
ದೇವನಹಳ್ಳಿ ಗಾಳಿಪಟ ಉತ್ಸವ ೨೦೨೫
ದೇವನಹಳ್ಳಿ ಗಾಳಿಪಟ ಉತ್ಸವ ೨೦೨೫
ದೇವನಹಳ್ಳಿ:
ಗಾಳಿಪಟ ಹಾರಾಟದಿಂದ ಸಮಾಜದಲ್ಲಿ ಎಷ್ಟೇ ಎತ್ತರಕ್ಕೋದರೂ ಒಂದಲ್ಲಾ ಒಂದು ಬಾರಿ ಕೆಳಗಿಳಿಯಬೇಕು ಎಂಬ ಸಂದೇಶ ಪ್ರತಿಯೊಬ್ಬರಿಗೂ ಸಾರುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಿ.ಸಿ.ಚಂದ್ರು ಅಭಿಪ್ರಾಯಪಟ್ಟರು.
ದೇವನಹಳ್ಳಿ ಪಟ್ಟಣದ ಜೂನಿಯರ್ ಕಾಲೇಜು ಆಟದ ಮೈದಾನದಲ್ಲಿ ಜೇಸಿಐ ದೇವನಹಳ್ಳಿ ಮತ್ತು ಡಿಸಿಕೆ ಬಿಲ್ಡರ್‍ಸ್ ಅಂಡ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ೨೦೨೫ರ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿದ ಡಿ.ಸಿ.ಚಂದ್ರ ಮಾತನಾಡಿ, ಗಾಳಿಪಟ ಉತ್ಸವ ೨೦೨೫ರ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರಾಚೀನ ಜಾನಪದ ಕ್ರೀಡೆಯಾದ ಗಾಳಿಪಟ ಸ್ಪರ್ಧೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಬಹಳ ಉತ್ಸಾಹದಿಂದ ನಡೆಸಿಕೊಡಲಾಗುತ್ತಿದೆ ಎಂದರು.
ವಿವಿಧ ಆಕರ್ಷನೀಯ ಬೃಹತ್ ಗಾತ್ರದ ಬಣ್ಣ ಬಣ್ಣದ ಗಾಳಿಪಟಗಳನ್ನು ಮುಗಿಲೆತ್ತರಕ್ಕೆ ಹಾರಾಡಿಸಲು ಸ್ಪಧಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೈದಾನದಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ಈಶ್ವರ, ತಾಯಿ-ಮಗು, ಬುದ್ಧ, ಗಂಡಭೇರುಂಡ ಪಕ್ಷಿ, ಎಂಆರ್‌ಪಿ, ಗಣಪತಿ, ಇನ್ನಿತರೆ ವಿನ್ಯಾಸದ ಗಾಳಿಪಟಗಳ ಹಾರಾಟ ವೀಕ್ಷಕರ ಮನಸೋರೆಗೊಳಿಸಿತು.
ಜೇಸಿಐ ದೇವನಹಳ್ಳಿ ಅಧ್ಯಕ್ಷ ಶಿವಕುಮಾರ್, ನಿಕಟಪೂರ್ಣ ಅಧ್ಯಕ್ಷ ಕಿರಣ್ ಯಾದವ್, ಕಾರ್ಯದರ್ಶಿ ಸಿದ್ದಪ್ಪ, ಖಜಾಂಚಿ ಅಣ್ಣಪ್ಪ, ಪೂರ್ವಾಧ್ಯಕ್ಷ ಆನಂದ, ಅರವಿಂದ್, ಕಾರ್ಯಕ್ರಮದ ಪ್ರಾಯೋಜಕರಾದ ಮುರಳಿಮೋಹನ್, ಮೋಹನ್‌ಕುಮಾರ್, ದೇವರಾಜ್, ನಾಗರಾಜ್, ನಾರಾಯಣಸ್ವಾಮಿ, ಅಮರ್ ಸೇರಿದಂತೆ ಗಾಳಿಪಟ ಸ್ಪಧಾರ್ಥಿಗಳು ಇದ್ದರು.
ಚಿತ್ರ: