logo

ವಿಚ್ಚೆಧನಕ್ಕೆ ಅರ್ಜಿ ಹಾಕಿದ್ದ ಐದು ಜೋಡಿಗಳನ್ನು ರಾಷ್ಟ್ರೀಯ ಲೋಕ ಅದಾಲತ್ತಿನಲ್ಲಿ ಒಂದುಗೂಡಿಸಿದ ನ್ಯಾಯಾಧೀಶರು.

ಗೌರಿಬಿದನೂರು : ವಿಚ್ಚೆನಕ್ಕಾಗಿ ಬಂದಿದ್ದ ದಂಪತಿಗಳನ್ನು ಹಿರಿಯ ಶ್ರೇಣಿ ನ್ಯಾಯಾಧೀಶೆ ಗೀತಾ ಕುಂಬಾರ್ ಒಂದುಗೂಡಿಸಿದರು.
ನಗರದ ಜೆಎಂಎಫ್‌ಸಿ ಕೋರ್ಟ್ ನಲ್ಲಿ, ಶನಿವಾರ ಕಾನೂನು ಪ್ರಾಧಿಕಾರ ಆದೇಶದಂತೆ ಏರ್ಪಡಿಸಲಾಗಿದ್ದ ಬೃಹತ್ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ, ವಿಚ್ಚೆದನಕ್ಕಾಗಿ ಬಂದಿದ್ದ 5 ದಂಪತಿಗಳನ್ನು ಒಂದು ಗೂಡಿಸಿ, ಮಾತನಾಡಿದ ಅವರು, ಕ್ಷಕಿದಾರ ಒಳಿತಿಗಾಗಿ ಬೃಹತ್ ಲೋಕ್ ಅದಾಲತ್ ಕಾರ್ಯಕ್ರಮವನ್ನು ನಿರಂತರವಾಗಿ ಕಾಲಕಾಲಕ್ಕೆ ಆಯೋಜನೆ ಮಾಡಲಾಗುತ್ತಿದೆ, ಕಕ್ಷಿದಾರರು ದ್ವೇಷ ಕೋಪ ಬದಿಗೊತ್ತಿ, ತಮ್ಮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಂಡಲ್ಲಿ ಮಾನವ ಸಂಭಂದ ಗಳು ಉಳಿಯುತ್ತದೆ ಎಂದು ತಿಳಿಸಿದರು.
ಇಂದು ಲೋಕದಾಲತ್‌ನಲ್ಲಿ 258 ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತ್ತು, ಇದರಿಂದ 12528460 ರೂಗಳನ್ನು ಸಂಗ್ರಹ ಮಾಡಲಾಯಿತು.
ಜೊತೆಗೆ ಬ್ಯಾಂಕ್ ಪ್ರಕರಣಗಳಾದ ಚೆಕ್ ಪ್ರಕರಣ ಗಳಲ್ಲಿ 4492547 ರೂಗಳನ್ನು ಸಂಗ್ರಹ ಮಾಡಲಾಯಿತು.
ಈ ಲೋಕ್ ಅದಾಲತ್‌ನಲ್ಲಿ ಪ್ರಧಾನ ನ್ಯಾಯಧೀಶ್ ಎನ್ ಗಣೇಶ್, ಹೆಚ್ಚುವರಿ ನ್ಯಾಯಧೀಶೆ ಪುಷ್ಟ, ವಕೀಲ ಸಂಘದ ಅಧ್ಯಕ್ಷ ದಿನೇಶ್, ಪ್ರಧಾನ ಕಾರ್ಯದರ್ಶಿ ಬಿ,ಲಿಂಗಪ್ಪ, ಸಂಧಾನಕಾರರಾಗಿ, ರೂಪ, ಚಲುವರಾಜು ನಾಗಾರಾಜ್, ನರಸಿಂಹಮೂರ್ತಿ, ಆದಿನಾರಾಯಣಗೌಡ ಎನ್, ರಂಗನಾಥ, ವಿ ಸಿ ಗಂಗಯ್ಯ, ಆರ್ ರಾಮಚಂದ್ರ ಎಚ್‌ಎಲ್ ವೆಂಕಟೇಶ್, ವಿಜಯಕುಮಾರ್, ಪಾರ್ಶನಾಥ್, ಗೋಪಾಲ್ ಮುಂತಾದವರು ಉಪಸ್ಥಿತರಿದ್ದರು

76
2375 views