logo

ರೇಮಂಡ್ಸ್ ಕಾರ್ಮಿಕರಿಂದ ಸೂಪರ್ವೈಸರ್ ಮಾಲಾ ನಡೆಯನ್ನು ಖಂಡಿಸಿ ಪ್ರತಿಭಟನೆ.

ಗೌರಿಬಿದನೂರು:ನಗರದ ಹೊರವಲಯದಲ್ಲಿರುವ ರೈಮೆಂಡ್ಸ್ ಕಾರ್ಖಾನೆ ಕಾರ್ಮಿಕರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಕಾರ್ಮಿಕರು ಕಾರ್ಖಾನೆಯ ಆವರಣದಲ್ಲಿ ಪ್ರತಿಭಟನೆಯನ್ನು ಮುಂದುವರಿಸಿದರು.

ಮುಷ್ಕರ ನಿರತ ಕಾರ್ಮಿಕರನ್ನು ಉದ್ದೇಶಿಸಿ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಸಿದ್ದಗಂಗಪ್ಪ ಮಾತನಾಡುತ್ತಾ, ಸರ್ಕಾರ ಕಾರ್ಮಿಕರಿಗೆ 10 ಗಂಟೆ ಕೆಲಸ ಮಾಡಿ ವಾರದಲ್ಲಿ ಎರಡು ದಿನ ರಜೆ ಪಡೆಯಿರಿ ಎಂಬ ಅವೈಜ್ಞಾನಿಕ ನೀತಿಯನ್ನು ಜಾರಿ ಮಾಡಲು ಮುಂದಾಗಿರುವುದನ್ನು ತೀವ್ರವಾಗಿ ಖಂಡಿಸಿದ ಅವರು 8 ಗಂಟೆ ಕೆಲಸ ಉಳಿದ ಸಮಯ ಮನೆ ಕೆಲಸ ಮಾಡಬೇಕು ಎಂದು ಕಾರ್ಮಿಕ ಇಲಾಖೆಯ ಸುತ್ತೋಲೆ ಇದೆ, ಆದರೆ ಇವರ ಲಾಭಕ್ಕಾಗಿ ಸಮಯ ಹೆಚ್ಚಿಸಿ, ಕಾರ್ಮಿಕರ ಶೋಷಣೆ ನಡೆಸುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಇದ್ದಂತೆ ಎಂಟು ಗಂಟೆ ಕೆಲಸದ ಅವದಿಯನ್ನೇ ಮುಂದುವರಿಸಬೇಕು ಮತ್ತು ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ಕಾರ್ಮಿಕ ಇಲಾಖೆಯ ನೀರಿಕ್ಷಕ ಸತೀಶ್ ಅವರು ಮಾತನಾಡಿ ಕಾರ್ಮಿಕರ ಏನೇ ಸಮಸ್ಯೆ ಇದ್ದರೂ ಕಾರ್ಮಿಕ ಇಲಾಖೆಗೆ ದೂರು ನೀಡಿ,
8 ಗಂಟೆ ಮೇಲೆ ಕಾರ್ಖಾನೆಯಲ್ಲಿ ಕೆಲಸ ಮಾಡಿಸಿದರೆ ಅದಕ್ಕೆ ಪ್ರತ್ಯೇಕ ಭತ್ಯ ನೀಡಬೇಕು ಅದು ನಿಮ್ಮ ಹಕ್ಕು,ನಾವು ಮೇಲಾಧಿಕಾರಿಯೊಂದಿಗೆ ಮಾತನಾಡಿ ನಿಮ್ಮ ಭತ್ಯ ನೀಡಲು ಶಿಪಾರಸ್ಸು ಮಾಡುವೆ ಎಂದರು.

ಪ್ರತಿಭಟನಾ ಸ್ತಳಕ್ಕೆ ತಹಶಿಲ್ದಾರ್ ಅರವಿಂದ್ ಆಗಮಿಸಿ ಮುಷ್ಕರ ನಿರತ ಕಾರ್ಮಿಕರ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ಕಾರ್ಮಿಕರ ಜೊತೆ ಚರ್ಚಿಸಿ ನಂತರ ಕಾರ್ಖಾನೆಯ ಆಡಳಿತದವರನ್ನು ಸ್ತಳಕ್ಕೆ ಕರೆಸಿ,ಕಾರ್ಮಿಕರ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕೆಂದು ಸೂಚಿಸಿದರು.

ಕಾರ್ಖಾನೆಯ ಆಡಳಿತ ಮಂಡಳಿ ನೀಡಿದ ಭರವಸೆಯಂತೆ ಕಾರ್ಮಿಕರು ಮಷ್ಕರವನ್ನು ತಾತ್ಕಾಲಿಕವಾಗಿ ಕೈಬಿಟ್ಟು ಕಾರ್ಖಾನೆಯ ಕೆಲಸಕ್ಕೆ ಹಾಜರಾದರು.
ಈ ಸಂಧರ್ಭದಲ್ಲಿ ವೃತ್ತ ನಿರೀಕ್ಷಕ ಕೆಪಿ ಸತ್ಯನಾರಾಯಣ ಹಾಗು ಪೊಲೀಸರು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೋಲಿಸ್ ಬಂದೋಬಸ್ತು ಏರ್ಪಡಿಸಿದ್ದರು.

65
7341 views