logo

ಗುಡಿಸಲು ಸುಟ್ಟ ಹಿನ್ನಲೆಯಲ್ಲಿ ಪರಿಹಾರ ಧನ ವಿತರಣೆ

ಪ್ರೇಮಲತಾ ಅವರಿಗೆ 10,000 ರೂ. ಸಹಾಯಧನ ಚೆಕ್ ಹಸ್ತಾಂತರ
ಶಿರಾ ತಾಲೂಕು, ಬುಕ್ಕಾಪಟ್ಟಣ ಹೋಬಳಿ ಗಾಣದಹುಣಸೆ ಮಜರೇ ಉಪ್ಪಾರಹಟ್ಟಿಯ ನಿವಾಸಿ ಪ್ರೇಮಲತಾ ಎಂಬುವವರ ಗುಡಿಸಲು ಇತ್ತೀಚೆಗೆ ಬೆಂಕಿಗೆ ಆಹುತಿಯಾಯಿತು. ಈ ದುರ್ಘಟನೆಯ ಹಿನ್ನೆಲೆಯಲ್ಲಿ, ನೆರಲಗುಡ್ಡ ಗ್ರಾಮ ಪಂಚಾಯಿತಿ ವತಿಯಿಂದ ಮಾನವೀಯ ದೃಷ್ಟಿಯಿಂದ 10,000 ರೂಪಾಯಿ ಮೊತ್ತದ ಸಹಾಯಧನದ ಚೆಕ್ ವಿತರಿಸಲಾಯಿತು.

ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ವೀರೇಶ ರವರು, ಗ್ರಾಮ ಅಭಿವೃದ್ಧಿ ಅಧಿಕಾರಿ, ಹಾಗೂ ಪಂಚಾಯಿತಿ ಕಾರ್ಯದರ್ಶಿ ಹಾಜರಿದ್ದು, ಪ್ರೇಮಲತಾರವರ ದುಃಖದಲ್ಲು ಅವರೊಂದಿಗೆ ಇದ್ದರು.

0
0 views