
ಚಿಕ್ಕನಾಯಕನಹಳ್ಳಿ ದಸೂಡಿಯಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ದಸೂಡಿ ಗ್ರಾಮದಲ್ಲಿ ಜುಲೈ 24ರ ಸಂಜೆ 4:30 ಕ್ಕೆ ದಸೂಡಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಸೂಡಿ ಗ್ರಾಮ ಪಂಚಾಯಿತಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಎಸ್.ಬಿ. ಚಾರಿಟಬಲ್ ಟ್ರಸ್ಟ್ (ಚಿಕ್ಕನಾಯಕನಹಳ್ಳಿ) ಇದರ ಆಶ್ರಯದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಶಾಸಕರಾದ ಸಿ.ಬಿ. ಸುರೇಶ್ ಬಾಬು ಉದ್ಘಾಟಿಸಲಿದ್ದು, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಲಕ್ಷಣದಾಸ್ ಉಪನ್ಯಾಸ ನೀಡಲಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಚೆನ್ನಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಜನಪದ ಅಕಾಡೆಮಿ ಸದಸ್ಯ ಕೆಂಕೆರೆ ಮಲ್ಲಿಕಾರ್ಜುನ ಮೆರವಣಿಗೆ ಉದ್ಘಾಟನೆ ನೆರವೇರಿಸಲಿದ್ದಾರೆ.
ಸಂಸ್ಕೃತಿ ಚಿಂತಕರಾದ ದಸೂಡಿಯ ಡಾ. ನಾಗೇಶ್ ಅವರ ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಡಾ. ಶಿವರಾಜ್ (ಶಿಕ್ಷಣ), ನಾಗರಾಜ್ (ರೈತ ಚಳುವಳಿ), ದಬ್ಬಗುಂಟೆ ಮೂರ್ಕಣ್ಣಪ್ಪ (ರಂಗ ಕಲೆ), ಹನುಮಯ್ಯ (ಪ್ರಗತಿಪರ ರೈತ), ಕೆ. ಮರಿಯಪ್ಪ (ಸಾಹಿತ್ಯ), ಡಿ.ಎಮ್. ರಂಗನಾಥಪ್ಪ (ರಂಗ ನಿರ್ದೆಶನ), ಡಿ.ಎಚ್. ಕಾಂತರಾಜು (ಜಾನಪದ ಬಜನೆ), ಹಾಗೂ ಅಂಜಿನಪ್ಪ (ಪ್ರಗತಿಪರ ರೈತ) ಅವರನ್ನು ಸನ್ಮಾನಿಸಲಾಗುವುದು.
ಪಿ.ಎಲ್.ಡಿ. ಬ್ಯಾಂಕ್ ಉಪಾಧ್ಯಕ್ಷ ಡಿ.ಬಿ. ರವಿಕುಮಾರ್ ಆಶಯ ನುಡಿಗಳನ್ನು ನುಡಿಯಲಿದ್ದು, ತಹಶಿಲ್ದಾರ್ ಕೆ.ಪುರಂದರ, ಇಓ ದೊಡ್ಡಸಿದ್ದಯ್ಯ, ಪೊಲೀಸ್ ವೃತ್ತ ನಿರೀಕ್ಷಕ ನದಾಫ್, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ಕಾಂತರಾಜು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಈ ಬಗ್ಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿಕುಮಾರ್ ಮಾಹಿತಿ ನೀಡಿದ್ದಾರೆ.