logo

ವರದಾನವಾದ ಜನಸ್ನೇಹಿ ಪೊಲೀಸ್ ಹೆಬ್ಬಾಳ ಗ್ರಾಮಕ್ಕೆ ಪೋಲಿಸ್ ಭೇಟಿ,,! ಕುಂದು ಕೊರತೆ ಆಲಿಕೆ,

ವರದಿ ಪೇಪರ್
ಗಂಗಾವತಿ : ಸಾರ್ವಜನಿಕ ವಲಯದಲ್ಲಿ ಫೋಲಿಸ್ ಎಂದರೇ ಅವರ ಖಡಕ್ ನೋಟ, ಖಾಕಿ ಬಟ್ಟೆ, ಭುಜದ ಮೇಲೆ ಸ್ಟಾರ್, ದಪ್ಪನೆ ಬೆಲ್ಟ್, ತಲೆ ಮೇಲೆ ಇಲಾಖೆ ಟೊಪ್ಪಿಗೆ, ಕಾಲಲ್ಲಿ ನೂಣುಪಾಗಿ ಹೊಳೆಯುವ ಭೂಟ್ ಅಬ್ಬಾ ಇವರೇನಾದರೂ ನೇರವಾಗಿ ನಮ್ಮ ಹತ್ತಿರ ಬಂದರೇ ಎದೆ ಜಲ್ ಎಂದು ಭಯ ಮೂಡುತಿತ್ತು.

ಯಪ್ಪಾ ಪೋಲಿಸ್ ನವರು ಯಾಕೇ ನಮ್ಮ ಹತ್ರಾ ಬರ್ತಿದ್ದಾರೋ ಏನೋ ಎನ್ನುವ ಭಯ, ಏನು ಮಾಡದಿದ್ದರೂ ಒಂದು ಈಗೋ ನಮ್ಮನ್ನು ಕಾಡಿ, ಭಯ ಬೀಳಿಸುತಿತ್ತು.

ಹೌದು,,! ಕೆಲವೊಂದು ಬಾರಿ ಮಕ್ಕಳು ಹಟ ಹಿಡಿದಾಗ ಪೋಲಿಸ್ ಅವರ ಕೈಯಲ್ಲಿ ಕೊಡುತ್ತೇನೆ ಎಂದರೇ ಮಕ್ಕಳು ಗಫ್ ಚುಪ್. ಅಂದರೇ ಅವರ ಕಾರ್ಯ ವೈಖರಿ ಅಷ್ಟೋಂದು ಶಿಸ್ತಿನಿಂದ ಕೂಡಿದೆ.

ಕೆಲವೊಂದೆಡೆಗಳಲ್ಲಿ ಪೋಲಿಸ್ ನವರ ಮುಂದೆ ನಿಂತು ಯಾವುದಾದರೂ ವಿಷಯ ಮಾತನಾಡಲೂ ಇನ್ನೂ ಜನ ಭಯ ಬೀಳುತ್ತಿರುವುದು ಪ್ರಸ್ತುತ.

ಅದಕ್ಕೆಂದೇ ಕರ್ನಾಟಕ ರಾಜ್ಯ ಸರಕಾರ ಗೃಹ ಇಲಾಖೆಯ ರಾಜ್ಯ ಪೊಲೀಸ್ ಇಲಾಖೆಯ ಆದೇಶದ ಅನ್ವಯ ಸಾರ್ವಜನಿಕರ ಯಾವುದೇ ಕುಂದು ಕೊರತೆಗಳ ನಿವಾರಣೆಗಾಗಿ ಅಸ್ತಿತ್ವಕ್ಕೆ ತಂದ ಜನಸ್ನೇಹಿ ಪೊಲೀಸ್ ಅಡಿಯಲ್ಲಿ ಗ್ರಾಮೀಣ ಪೊಲೀಸ್ ಜನಸ್ನೇಹಿ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಸ್ವತಃ ಕುಂದು ಕೊರತೆಗಳನ್ನು ಆಲಿಸಿ ಪರಿಹಾರಕ್ಕೆ ಮಾರ್ಗಗಳು ಹುಡುಕಿ ಸಂಬಂಧಿಸಿದ ಇಲಾಖೆ ಮೂಲಕ ಪರಿಹಾರ ಕಂಡುಕೊಂಡು ಸಹಕರಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.

ಸಾರ್ವಜನಿಕ ವಲಯದಲ್ಲಿ ಪೋಲಿಸ್ ಎಂದರೇ ಭಯ ಬಿಳದೇ ಅವರು ಸಮಾಜದ ಓರೆ, ಕೊರೆಗಳನ್ನು ತಿದ್ದುವ ಮೂಲಕ ಸಾರ್ವಜನಿಕ ವಲಯ ನಿರ್ಭಿತಿಯಿಂದ ವಾಸಿಸಲು ಹಗಲಿರುಳು ಶ್ರಮ ವಹಿಸುತ್ತಾರೆ. ಮಳೆ, ಗಾಳಿ, ಚಳಿ ಎನ್ನದೇ ಮನೆ, ಮಠ, ಕುಟುಂಬವನ್ನು ತೋರೆದು ರಾತ್ರಿ ವೇಳೆ ಗಸ್ತು ತಿರುಗುತ್ತಾ ಸಮಾಜದ ಹಿತ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಯಾವುದೇ ಗಲಾಟೆ ಇರಲಿ, ಯಾರೇ ಮಿನಿಸ್ಟರ್ ಬರಲಿ, ಗಂಡ ಹೆಂಡತಿ ಜಗಳವಿರಲಿ, ಆಸ್ತಿ ಕಲಹವಿರಲಿ, ದರೋಡೆ, ಕೊಲೆ, ಸುಲಿಗೆ, ಅತ್ಯಾಚಾರ ಇಂತಹ ಯಾವುದೇ ಪ್ರಕರಣ ನಡೆದರು ಫಟ್ ಎಂದು ಇವರು ಹಾಜರಿರಬೇಕು.

ಯಪ್ಪಾ ಹಗಲು ರಾತ್ರಿ ಈ ತರ ಡ್ಯೂಟಿ ಇರೋ ಕೆಲಸ ಬೇಡವೇ ಬೇಡ ಎಂದು ಕೇಲವೊಂದು ಬಾರಿ ಅವರಿಗೂ ಅನಿಸಿದುಂಟು.

ಆದರೆ ಜೀವನ ನಿರ್ವಹಣೆಗೆ ಕರ್ತವ್ಯ ಮಾಡಲೇ ಬೇಕಲ್ಲವೇ.

ಅದೇ ರೀತಿ ಇವರ ಕರ್ತವ್ಯ ಜವಾಬ್ದಾರಿ ಪ್ರಮುಖ ಅದರಂತೆ ಶನಿವಾರದಂದು ಜನಸ್ನೇಹಿ ಪೋಲಿಸ್ ನವರು, ಬೀಟ್ -13 ಹೆಬ್ಬಾಳ ಗ್ರಾಮಕ್ಕೆ ಭೇಟಿ ನೀಡಿ ಹುಲಿಗೆಮ್ಮ ಎಂಬ ಮಹಿಳೆಯಿಂದ ಕುಂದು ಕೊರತೆಗಳ ಮಾಹಿತಿಯನ್ನು ಪಡೆದುಕೊಂಡು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದರು.

ಹೆಬ್ಬಾಳ ಗ್ರಾಮಕ್ಕೆ ಆಗಮಿಸಿ ಮಹಿಳೆಯ ಸಮಸ್ಯೆಯನ್ನು ಆಲಿಸಿ ಗ್ರಾಮ ಪಂಚಾಯಿತಿ ಮುಖ್ಯಸ್ಥರಿಗೆ ಬಗೆಹರಿಸುವಂತೆ ದೂರವಾಣಿಯ ಮೂಲಕ ತಿಳಿಸಿದರು.

ಜನಸ್ನೇಹಿ ಪೊಲೀಸ್ ವಯೋವೃದ್ಧರಿಗೆ, ವಿಕಲಾಂಗರಿಗೆ ಅಸಹಾಯಕರಿಗೆ ವರದಾನವಾಗಿ ಪರಿಣಮಿಸಿದೆ ಎನ್ನುವುದು ಪ್ರಜ್ಞಾವಂತ ಜನತೆಯ ಅಭಿಪ್ರಾಯ.

19
104 views