ಉಚಿತ ನೇತ್ರ ತಪಾಸಣೆ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಅಧ್ಯಕ್ಷ ಅನಿಲಕುಮಾರ ಬೊಡ್ಡಪಾಟಿ
ಇಂದು ಬ್ಯಾಡಗಿ ಪಟ್ಟಣದ ಕದರಮಂಡಲಗಿ ರಸ್ತೆಯಲ್ಲಿರುವ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರ ಸ್ನೇಹ ಸದನದಲ್ಲಿ ರೋಟರಿ ಕ್ಲಬ್ ಬ್ಯಾಡಗಿ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಮತ್ತು ಜಿಲ್ಲಾ ಅಂದತ್ವ ನಿವಾರಣ ಕಾರ್ಯಕ್ರಮದ ಅಡಿಯಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಯಶಸ್ವಿಯಾಗಿ ನಡೆಯಿತು. ಇಂದಿನ ಶಿಬಿರದಲ್ಲಿ ಒಟ್ಟು 75 ಸಾರ್ವಜನಿಕರು ಕಣ್ಣಿನ ತಪಾಸಣೆ ಮಾಡಿಸಿಕೊಂಡರು, 10 ಜನರಿಗೆ ಕನ್ನಡಕ ವಿತರಿಸಲಾಯಿತು ಜೊತೆಗೆ 41 ಶಿಬಿರಾರ್ಥಿಗಳನ್ನು ಶಸ್ತ್ರ ಚಿಕಿತ್ಸೆಗೆ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಗೆ ಕಳಿಸಿಕೊಡಲಾಯಿತು ಎಂದು ಬ್ಯಾಡಗಿ ರೋಟರಿ ಸಂಸ್ಥೆಯ ಮಾಜೀ ಅಧ್ಯಕ್ಷ ಮಂಜುನಾಥ ಉಪ್ಪಾರ ಅವರು ಮಾಹಿತಿ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಸ್ನೇಹ ಸದನದ ನಿರ್ದೇಶಕಿ ಸಿಸ್ಟರ್ ರೂಪ ಮತ್ತು ಸಿಬ್ಬಂದಿ ವರ್ಗದವರು, ರೋಟರಿ ಸಂಸ್ಥೆಯ ಅಧ್ಯಕ್ಷ ಅನಿಲಕುಮಾರ ಬೊಡ್ಡಪಾಟಿ ಮಾಜಿ ಅಧ್ಯಕ್ಷ ಮಂಜುನಾಥ ಉಪ್ಪಾರ, ಜಂಟಿ ಕಾರ್ಯದರ್ಶಿ ಕಿರಣ ಮಾಳೆನಹಳ್ಳಿ ಮತ್ತು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಡಾ.ಸುನೀಲ ಮಾಂಡ್ರೆ, ಡಾ.ಪ್ರಕಾಶ ಸಿಂಗಾಪುರ, ಸ್ಟಾಫ್ ನರ್ಸ್ ಪೃಥ್ವಿರಾಜ್,
ಮೌನೇಶ ಬಡಿಗೇರ ಹಾಗೂ ಸಿಬ್ಬಂದಿ ವರ್ಗದವರು, ಉಪಸ್ಥಿತರಿದ್ದರು