
ಕೂಲಿ ಕಾರ್ಮಿಕರಿಗೆ ಇನ್ನರ್ ವ್ಹೀಲ್ ಕ್ಲಬ್ ಮಾಸ್ಕ್ ವಿತರಣೆ
ಬ್ಯಾಡಗಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿದಿನ ಕೂಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ಬ್ಯಾಡಗಿ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಮಾಸ್ಕ್ ಮತ್ತು ತಲೆಮಾಸ್ಕ್ ಉಚಿತವಾಗಿ ವಿತರಿಸಿದರು. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಪ್ರತಿದಿನ ಬ್ಯಾಡಗಿ ತಾಲೂಕಿನ ಗ್ರಾಮಗಳಿಂದ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಅನೇಕ ಗ್ರಾಮಗಳಿಂದ ತುಂಬು ತೆಗೆಯಲು ಮತ್ತು ಮೆಣಸಿನಕಾಯಿ ಕೆಲಸ ಮಾಡಲು ಸಾವಿರಾರು ಮಹಿಳೆಯರು ಬಂದು ಕೂಲಿ ಕೆಲಸ ಮಾಡಿ ತಮ್ಮ ಜೀವನೋಪಾಯ ನಡೆಸುತ್ತಿದ್ದಾರೆ. ಕೆಲಸದ ವೇಳೆ ಇಲ್ಲಿನ ಧೂಳು ಘಾಟು ಧೀರ್ಘ ಕಾಲದಲ್ಲಿ ಅವರ ಆರೋಗ್ಯ ಕೆಡಬಹುದು ಅದಕ್ಕೆ ಕಾರ್ಮಿಕರು ಬಾಯಿಗೆ ಮಾಸ್ಕ್ ಹಾಕಿಕೊಳ್ಳಬೇಕು ಅದೇ ರೀತಿ ಇಲ್ಲಿನ ಮೆಣಸಿಕಾಯಿ ಸಾಂಬಾರು ಪದಾರ್ಥ ಮತ್ತು ಮಸಾಲೆ ಪದಾರ್ಥಗಳಲ್ಲಿ ಬಳಸುವುದರಿಂದ ಅವರ ಕೂದಲುಗಳು ಮೆಣಸಿನಕಾಯಿಯಲ್ಲಿ ಬೀಳುವ ಸಾಧ್ಯತೆ ಇದ್ದು ಅದನ್ನು ನಿಯಂತ್ರಿಸಲು ತಲೆಮಾಸ್ಕ್ ಹಾಕಿಕೊಳ್ಳಬೇಕು ಎಂದು ಮಹಿಳಾ ಕಾರ್ಮಿಕರಿಗೆ ಬಾಯಿ ಮತ್ತು ತಲೆಮಾಸ್ಕ್ ಗಳನ್ನೂ ಉಚಿತವಾಗಿ ವಿತರಿಸಲಾಗಿದೆ ಎಂದು ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಪ್ರತಿಭಾ ಮೇಲಗಿರಿ ಹೇಳಿದರು. ನಂತರ ಶ್ರೀಮತಿ ಸಂಧ್ಯಾರಾಣಿ ದೇಶಪಾಂಡೆ ಅವರಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಮುಂಜಾಗೃತಿ ಕ್ರಮಗಳ ಬಗ್ಗೆ ಅರಿವು ನೀಡಿದರು. ಈ ಸಂಧರ್ಭದಲ್ಲಿ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮೀ ಉಪ್ಪಾರ, ಮಹೇಶ್ವರಿ ಪಸಾರದ,
ಉಪಾಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಖಜಾಂಚಿ ಪುಷ್ಪಾ ಇಂಡಿಮಠ, ಜಂಟಿ ಕಾರ್ಯದರ್ಶಿ ಗೀತಾ ಎಲಿ, ಎಡಿಟರ್ ವಿಜಯಲಕ್ಷ್ಮಿ ಗೌಡರ, ಐ
ಎಸ್ಓ ವಿಜಯಲಕ್ಷ್ಮೀ ಯಾದವಾಡ ಇನ್ನಿತರರು ಉಪಸ್ಥಿತರಿದ್ದರು.