logo

ಎನ್ಎಸ್ಎಸ್ ಸ್ವಯಂ ಸೇವಕರಿಂದ ಕಲ್ಯಾಣಿ ಸ್ವಚ್ಛಸೇವಾ ಕಾರ್ಯ

ದೇವನಹಳ್ಳಿ: ಕಲ್ಯಾಣಿಗಳ ಪುನ ಶ್ಚೇತನವೆಂದರೆ ನಮ್ಮ ಪುರಾತನ ಜಲ ಸಂಸ್ಕೃತಿ ಯ ಮೌಲ್ಯವನ್ನು ಪ್ರತಿ ಬಿಂಬಿಸುವ ಮಹತ್ವದ ಹೆಜ್ಜೆ ಎಂದು ಬೆಂಗಳೂರಿನ ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌರವ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ.ವುಡೇ ಪಿ.ಕೃಷ್ಣ ತಿಳಿಸಿದರು.

ತಾಲೂಕಿನ ಬೊಮ್ಮವರ ಗ್ರಾಮದ ಪುರಾತನ ಶ್ರೀ ಸುಂದರೇಶ್ವರ ದೇವಾಲಯದ ಆವರಣದಲ್ಲಿನ 600 ವರ್ಷದ ಹಳೆಯ ಕಲ್ಯಾಣಿಗೆ ಯಲಹಂಕ ಉಪನಗರದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದ 'ಪ್ರಕೃತಿ ಫಾಲ್ಸ್ ಸ್ವಯಂಸೇವಕರ ತಂಡದವರಿಂದ ಭಾರತ ಸರಕಾರದ ಯುವ ವ್ಯವಹಾರಗಳ ಇಲಾಖೆ, ಬೆಂಗಳೂರಿನ ಎನ್ಎಸ್ಎಸ್ ಪ್ರಾದೇಶಿಕ ಕೇಂದ್ರ, ಕರ್ನಾಟಕ ರಾಜ್ಯ ಎನ್‌ಎಸ್‌ಎಸ್ ಕೋಶ ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇವು ಕೇವಲ ನೀರಿನ ಶೇಖರಣೆ ಮಾತ್ರವಲ್ಲ ದೇವರಭಕ್ತಿಯ ತಾಣಗಳಾಗಿ ಕೂಡ ಕಾರ್ಯ ನಿರ್ವಹಿಸುತ್ತವೆ ಅಂತಹ ಪುರಾತನ ಕಾಲದ ಕಲ್ಯಾಣಿಗೋಳನ್ನು ಶ್ರಮದಾನ ಮುಖಾಂತರ ಸ್ವಚ್ಛಗೊಳಿಸುವ ಕಾಯಕಕ್ಕೆ ಮುಂದಾಗಿರುವ ಎನ್ಎಸ್ಎಸ್ ಸ್ವಯಂಸೇವಕರ ನಿಷ್ಠೆ ಮತ್ತು ಸೇವಾ ಮನೋಭಾವನೆ ಯು ಶ್ಲಾಘನೀಯ ವಾದದ್ದು ಎಂದರು.

ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎನ್. ವೆಂಕಟೇಶ್ ಮಾತನಾಡಿ, ಸ್ಥಳೀಯ ಗ್ರಾಮಸ್ಥರು ಹಾಗೂ ದೇವಲಯ ಸಮಿತಿಯ ಸಹಕಾರ ಈ ಕಾರ್ಯಾಚರಣೆಗೆ ಮತ್ತಷ್ಟು ಬಲ ನೀಡಿದೆ ಹಾಗೂ ಪುನಶ್ಚೇತನ ಗೊಂಡ ಕಲ್ಯಾಣಿ ಯು ಇದೀಗ ಸ್ಥಳೀಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೇಂದ್ರ ಬಿಂದು ವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಪ್ರೊ.ವಿವೇಕಾನಂದ, ಗ್ರಾಪಂ ಪಿಡಿಒ ಹೆಚ್.ಸಿ.ಬೀರೇಶ್, ಸದಸ್ಯರಾದ ಮಂಜುನಾಥ್, ರಾಮಮೂರ್ತಿ, ಎನ್ಎಸ್ಎಸ್ ಅಧಿಕಾರಿ ನವೀನ್ ಕುಮಾರ್, ಪ್ರಕೃತಿ ಫಾಲ್ಸ್ ಮತ್ತು ಎನ್ಎಸ್ಎಸ್ ಸ್ವಯಂ ಸೇವಕರು, ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ ಮುಂತಾದವರು ಹಾಜರಿದ್ದರು.

ಚಿತ್ರ:

4
176 views