ಉಚಿತ ಆರೋಗ್ಯ ತಪಾಸಣೆ ಬಡವರಿಗೆ ಅನುಕೂಲ ಅಧ್ಯಕ್ಷೆ ಪ್ರತಿಭಾ ಮೇಲಗಿರಿ
ಬ್ಯಾಡಗಿ ಪಟ್ಟಣದ ತಾಲೂಕ ಸಾರ್ವಜನಿಕ ಆಸ್ಪತ್ರೆ ರೋಟರಿ ಕ್ಲಬ್ ಬ್ಯಾಡಗಿ, ಇನ್ನರ್ವಿಲ್ ಕ್ಲಬ್ ಬ್ಯಾಡಗಿ ಮತ್ತು ಎಸ್ ಎಸ್ ನಾರಾಯಣ ಹೆಲ್ತ್ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ ಉಚಿತವಾಗಿ ಇಸಿಜಿ, 2ಡಿ ಇಕೋ ಸ್ಕ್ಯಾನಿಂಗ್ ಮತ್ತು ಹೃದಯ ರೋಗ, ತಜ್ಞರೊಂದಿಗೆ ಉಚಿತ ಸಮಲೋಚನೆ ಸೌಲಭ್ಯ ನೀಡಲಾಯಿತು. ಈ ಶಿಬಿರದಲ್ಲಿ 130 ಜನ ಸಾರ್ವಜನಿಕರು ಶಿಬಿರದ ಉಪಯೋಗ ಪಡೆದರು ಸುಮಾರು 22 ಜನರಿಗೆ ಹೆಚ್ಚಿನ ಪರೀಕ್ಷೆಗೆ ಶಿಫಾರಸು ನೀಡಿದರು. ಹೃದಯ ರೋಗ ತಜ್ಞವೈದ್ಯರಾದ ಡಾ ರಾಕೇಶ ಟಿ ಮಾತನಾಡಿ ಇಂದು ಹಲವು ಲಕ್ಷಗಳ ಆರೋಗ್ಯ ಸೇವೆ ಉಚಿತವಾಗಿ ಬ್ಯಾಡಗಿ ತಾಲೂಕಿನ ಜನರಿಗೆ ಲಭಿಸಿದೆ ಹೃದಯ ರೋಗ ಸಂಬಂಧಿ ಕಾಯಿಲೆಗಳ ಬಗ್ಗೆ ವಿವರಿಸಿ ಅದರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗೃತಿ ಕ್ರಮ ವಿವರಿಸಿ ತಿಳಿಸಿದರು. ಕಾರ್ಯಕ್ರಮದಲ್ಲಿ ಕಾರ್ಗಿಲ್ ವಿಜಯ ದಿನದ ಪ್ರಯುಕ್ತ ಮಾಜಿ ಸೈನಿಕರಿಗೆ ಸನ್ಮಾನ ನಡೆಯಿತು. ಇನ್ನರ್ ವ್ಹೀಲ್ ಅಧ್ಯಕ್ಷೆ ಶ್ರೀಮತಿ ಪ್ರತಿಭಾ ಮೇಲಗಿರಿ, ಕಾರ್ಯದರ್ಶಿ ಲಕ್ಷ್ಮಿ ಉಪ್ಪಾರ, ಪುಷ್ಪಾ ಇಂಡೀಮಠ, ಸಂಧ್ಯಾರಾಣಿ ದೇಶಪಾಂಡೆ, ಗೀತಾ ಎಲಿ, ವಿಜಯಲಕ್ಷ್ಮಿ ಪಾಟೀಲ, ಎಸ್ ಎಸ್ ಆಸ್ಪತ್ರೆಯ ಸಿಬ್ಬಂದಿ, ವೈದ್ಯರಾದ ಸುರೇಶ ಗುಂಡಪಲ್ಲಿ, ಮಹೇಶ ಭಜಂತ್ರಿ ಇನ್ನಿತರರು ಉಪಸ್ಥಿತರಿದ್ದರು