
ನವೋದಯ ವಿದ್ಯಾನಿಕೇತನ ಶಿವಪುರ ಪ್ರಜಾಪ್ರಭುತ್ವ ಹಬ್ಬ
ಶಿವಪುರ, ಜುಲೈ 12:
ಶಿವಪುರದ ನವೋದಯ ವಿದ್ಯಾನಿಕೇತನ ಶಾಲೆ (ರಿ.) ಯಲ್ಲಿ 2025-26 ನೇ ಶೈಕ್ಷಣಿಕ ಸಾಲಿನ ಶಾಲಾ ಕೌನ್ಸಿಲ್ ಚುನಾವಣೆಗಳು ಉತ್ಸಾಹಭರಿತವಾಗಿ ನಡೆಯಿತು. ಬೆಳಗ್ಗೆ 10:30 ರಿಂದ 12:30ರವರೆಗೆ ಮತದಾನ ನಡೆಯಿದ್ದು, ಶೇ 99% ಮತದಾನದ ದಾಖಲೆ ಸೃಷ್ಟಿಯಾಯಿತು. ವಿದ್ಯಾರ್ಥಿಗಳು ವಿವಿಧ ಹುದ್ದೆಗಳಿಗಾಗಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಉತ್ಸಾಹದಿಂದ ಮತ ಹಾಕಿದರು.
ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಶ್ರೀಮತಿ ಭವ್ಯ ವೀರೇಗೌಡ, ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಮಧುಕುಮಾರ್, ಹೆಡ್ ಮಾಸ್ಟರ್ ಶ್ರೀ ರವಿ ಕುಮಾರ್ ಟಿ.ಹೆಚ್, ಶಿಕ್ಷಕ ವರ್ಗದವರು, ಬೋಧಕೇತರ ಸಿಬ್ಬಂದಿ, ಚಾಲಕರು ಹಾಗೂ ಇತರರು ಮತದಾನದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಮತ್ತಷ್ಟು ವಿಶೇಷಗೊಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಯದರ್ಶಿ ಭವ್ಯ ವೀರೇಗೌಡ, ಶಾಲೆಯಲ್ಲಿ ಇಂತಹ ಚುನಾವಣೆಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ನಾಯಕತ್ವ ಗುಣಗಳು ಬೆಳೆಸಲು ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ. ಸ್ಪರ್ಧಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ಮತ್ತು ಕೆಲವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ವಿದ್ಯಾರ್ಥಿಗಳು, ಇಂತಹ ಚುನಾವಣೆಗಳಲ್ಲಿ ಭಾಗವಹಿಸುವುದರಿಂದ ಪ್ರಜಾಪ್ರಭುತ್ವದ ಪಾಠವನ್ನು ನೇರವಾಗಿ ಕಲಿಯಲು ಸಾಧ್ಯವಾಯಿತು ಎಂದರು.
ಚುನಾವಣೆಗಳು ಜವಾಬ್ದಾರಿಯುತ ಮತದಾನ ಹಾಗೂ ಉತ್ಸಾಹಪೂರ್ಣ ಪ್ರಚಾರದೊಂದಿಗೆ ಶಾಂತಿಯುತವಾಗಿ ನೆರವೇರಿದ್ದು, ವಿದ್ಯಾರ್ಥಿ ಸ್ವಯಂ ಆಡಳಿತಕ್ಕೆ ಸುಂದರ ಮಾದರಿ ಸೃಷ್ಟಿಸಿವೆ. ಚುನಾವಣೆ ಫಲಿತಾಂಶವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದ.