logo

ಲಂಚಮುಕ್ತ ಕರ್ನಾಟಕ ವೇದಿಕೆ ಹಾಗೂ ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ಮನವಿಗೆ ಸ್ಪಂದನೆ: ಸಾರಿಗೆ ಸೌಲಭ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

ಸ್ವಾತಂತ್ರ್ಯ ಪೂರ್ವದಿಂದಲೂ ಸಾರಿಗೆ ಸಂಪರ್ಕವಿಲ್ಲದೆ ಕೊಂಚೋಲೇಸಿದ ಹಳ್ಳಿಗಳಲ್ಲಿ ಇದೀಗ ಸಂತಸದ ದಿನಗಳು ಶುರುವಾಗಿದೆ. ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ(ರಿ) ಹಾಗೂ ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್(ರಿ) ನಡೆಸಿದ ನಿರಂತರ ಮನವಿಯ ಹಿನ್ನೆಲೆಯಲ್ಲಿ, ಈ ಭಾಗದ ಸಮಸ್ಯೆಗಳನ್ನು ಸಂಬಂಧಪಟ್ಟ KSRTC ತುಮಕೂರು ವಿಭಾಗದ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.

ಅಧಿಕಾರಿಗಳು ಕೂಡಲೇ ಸ್ಪಂದಿಸಿ ಎರಡು ಹೊಸ ಸಾರಿಗೆ ಮಾರ್ಗಗಳನ್ನು ಪರಿಚಯಿಸಿದ್ದಾರೆ:

1. ಹುಳಿಯಾರು - ತಿಮ್ಮನಹಳ್ಳಿ - ದೊಡ್ಡರಾಂಪುರ - ಹಾಗಲವಾಡಿ ಚೇಳೂರು - ತುಮಕೂರು

2. ಹುಳಿಯಾರು - ದಸೂಡಿ - ಮರೆನಾಡುಪಾಳ್ಯ/ಮರೆನಾಡು - ದಬ್ಬೆಕುಂಟೆ - ಹೊಯ್ಸಳಕಟ್ಟೆ - ಹುಳಿಯಾರು .

ಈ ಹೊಸ ಮಾರ್ಗಗಳಿಂದ ಹಲವಾರು ಗ್ರಾಮಸ್ಥರಿಗೆ ನಗರ ಸಂಪರ್ಕ ಸುಲಭವಾಗಿದೆ.

124
6251 views