logo

ಬ್ಯಾಡಗಿ ರೋಟರಿ ಮತ್ತು ಇನ್ನರ್ವಿಲ್ ಕ್ಲಬ್ ಪದಗ್ರಹಣ ಯಶಸ್ವಿ

ಪಟ್ಟಣದ ಸ್ಥಳೀಯ ರೋಟರಿ ಕ್ಲಬ್ ಬ್ಯಾಡಗಿ ಮತ್ತು ಇನ್ನರ್ ವ್ಹೀಲ್ ಕ್ಲಬ್ ಬ್ಯಾಡಗಿ 2025.26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪ ಬ್ಯಾಡಗಿಯಲ್ಲಿ ನಡೆಯಿತು. ಸಮಾರಂಭದಲ್ಲಿ ಮಹಾರಾಷ್ಟ್ರ ಈಚಲಕಾರಂಜಿಯಿಂದ ಆಗಮಿಸಿದ್ದ ಡಿಸ್ಟ್ರಿಕ್ಟ್ 3170 ದ ಗವರ್ನರ ಅರುಣ ಭಂಡಾರೆ ಅವರು ರೋಟರಿ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಮಾಡಿಸಿದರು. ಅನಿಲಕುಮಾರ ಬೊಡ್ಡಪಾಟಿ ರೋಟರಿ ಅಧ್ಯಕ್ಷರಾಗಿ ನಿರಂಜನ ಶೆಟ್ಟಿಹಳ್ಳಿ ಕಾರ್ಯದರ್ಶಿಯಾಗಿ ಮತ್ತು ಇನ್ನರ್ವಿಲ್ ಅಧ್ಯಕ್ಷರಾಗಿ ಪ್ರತಿಭಾ ಮೇಲಗಿರಿ ಕಾರ್ಯದರ್ಶಿಯಾಗಿ ಲಕ್ಷ್ಮೀ ಉಪ್ಪಾರ ಪ್ರಮಾಣ ವಚನ ಸ್ವೀಕರಿಸಿದರು ಹಾವೇರಿಯ ವಿರಾಜ ಕೋಟಕ ಇನ್ನರ್ ವ್ಹೀಲ್ ಡಿಸ್ಟ್ರಿಕ್ಟ್ ಟ್ರೆಸುರರ್ ಅವರಿಂದ ಅಧಿಕಾರ ಹಸ್ತಾಂತರ ಸ್ವೀಕರಿಸಿದರು. ರಾಣೆಬೆನ್ನೂರಿನ ಡಾ. ಬಸವರಾಜ ಕೆಲಗಾರ ಉದ್ಘಾಟನೆ ನಡೆಸಿದರು ಅಸಿಸ್ಟೆಂಟ್ ಗವರ್ನರ ದಯಾನಂದ ಯಡ್ರಾಮಿ ಮುಖ್ಯ ಅತಿಥಿಗಳಾಗಿದ್ದರು. ನಂತರ ಸಮಾರಂಭವನ್ನು ಉದ್ದೇಶಿಸಿ ಡಿಸ್ಟ್ರಿಕ್ಟ್ ಗವರ್ನರ್ ಕ್ಲಬ್ ಗಳಿಗೆ ನೀಡಿದ ಗೋಲ್ಸ್ ಗಳನ್ನು ವಿವರಿಸಿದರು ತಮಗೆ ನೀಡಿದ ಗೋಲುಗಳನ್ನು ಸಾಧಿಸಲು ಅಧ್ಯಕ್ಷರಿಗೆ ಎಲ್ಲಾ ಸರ್ವ ಸದಸ್ಯರು ಸಹಾಯ ಸಹಕಾರ ನೀಡಿ ಕಬ್ಬಿನ ಹೆಸರು ತರುವಲ್ಲಿ ಸಕ್ರಿಯರಾಗಬೇಕೆಂದು ವಿನಂತಿಸಿದರು. ನಿಮ್ಮ ಕ್ಲಬ್ ಚಿಕ್ಕದಿದ್ದರೂ ಅದ್ದೂರಿಯಾಗಿ ಸಮಾರಂಭ ನಡೆಸಿದ್ದೀರಿ ನೂತನ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿ ಕ್ಲಬ್ಬಿನ ಪರವಾಗಿ ಉತ್ತಮ ದೊಡ್ದ ಮಟ್ಟದ ಸೇವಾ ಕಾರ್ಯಗಳನ್ನು ಮಾಡಿರಿ, ಡಿಸ್ಟ್ರಿಕ್ಟ್ ಸಹಾಯ ಪಡೆದು ದೊಡ್ಡ ಪ್ರಮಾಣದ ಗ್ಲೋಬಲ್ ಗ್ರಾಂಟ್ ಪಡೆದು ಪಟ್ಟಣದಲ್ಲಿ ದೊಡ್ಡ ದೊಡ್ಡ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಅದಕ್ಕೆ ಬೇಕಾದ ಅರ್ಧ ಮೊತ್ತ ರೋಟರಿ ಫೌಂಡೇಶನ್ ನೀಡುತ್ತದೆ, ಇನ್ನುಳಿದ ಅರ್ಧ ಮೊತ್ತಕ್ಕೆ ಸ್ಥಳೀಯ ದೊಡ್ಡ ದೊಡ್ಡ ಉದ್ಯಮಿಗಳ ಸಹಾಯ ಪಡೆಯಿರಿ ಎಂದು ತಿಳಿಸಿದರು. ಮಾಜಿ ಅಧ್ಯಕ್ಷ ಎಸ್ ಎಂ ಬೂದಿಹಾಳಮಠ ಅವಧಿಯಲ್ಲಿ 21 ಸದಸ್ಯರು ರೋಟರಿ ಫೌಂಡೇಶನ್ ಡೊನೇಶನ್ ನೀಡಿ ಪಾಲ್ ಹ್ಯಾರಿಸ್ ಫೆಲೋ ಗೌರವ ಪಡೆದಿದ್ದು ಅಭೂತಪೂರ್ವ ಬೆಳವಣಿಗೆ ಎಂದು ಶ್ಲಾಘಿಸಿ ಅದರ ಗೌರವ ಸರ್ಟಿಫಿಕೇಟ್ ಮತ್ತು ಪಿನ್ ಗಳನ್ನು ವಿತರಿಸಿದರು. ಒಂದು ಪಾಲ್ ಹ್ಯಾರಿಸ್ ಫೆಲೋ ಗೌರವ ಪಡೆಯಲು 1,000 ಯುಎಸ್ ಡಾಲರ್(86000₹)ಗಳನ್ನು ರೋಟರಿ ಫೌಂಡೇಶನ್ ಗೆ ಡೊನೇಟ್ ಮಾಡಬೇಕಾಗುತ್ತದೆ ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ಶರದ್ ಪೈ ಅವರ ಸಹಾಯದ ಅನುಪಾತದಲ್ಲಿ ಇಂತಹ 21 ಸದಸ್ಯರಿಂದ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ ಡೋನೇಶನ್ ಪಡೆದು ಒಂದೇ ವರ್ಷದಲ್ಲಿ 21 PHF ಗೌರವ ಪಡೆದಿರುವುದು ಹಾವೇರಿ ಜಿಲ್ಲೆಯಲ್ಲಿಯೇ ದೊಡ್ಡ ಸಾಧನೆ ಎಂದು ತಿಳಿಸಿದರು.
