶ್, ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ, ಶಾಲೆಯ ಮುಖ್ಯ ಶಿಕ್ಷಕರು, ಪ್ರಾಂಶುಪಾಲರು ಉಪಸ್ಥಿತರಿಲಿದ್ದಾರೆ. ಈ ಕ್ರೀಡೆಯಲ್ಲಿ ಭಾಗವಹಿಸಲು ಯಾವುದೇ ವಯೋಮಿತಿ ನಿಗಧಿ ಇರುವುದಿಲ್ಲ. ದೇವನಹಳ್ಳಿ ಚೆಸ್ ಅಸೋಸಿಯೇಷನ್ ಪ್ರಾರಂಭವಾಗಿ ಸೆಪ್ಟಂಬರ್ ಮಾಹೆಗೆ ೧ ವರ್ಷ ತುಂಬಲಿದ್ದು, ಈ ಪಂದ್ಯಾವಳಿಯು ಅತ್ಯಂತ ಯಶಸ್ವಿಯಾಗಿ ನೆರವೇರಿಸಲು ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿರುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ದೇವನಹಳ್ಳಿ ಚೆಸ್ ಅಸೋಸಿಯೇಷನ್ ವತಿಯಿಂದ ಸಂಘದ ಗೌರವ ಅಧ್ಯಕ್ಷ ಎಸ್.ಗೋಪಾಲ್, ಉಪಾಧ್ಯಕ್ಷ ಮುನಿರಾಜು.ಎಸ್.ಆರ್ ಹಾಗೂ ಅಧ್ಯಕ್ಷ ಮಂಜು.ಕೆ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಈ ವೇಳೆ ಅಸೋಸಿಯೇಷನ್‌ನ ಉಪಾಧ್ಯಕ್ಷರಾದ ಎಸ್.ಆರ್.ರವಿ, ಬಿ.ಸಿ.ಎಸ್.ಚಂದ್ರಶೇಖರ್, ಕೇಶವ.ಎಂ, ಅಜಯ್.ಆರ್, ಕಾರ್ಯದರ್ಶಿ ರವಿಕಿರಣ್.ಡಿ.ಪಿ, ಖಜಾಂಚಿ ರಘುನಾಥ್.ಆರ್, ಕಾನೂನು ಸಲಹೆಗಾರ ಎನ್.ಕೃಷ್ಣ, ಸದಸ್ಯರಾದ ನಟರಾಜ, ನಾಗರಾಜು, ನಾಗೇಂದ್ರ, ಎನ್.ಅಣ್ಣಪ್ಪ, ನರೇಂದ್ರ, ವೆಂಕಟೇಶ್ (ಯೋಗ), ಧನಂಜಯ್.ಎಸ್, ಸೇರಿದಂತೆ ಹಲವರು ಇದ್ದರು.

ಚಿತ್ರ:

22
1661 views