logo

ಶಿಕ್ಷಕ ಗುಂಪು ಮರದ ಆನಂದ್ ರವರಿಗೆ *ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ* ಪ್ರಧಾನ.

ಚಿಕ್ಕಬಳ್ಳಾಪುರ:ಬೆಂಗಳೂರಿನ ಚೇತನ ಫೌಂಡೇಶನ್ ವತಿಯಿಂದ ಪಿಪಿಎಚ್ಎಸ್ ಶಿಕ್ಷಕ ಗುಂಪು ಮರದ ಆನಂದ್ ರವರಿಗೆ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿಯನ್ನು ಇಂದು ಬೆಂಗಳೂರಿನಲ್ಲಿ ಪ್ರಧಾನ ಮಾಡಲಾಯಿತು.
ಗುಂಪು ಮರದ ಆನಂದ್ ಶಿಕ್ಷಕರಾಗಿ, ಪರಿಸರವಾದಿಗಳಾಗಿ ಕವಿಗಳಾಗಿ ಸುಮಾರು 28 ವರ್ಷಗಳಿಂದ ಜಿಲ್ಲಾಧ್ಯಂತ 3 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಣೆ ಮಾಡಿರುತ್ತಾರೆ. ಜೊತೆಗೆ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಮಕ್ಕಳಲ್ಲಿ ಹಾಗೂ ಯುವಕರಲ್ಲಿ ಪರಿಸರದ ಅರಿವು ಮೂಡಿಸುತ್ತಿದ್ದಾರೆ. ಇವರ ಮುಖ್ಯ ಹವ್ಯಾಸ ಯಾವುದೇ ಹುಟ್ಟು ಹಬ್ಬ ಆಗಲಿ, ಶುಭ ಕಾರ್ಯವಾಗಲಿ ಮದುವೆಯಾಗಲಿ, ಗೃಹಪ್ರವೇಶವಾಗಲಿ, ಗಿಡ ನೆಡುವ ಹಾಗೂ ಹಂಚುವ ಕೆಲಸ ಮಾಡುತ್ತಾರೆ. ಇದಲ್ಲದೆ ಶನಿವಾರ ಭಾನುವಾರ ಹಾಗೂ ರಜಾ ದಿನಗಳಲ್ಲಿ ಜಿಲ್ಲಾಧ್ಯಂತ ಶಾಲಾ ಕಾಲೇಜುಗಳಲ್ಲಿ, ಸ್ಮಶಾನ ಗಳಲ್ಲಿ, ಮೈದಾನಗಳಲ್ಲಿ, ರಸ್ತೆ ಇಕ್ಕಲ ಗಳಲ್ಲಿ ಮಾವು, ಬೇವು, ಮಹಾಗನಿ, ಹೊಂಗೆ, ಹಲಸು, ನಲ್ಲಿ, ನುಗ್ಗೆ, ಬಸವನಪಾದ, ಹಾಗೂ ಹೂ ಬಿಡುವ ಗಿಡಮರಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡುವ ಕಾರ್ಯದಲ್ಲಿ ನಿರತರಾಗಿರುತ್ತಾರೆ, ಜಿಲ್ಲಾಧ್ಯಂತ ಸಾವಿರಾರು ಪರಿಸರದ ಅರಿವು ಕಾರ್ಯಕ್ರಮಗಳು ಮಾಡುತ್ತಿರುತ್ತಾರೆ.ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ *ಪರಿಸರ ಮಿತ್ರ* ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹಾಗೂ ರಾಷ್ಟ್ರೀಯ ವನಸಿರಿ ರತ್ನ ಪ್ರಶಸ್ತಿ ಬೇಲೂರು, ಸಾಲುಮರದ ತಿಮ್ಮಕ್ಕ ಹಸಿರು ಪ್ರಶಸ್ತಿ ಬೆಂಗಳೂರು, ಪಬ್ಲಿಕ್ ಹೀರೋ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿ, ಪರಿಸರ ಬ್ರಹ್ಮ ಪ್ರಶಸ್ತಿ ಬೆಂಗಳೂರು,ಯೋಗಿ ಸೇವಾ ರತ್ನ ಬೆಂಗಳೂರು,ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ, ಜೊತೆಗೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನ ಮಾಡಿ ಗೌರವಿಸಿದೆ.
ಕಾರ್ಯಕ್ರಮದಲ್ಲಿ ಚೇತನ ಫೌಂಡೇಶನ್ ಕರ್ನಾಟಕ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ, ಅಂತರರಾಷ್ಟ್ರೀಯ ಆರ್ಯಭಟ್ಟ ಪ್ರಶಸ್ತಿ ಪುರಸ್ಕೃತರಾದ ಡಾ. ಜಿ ಶಿವಣ್ಣ, ಕಿರುತೆರೆ ನಟಿ ಕುಮಾರಿ ಶ್ರೀದೇವಿ ಗೌಡ, ಶಿವಾಜಿ ಕಾಲೇಜ್ ಭಾಲ್ಕಿ ಪ್ರಾಚಾರ್ಯರಾದ ಚಂದ್ರಕಾಂತ ಬಿರಾದಾರ, ಕವಿ ಚನ್ನಪ್ಪ ಅಂಗಡಿ ಧಾರವಾಡ, ವೀರ ಸಾಹೇಬ ನದಾಫ ಹುಬ್ಬಳ್ಳಿ, ಕವಿಯತ್ರಿ ಶ್ರೀಮತಿ ಪಾರ್ವತಿ ಬೆಂಗಳೂರು, ರಾಜ್ಯ ಪರಿಷತ್ ಸದಸ್ಯರಾದ ಶ್ರೀಮತಿ ಸೌಭಾಗ್ಯ ಎ.ಎಂ. ಬೆಂಗಳೂರು, ಕವಿಗಳಾದ ಶ್ರೀ ಮುದಲ್ ವಿಜಯ್ ಬೆಂಗಳೂರು. ಮುಂತಾದವರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಮಾಡಿದರು.

4
748 views