logo

ರಕ್ತ ಸಂಗ್ರಹಣೆಯ ದಾಖಲೆಗೆ ದಿನಗಣನೆ ಆರಂಭ

ಚಿಕ್ಕಬಳ್ಳಾಪುರ : ಜು.೨೩ರ ರಕ್ತದಾನ ಶಿಬಿರದಲ್ಲಿ ವಿಶ್ವದಾಖಲೆ ಮಾಡುವ ಗುರಿ
ಚಿಕ್ಕಬಳ್ಳಾಪುರ ರಕ್ತದಾನಿಗಳ ರಾಜಧಾನಿಯಾಗಲಿ ಎಂದ


ಕೆವಿ ಶಿಕ್ಷಣ ಸಂಸ್ಥೆ ಗಳೆಂದರೆ ಚಿಕ್ಕಬಳ್ಳಾಪುರದ ಜನತೆಗೆ ಚಿರಪರಿಚಿತ. ಹಾಗಂತ ಇದು ಪೋಷಕರನ್ನ ಸುಲಿಗೆ ಮಾಡೋ ಶಿಕ್ಷಣಸಂಸ್ಥೆಯಾಗಿ ಪ್ರಖ್ಯಾತಿ ಪಡೆದಿಲ್ಲ, ಬದಲಿಗೆ ಸಮಾಜ ಸೇವೆಯ ಮೂಲಕ ಖ್ಯಾತಿ ಪಡೆದಿದೆ. ಹೌದು, ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ರಾದ ಸಿವಿ. ವೆಂಕಟರಾಯಪ್ಪನವರು ಚಿಕ್ಕಬಳ್ಳಾಪುರವನ್ನು ಶಿಕ್ಷಣ ನಗರವಾಗಿ ಮಾಡಲು ಪಣ ತೊಟ್ಟು ಸಂಸ್ಥೆಯನ್ನು ಆರಂಭಿಸಿದರೆ, ಕೆ.ವಿ. ನವೀನ್ ಕಿರಣ್ ಅವರು ಅದೇ ಶಿಕ್ಷಣಸಂಸ್ಥೆಗಳನ್ನ ಸಮಾಜ ಸೇವೆಗೆ ಒಡ್ಡುವ ಮೂಲಕ ಮತ್ತಷ್ಟು ಪ್ರಖ್ಯಾತಿಗೆ ಪಾತ್ರರಾಗಿದ್ದಾರೆ.

ಇಂತಹ ಕೆವಿ ಕ್ಯಾಂಪಾಸ್‌ಲ್ಲಿ ಸಿವಿವಿ ದತ್ತಿ ಜಯಂತಿ, ದತ್ತಿ ದಿನಾಚರಣೆ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಜು.೨೩ ರಂದು ಮೆಗಾ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಕನಿಷ್ಟ ೪ ಸಾವಿರ ಯೂನಿಟ್ ರಕ್ತ ಸಂಗ್ರಹಿಸುವ ಗುರಿಹೊಂದಲಾಗಿದೆ. ನಗರ ಹೊರವಲಯದ ಕೆವಿ ಕ್ಯಾಂಪಾಸ್ ಕ್ರೀಡಾಂಗಣದಲ್ಲಿ ಜು.೩೦ರಂದು ನಡೆಯಲಿರುವ ಸಿ.ವಿ ವೆಂಕಟರಾಯಪ್ಪನವರ ೨೯ನೇ ದತ್ತಿ ದಿನಾಚರಣೆ ಅಂಗವಾಗಿ ಪತ್ರಕರ್ತರಿಗಾಗಿಯೇ ಹಮ್ಮಿಕೊಂಡಿದ್ದ ಕ್ರೀಡಾಕೂಟದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನವೀನ್ ಕಿರಣ್ ಚಿಕ್ಕಬಳ್ಳಾಪುರ ರಕ್ತದಾನಿಗಳ ರಾಜ ದಾನಿ ಯಾಗಲಿ ಎಂದು ಕರೆ ನೀಡಿದರು.