ನಂತರ ಅಧಿಕಾರ ಹಸ್ತಾಂತರ ಪಡೆದ ನೂತನ ಅಧ್ಯಕ್ಷ ಅನಿಲಕುಮಾರ ಮಾತನಾಡಿ ಹಿಂದಿನ ಎಲ್ಲಾ ಸದಸ್ಯರು ತಮ್ಮ ತಮ್ಮ ಅವಧಿಯಲ್ಲಿ ಅನೇಕ ಕೆಲಸ ಶ್ರೇಷ್ಠ ಸೇವಾ ಕಾರ್ಯಗಳನ್ನು ಮಾಡಿದ್ದಾರೆ ಅವರೆಲ್ಲರ ಮಾರ್ಗದರ್ಶನದೊಂದಿಗೆ ಸದಸ್ಯರ ಸಹಾಯ ಸಹಕಾರದೊಂದಿಗೆ ಹೆಚ್ಚು ವಿನೂತನ ದೊಡ್ಡ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಿವಕುಮಾರ್ ಕೆರೂಡಿ ಪ್ರಕಾಶ ಛತ್ರದ ಸಿದ್ಧಲಿಂಗೇಶ ಮಾಳೇನಹಳ್ಳಿ ರಮೇಶ ಕಲ್ಯಾಣಿ ಇವರು ನೂತನ ರೋಟರಿ ಸದಸ್ಯತ್ವ ಪ್ರಮಾಣ ಪತ್ರ ಸ್ವೀಕರಿಸಿದರು. ಅದೇ ರೀತಿಯಾಗಿ ಇನ್ನರ್ ವ್ಹೀಲ್ ಕಬ್ಬಿನ ನೂತನ ಅಧ್ಯಕ್ಷ ಪ್ರತಿಭಾ ಮೇಲಗಿರಿ ಅಧಿಕಾರ ಹಸ್ತಾಂತರ ಪಡೆದು ಮಾತನಾಡಿ ನಮ್ಮ ಸದಸ್ಯರ ಸಹಕಾರದೊಂದಿಗೆ ರೋಟರಿ ಸದಸ್ಯರ ಸಹಕಾರದೊಂದಿಗೆ ಅತಿಹೆಚ್ಚು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇನ್ನರ್ವಿಲ್ ಧೆಯೋದ್ದೇಶಗಳನ್ನು ಪೂರೈಸುತ್ತೇನೆ ಎಂದು ಆಶ್ವಾಸನೆ ನೀಡಿದರು. ಸಮಾರಂಭದಲ್ಲಿ ವಿಶೇಷವಾಗಿ ಪಿಎಸ್ಐ ಭಾರತಿ ಕುರಿ ಮಹಿಳಾ ಸಾಹಿತಿ ಶಕುಂತಲಾ ದಾಳೆರ ರೈಲ್ವೆ ಸ್ಟೇಷನ್ ಮಾಸ್ಟರ್ ಮಾಧವ್ರಾವ್ ಬಿ ಕೆ ನಿವೃತ್ತ ಮುಖ್ಯೋಪಾಧ್ಯಾಯ ಎನ್ ಎಂ ಉಮಾಪತಿ ಸಮಾಜಸೇವಕ ಪುಟ್ಟಪ್ಪ ಲಂಡಾಣಿ ಇವರಿಗೆ ಸನ್ಮಾನ ಸಮಾರಂಭ ಏರ್ಪಡಿಸಿದ್ದರು. ಸಮಾರಂಭದಲ್ಲಿ ಮಾಜಿ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ ಸ್ವಾಗತಿಸಿದರು ಮಾಲತೇಶ ಅರಳಿಮಟ್ಟಿ ಪ್ರಾಸ್ತಾವಿಕ ಮಾತನಾಡಿದರು ಸಂಧ್ಯಾರಾಣಿ ದೇಶಪಾಂಡೆ ನಿರೂಪಿಸಿದರು ಆನಂದಗೌಡ ಸೊರಟೂರ ವಂದಿಸಿದರು ಕಳೆದ ವರ್ಷದ ವಾರ್ಷಿಕ ವರದಿಗಳನ್ನು ನಿರಂಜನ ಶೆಟ್ಟಿಹಳ್ಳಿ ದ್ರಾಕ್ಷಾಯಿಣಿ ಅರಮಗಟ್ಟಿ ಮಂಡಿಸಿದರು ಬಸವರಾಜ ಸುಂಕಾಪುರ ಮತ್ತು ಡಾಕ್ಟರ್ ಎ ಎಂ ಸೌಧಾಗರ ಎಲ್ಲ ಅತಿಥಿಗಳ ಪರಿಚಯ ನೀಡಿದರು
ಈ ಸಂದರ್ಭದಲ್ಲಿ ರೋಟರಿ ಕ್ಲಬ್ಬಿನ ಸರ್ವ ಸದಸ್ಯರು ಇನ್ನರ್ ವ್ಹೀಲ್ ಕ್ಲಬ್ಬಿನ ಸರ್ವ ಸದಸ್ಯರು ಹಾವೇರಿ ಮತ್ತು ರಾಣೆಬೆನ್ನೂರು ರೋಟರಿ ಮತ್ತು ಇನ್ನರ್ವಿಲ್ ಕ್ಲಬ್ಬಿನ ಸದಸ್ಯರು ಅಭಿನಂದನೆ ಸಲ್ಲಿಸಲು ಆಗಮಿಸಿದ್ದರು

25
2585 views