logo

೨೦ ವರ್ಷದ ಪ್ರಾಮಾಣಿಕ ಸೇವೆಗೆ ಅಭಿಮಾನಿಗಳಿಂದ ಗೌರವ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಸನ್ಮಾನ ಕಾರ್ಯಕ್ರಮ

ದೇವನಹಳ್ಳಿ: ದೇವನಹಳ್ಳಿ ಪಟ್ಟಣದ ಪುರಸಭಾ ವ್ಯಾಪ್ತಿಯ ಕೋಟೆ ಬೀದಿಯಲ್ಲಿರುವ ಕಸಬಾ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸುಮಾರು 20 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ವೆಂಕಟೇಶ್ ಅವರಿಗೆ ಅಭಿಮಾನಿಗಳಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.

ಸಹಕಾರ ಸಂಘದ ಕಾರ್ಯದರ್ಶಿ ವೆಂಕಟೇಶ್ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸಂಘವನ್ನು ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿರುವ ಹಿನ್ನಲೆಯಲ್ಲಿ ಮತ್ತು ನನ್ನ ವೈಯಕ್ತಿ ಜನ್ಮದಿನದ ಅಂಗವಾಗಿ ಹಿತೈಷಿಗಳಿಂದ ಅಭಿನಂದನೆ ಸ್ವೀಕರಿಸಿದ್ದೇನೆ. ಎಲ್ಲರಿಗೂ ಭಗವಂತ ಒಳ್ಳೆಯದು ಮಾಡಲೆಂದು ಆಶೀಸುತ್ತೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಕೀಲ ವಿಜಯಪುರ ಅಮರನಾಥ್, ಅನಿಲ್‌ಕುಮಾರ್.ಕೆ, ನಾಗೇಶ್, ಶಂಕರ್, ಸತೀಶ್, ನಾಗೇಂದ್ರ ಬಾಬು ಸೇರಿದಂತೆ ಹಲವರು ಇದ್ದರು.

ಚಿತ್ರ: ಕಸಬಾ ವಿಎಸ್ಸೆಸ್ಸೆನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ ಅವರಿಗೆ ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು.

24
1973 views