
ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ *2811 ಯೂನಿಟ್* ರಕ್ತ ದಾನಿಗಳಿಂದ ಸಂಗ್ರಹವಾಗಿದೆ.
ದಿನಾಂಕ 23-7-2025 ರಂದು ದು ಚಿಕ್ಕಬಳ್ಳಾಪುರ ಹೊರವಲಯದ ಶ್ರೀ ಸಿ. ವಿ. ವೆಂಕಟರಾಯಪ್ಪ ಶಿಕ್ಷಣ ಕೇಂದ್ರದಲ್ಲಿ 29ನೇ ದತ್ತಿ ದಿನಾಚರಣೆ ಹಾಗೂ 110ನೇ ಶ್ರೀ ಸಿವಿವಿ ಜಯಂತಿ ಅಂಗವಾಗಿ ಶ್ರೀ ಕೆ. ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮತ್ತು ರಕ್ತದಾನ ಮಾಡಿದ ಪ್ರತಿ ಯೂಬ್ಬರಿಗೂ ಹಾಗೂ ಸಿವಿವಿ ಸಂಸ್ಥೆ ಹಾಗೂ ರೆಡ್ ಕ್ರಾಸ್ ಸಂಸ್ಥೆ ಹಾಗೂ ಈ ಬಾರಿ ವಿಶೇಷವಾಗಿ ರಾಜ್ಯದಾದ್ಯಂತ ರೆಡ್ ಕ್ರಾಸ್ ಸಂಸ್ಥೆಗಳು ಭಾಗವಹಿಸಿದ್ದವು ಮತ್ತು ಚಿಕ್ಕಬಳ್ಳಾಪುರದ ಸಂಘ ಸಂಸ್ಥೆಗಳು ಮತ್ತು ಸಮಸ್ತ ಜನತೆಗೆ ಸಹಕಾರ ನೀಡಿ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ *2811 ಯೂನಿಟ್* ರಕ್ತ ದಾನಿಗಳಿಂದ ಸಂಗ್ರಹವಾಗಿದೆ. ಈ ಯಶಸ್ಸು ರಕ್ತ ದಾನಿಗಳಿಗೆ ಸೇರುತ್ತದೆ.ರಕ್ತದಾನ ಮಾಡಲು ಆಗಮಿಸಿ ಕಾರ್ಯಕ್ರಮ ಯಶಸ್ವಿ ಮಾಡಿದ ಎಲ್ಲಾರಿಗೂ ತುಂಬು ಹೃದಯದ ಅಭಿನಂದನೆಗಳು. ಚಿಕ್ಕಬಳ್ಳಾಪುರ ರೆಡ್ ಕ್ರಾಸ್ ಸಂಸ್ಥೆ ಮತ್ತು ಲಾಯನ್ಸ್ ಸಂಸ್ಥೆ ಹಾಗೂ ಕೆ.ವಿ ಮತ್ತು ಪಂಚಗಿರಿ ದತ್ತಿ ಎಲ್ಲಾ ಸದಸ್ಯರು ಹಾಗೂ ವಿದ್ಯಾರ್ಥಿಗಳು ಮತ್ತು ಎಲ್ಲಾ ನನ್ನ ಜೀವದ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮತ್ತು ರಕ್ತದಾನ ಮಾಡಿದ ಎಲ್ಲಾರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದ ಸಮಸ್ತ ಅಧ್ಯಕ್ಷರಾದ ಕೆ ಬಿ ನವೀನ್ ಕಿರಣ್.