ಗುರುಪೂರ್ಣಿಮೆ ಅಂಗವಾಗಿ ಆವಣಿ ಗ್ರಾಮದ ಗುರು ಆದಿ ಜಾಂಬುವಂತ ಸ್ವಾಮಿಗೆ ವಿಶೇಷ ಪೂಜೆ
ಗುರುಪೂರ್ಣಿಮೆ
ಮುಳಬಾಗಿಲು, ಜುಲೈ 10:
ಗುರುಪೂರ್ಣಿಮೆ ಪ್ರಯುಕ್ತ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಆವಣಿ ಗ್ರಾಮದ ಬೆಟ್ಟದಲ್ಲಿ ನೆಲೆಸಿರುವ ಶ್ರೀ ಗುರು ಆದಿ ಜಾಂಬುವಂತ ಸ್ವಾಮಿಗೆ ಇಂದು ವಿಶೇಷ ಪೂಜೆ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆಯಿಂದಲೇ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಬೆಟ್ಟದ ಮೆಟ್ಟಿಲು ಏರಿ ಸ್ವಾಮಿಯ ದರ್ಶನ ಪಡೆದರು.
ಟ್ರಸ್ಟ್‌ನ ಪದಾಧಿಕಾರಿಗಳಾದ ಕೃಷ್ಣಪ್ಪ, ಮುನಿ ಗಂಗಪ್ಪ ಹಾಗೂ ಇತರ ಪ್ರಮುಖರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಪೂಜೆ ಹಾಗೂ ಅನ್ನದಾನ ಕಾರ್ಯಕ್ರಮಗಳನ್ನು ನಡೆಸಿದರು. ಭಕ್ತರಲ್ಲಿ ಭಕ್ತಿ ಭಾವನೆ ಉಲಭಿಸುತ್ತ, ಆಧ್ಯಾತ್ಮಿಕ ವಾತಾವರಣ ಮೂಡಿತ್ತು.
ಟ್ರೇಸ್ಟ್ ಪದಾಧಿಕಾರಿಗಳ ಸಹಕಾರದೊಂದಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.