ದತ್ತಿ ಜಯಂತಿ ಅಂಗವಾಗಿ ೨೦೦೨ ರಲ್ಲಿ ರಾಷ್ಟ್ರೋತ್ಥಾನ ಪರಿಷತ್ ಸಹಕಾರದಲ್ಲಿ ಪ್ರಾರಂಭವಾದವಾದ ರಕ್ತದಾನ ಶಿಬಿರ ಮೊದಲ ಬಾರಿಗೆ ಕೇವಲ ೨೫ ಯೂನಿಟ್ ಸಂಗ್ರಹದಿAದ ಆರಂ`Àವಾಯಿತು. ಕಳೆದೆರಡು ವರ್ಷಗಳಿಂದ ೨ ಸಾವಿರ ಯೂನಿಟ್ ತಲುಪಿದೆ. ಆ ಮೂಲಕ ರಕ್ತದಾನದ ಕ್ರಾಂತಿಯನ್ನುAಟು ಮಾಡುತ್ತಿದೆ. ಜು.೨೩ ರಂದು ನಡೆಯುವ ರಕ್ತದಾನ ಶಿಬಿರದಲ್ಲಿ ಕನಿಷ್ಟ ೪ ಸಾವಿರ ಯೂನಿಟ್ ರಕ್ತ ಸಂಗ್ರಹವಾಗಲಿದೆ ಎಂದು ನವೀನ್ ಕಿರಣ್ ವಿಶ್ವಾಸ ವ್ಯಕ್ತಪಡಿಸಿದರು.

ಜಿ¯್ಲೆ ರಕ್ತದಾನಿಗಳ ರಾಜ`Áನಿಯಾಗುತ್ತಿದ್ದು, ರಕ್ತ ಸಂಗ್ರಹದಲ್ಲಿ ಚಿಕ್ಕಬಳ್ಳಾಪುರ ವಿಶ್ವ ದಾಖಲೆ ಬರೆಯಲಿದೆ. ಜುಲೈ ೨೩ಕ್ಕೆ ನಡೆಯಲಿರುವ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಸಂಘಸAಸ್ಥೆಗಳು, ಸಿನಿಮಾ ನಟರು, ಉದ್ಯಮಿಗಳು ವೀಡಿಯೋ ಮೂಲಕ ರಕ್ತದಾನಕ್ಕೆ ಪ್ರೋತ್ಸಾಹ ನೀಡಿರುವುದು ಸಂತಸ ತಂದಿದೆ, ಕಳೆದ ಎರಡೂವರೆ ತಿಂಗಳಿದ ಶಿಕ್ಷಣಸಂಸ್ಥೆಗಳ ೪೦೦ಕ್ಕೂ ಹೆಚ್ಚು ಸಿಬ್ಬಂದಿ ಪ್ರತಿನಿತ್ಯ ಶ್ರಮಿಸಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ೧೪ ಸಾವಿರಕ್ಕೂ ಹೆಚ್ಚು ಜನ ಆನ್‌ಲೈನ್ ಮೂಲಕ ರಕ್ತದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ, ಈ ಮೂಲಕ ರಕ್ತಾದನದಲ್ಲಿ ಕ್ರಾಂತಿ ನಡೆಯುತ್ತಿದೆ, ನೋಂದಣಿ ಮಾಡಿಕೊಂಡ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದರು.

೭ ಸಾವಿರ ಮಂದಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಲಾಗಿದೆ, ರಕ್ತದಾನ ಶಿಬಿರದ ಸ್ಥಳದಲ್ಲಿ ರಕ್ತದಾನಿಗಳು ಕಾಯುವ ಸ್ಥಿತಿ ಇಲ್ಲದಂತೆ ಈ ಬಾರಿ ಕ್ರಮ ವಹಿಸಲಾಗಿದೆ, ೨೫೦ ಹಾಸಿಗೆಗಳ ವಿಶಾಲ ಜಾಗವನ್ನು ಸಿದ್ಧಪಡಿಸಲಾಗಿದೆ, ಎಲ್ಲರೂ ಬಂದು ರಕ್ತದಾನ ಮಾಡುವಂತೆ ಮನವಿ, ೨೦೧೨ರಿಂದ ಈವರೆಗೂ ೮,೫೦೦ ಯೂನಿಟ್‌ಗೂ ಹೆಚ್ಚು ರಕ್ತ ಶೇಖರಣೆ ಮಾಡಲಾಗಿದೆ. ೨೦೨೪ರಲ್ಲಿ ೨,೧೪೬ ಯೂನಿಟ್ ರಕ್ತ ಸಂಗ್ರಹ ಮಾಡಲಾಗಿದೆ. ಜೀವ ಉಳಿಸುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಲು ಅವರು ಮನವಿ ಮಾಡಿದರು.

16
700 views