logo

ಕುಡುಕರ ಕಾಟಕ್ಕೆ ಬೇಸತ್ತ ಮಹಿಳೆಯರು ಬಾರ್ ಮುಂದೆ ಪ್ರತಿಭಟನೆ.

ಗೌರಿಬಿದನೂರು : ತಾಲ್ಲೂಕಿನ ತರಿದಾಳು ಗ್ರಾಮದಲ್ಲಿ ಎಂ, ಎಸ್, ಐ,ಎಲ್ ಬಾರ್ ನಿಂದ ಗ್ರಾಮಸ್ಥರಿಗೆ ಹಾಗು ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮದ ಮಹಿಳೆಯರು ಬಾರನ್ನು ಬಂದ್ ಮಾಡಿ ಗುರುವಾರ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿರುವ ಎಂ,ಎಸ್, ಐ,ಎಲ್ ಬಾರ್ ಸರ್ಕಾರಿ ಶಾಲೆ ಪಕ್ಕದಲ್ಲೇ ಇರುವುದರಿಂದ ಪ್ರತಿದಿನ ಶಾಲಾ ಮಕ್ಕಳು, ಮಹಿಳೆಯರು, ಮತ್ತು ವಿದ್ಯಾರ್ಥಿನಿಯರು ಇದೇ ರಸ್ತೆಯಲ್ಲಿ ಓಡಾಡುತ್ತಾರೆ, ಇಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಕುಡಿದು ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ.

ವಿದ್ಯಾರ್ಥಿನಿಯರು ಶಾಲೆಯಿಂದ ಮನೆಗೆ ಬರಲು ಭಯಪಡುತ್ತಿದ್ದಾರೆ, ಮನೆಯವರಿಗೆ ಕರೆ ಮಾಡಿ ಕರೆದುಕೊಂಡು ಹೋಗಲು ಹೇಳುತ್ತಾರೆ, ಕಳೆದ ಮೂರು ವರ್ಷಗಳಲ್ಲಿ ಕುಡಿದು ಸಣ್ಣ ವಯಸ್ಸಿನ 20 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಅನೇಕ ಬಾರಿ ಸಂಭಂದಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಸಹ ಯಾವುದೇ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸುತ್ತಿಲ್ಲ, ಆದುದರಿಂದ ಗ್ರಾಮದ ಎಲ್ಲಾ ಮಹಿಳೆಯರು, ರೊಚ್ಚಿಗೆದ್ದು ಇಲ್ಲಿರುವ ಬಾರನ್ನು ಮುಚ್ಚಿಸ ಬೇಕೆಂದು ತೀರ್ಮಾನಿಸಿ, ಬಾರ್ ಮುಂದೆ ಪ್ರತಿಭಟನೆ ಮಾಡಿ ಮಹಿಳೆಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

94
10452 views